ETV Bharat / sports

ಐಪಿಎಲ್​ನಲ್ಲಿ ಚೀನಾ ಮೊಬೈಲ್​ ಕಂಪನಿಯ ಪ್ರಾಯೋಜಕತ್ವ ಮುಂದುವರಿಕೆ.. ಓಮರ್​ ಅಬ್ದುಲ್ಲಾ ಕಿಡಿ - ಇಂಡಿಯನ್ ಪ್ರೀಮಿಯರ್​ ಲೀಗ್​

ಮತ್ತೊಂದು ಟ್ವೀಟ್​ನಲ್ಲಿ ಬಿಸಿಸಿಐ ಆಡಳಿತ ಮಂಡಳಿ ಚೀನಾದ ಪ್ರಾಯೋಜಕತ್ವವನ್ನು ಮುಂದುವರಿಸಲು ಬಯಸಿದೆ. ಆದರೆ, ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನದಲ್ಲಿ ಚೀನಾದ ಟಿವಿಗಳನ್ನು ತಮ್ಮ ಬಾಲ್ಕನಿಯಿಂದ ಎಸೆದ ಮೂರ್ಖರನ್ನು ನೆನೆದರೆ ನನಗೆ ದುಃಖವಾಗುತ್ತಿದೆ..

ಓಮರ್​ ಅಬ್ದುಲ್ಲಾ
ಓಮರ್​ ಅಬ್ದುಲ್ಲಾ
author img

By

Published : Aug 3, 2020, 3:56 PM IST

ಶ್ರೀನಗರ : ಲಡಾಖ್‌ ಘರ್ಷಣೆಯ ನಂತರ ದೇಶದಲ್ಲಿ ಚೈನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ನಡೆಯುತ್ತಿದ್ರೆ, ಇತ್ತ ಬಿಸಿಸಿಐ ಐಪಿಎಲ್​ನಲ್ಲಿ ಚೀನಾದ ಪ್ರಾಯೋಜಕತ್ವವನ್ನು ಮುಂದುವರಿಸಿರುವುದಕ್ಕೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಚೀನಾ ವಸ್ತುಗಳನ್ನು ಬಹಿಷ್ಕರಿಸೋಣ ಎಂದು ಜನರಿಗೆ ಹೇಳುತ್ತಿದ್ರೆ, ಮತ್ತೊಂದು ಕಡೆ ಐಪಿಎಲ್​ ಚೀನಾದ ಮೊಬೈಲ್‌ ಕಂಪನಿಯ ಪ್ರಾಯೋಜಕತ್ವವನ್ನು ಮುಂದುವರಿಸಲು ಬಯಸಿದೆ. ಚೀನಾವನ್ನು ನಿಯಂತ್ರಿಸುವುದು ಹೇಗೆ ಎಂಬ ಗೊಂದಲದ್ದಲ್ಲಿದ್ದೇವೆ. ಪರಿಸ್ಥಿರಿ ಹೀಗಿರುವಾಗ ಚೀನಾ ನಮ್ಮನ್ನು ಅಪಹಾಸ್ಯ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ" ಎಂದು ಓಮರ್​ ಕಿಡಿಕಾರಿದ್ದಾರೆ.

  • Chinese cellphone makers will continue as title sponsors of the IPL while people are told to boycott Chinese products. It’s no wonder China is thumbing it’s nose at us when we are so confused about how to handle Chinese money/investment/sponsorship/advertising.

    — Omar Abdullah (@OmarAbdullah) August 2, 2020 " class="align-text-top noRightClick twitterSection" data=" ">

ಮತ್ತೊಂದು ಟ್ವೀಟ್​ನಲ್ಲಿ ಬಿಸಿಸಿಐ ಆಡಳಿತ ಮಂಡಳಿ ಚೀನಾದ ಪ್ರಾಯೋಜಕತ್ವವನ್ನು ಮುಂದುವರಿಸಲು ಬಯಸಿದೆ. ಆದರೆ, ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನದಲ್ಲಿ ಚೀನಾದ ಟಿವಿಗಳನ್ನು ತಮ್ಮ ಬಾಲ್ಕನಿಯಿಂದ ಎಸೆದ ಮೂರ್ಖರನ್ನು ನೆನೆದರೆ ನನಗೆ ದುಃಖವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಚೀನಾದ ವಿವೋ ಕಂಪನಿ ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕನ್ನು ಪಡೆದುಕೊಂಡಿದೆ. ಬಿಸಿಸಿಐ ವಾರ್ಷಿಕವಾಗಿ ಈ ಒಪ್ಪಂದದಿಂದ 440 ಕೋಟಿ ರೂ. ಆದಾಯ ಗಳಿಸುತ್ತಿದೆ. ಇದೀಗ ಈ ತಕ್ಷಣ ಇರುವ ಕಡಿಮೆ ಸಮಯದಲ್ಲಿ ಹೊಸ ಪ್ರಾಯೋಜಕರು ಸಿಗುವುದು ಕಷ್ಟವಾದ್ದರಿಂದ ತಾವು ಚೀನಾ ಕಂಪನಿಯ ಪ್ರಾಯೋಜಕತ್ವವನ್ನು ಮುಂದುವರಿಸುವುದಾಗಿ ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.