ETV Bharat / sports

ನಾಯಕತ್ವದ ಯಶಸ್ಸಿಗೆ ಧೋನಿಯ ತಾಳ್ಮೆ & ಕೊಹ್ಲಿಯ ಆಕ್ರಮಣಶೀಲತೆ ಎರಡೂ ಅಗತ್ಯ - ಭಾರತ ತಂಡದ ನಾಯಕರು

ಯಕತ್ವದಲ್ಲಿ ಯಶಸ್ವಿಯಾಗಬೇಕಾದರೆ ಕೆಲವು ಗುಣಗಳು ಅಗತ್ಯವಾಗಿ ಬೇಕಾಗಿವೆ ಎಂದಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್,​ ತಂಡ ಬಲಿಷ್ಠವಾಗಲು ಧೋನಿಯ ತಾಳ್ಮೆಯ ಮನೋಭಾವ ಹಾಗೂ ಕೊಹ್ಲಿಯಲ್ಲಿದ್ದ ಆಕ್ರಮಣಕಾರಿ ಮನೋಭಾವ ಅಗತ್ಯವಾಗಿ ಬೇಕು ಎಂದಿದ್ದಾರೆ.

ಎಂಎಸ್ ಧೋನಿ ವಿರಾಟ್​ ಕೊಹ್ಲಿ
ಎಂಎಸ್ ಧೋನಿ ವಿರಾಟ್​ ಕೊಹ್ಲಿ
author img

By

Published : Aug 27, 2020, 3:06 PM IST

ಮುಂಬೈ: ಕ್ರಿಕೆಟ್​ ಜಗತ್ತಿನಲ್ಲಿ ಕೆಲವು ವರ್ಷಗಳಿಂದ ಭಾರತ ತಂಡ ಎಲ್ಲಾ ಮಾದರಿಯ ಕ್ರಿಕೆಟ್​​​ನಲ್ಲಿ​ ಅಧಿಪತ್ಯ ಸಾಧಿಸಿದೆ. ಎಲ್ಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆಯುವುದಕ್ಕಾಗಿ ಶ್ರಮಿಸುತ್ತಿದೆ. ಇಷ್ಟೆಲ್ಲಾ ಸಾಧನೆಗೆ ಹಲವಾರು ನಾಯಕರು ಶ್ರಮಿಸಿದ್ದಾರೆ. ತಂಡದಿಂದ ಹಲವು ಮೈಲಿಗಲ್ಲು ನಿರ್ಮಾಣವಾಗಲು ಅವರ ಪಾತ್ರ ಮಹತ್ವದ್ದಾಗಿದೆ.

ಆದರೆ ನಾಯಕತ್ವದಲ್ಲಿ ಯಶಸ್ವಿಯಾಗಬೇಕಾದರೆ ಕೆಲವು ಗುಣಗಳು ಅಗತ್ಯವಾಗಿ ಬೇಕಾಗಿವೆ ಎಂದಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್,​ ತಂಡ ಬಲಿಷ್ಠವಾಗಲು ಧೋನಿಯ ತಾಳ್ಮೆಯ ಮನೋಭಾವ ಹಾಗೂ ಕೊಹ್ಲಿಯಲ್ಲಿದ್ದ ಆಕ್ರಮಣಕಾರಿ ಮನೋಭಾವ ಅಗತ್ಯವಾಗಿ ಬೇಕು ಎಂದಿದ್ದಾರೆ.

ಇರ್ಫಾನ್ ಪಠಾಣ್​
ಇರ್ಫಾನ್ ಪಠಾಣ್​

"ಮಹೇಂದ್ರ ಸಿಂಗ್ ನಾಯಕತ್ವದಲ್ಲಿ ಭಾರತ ತಂಡ 2 ವಿಶ್ವಕಪ್​ ಜಯಿಸಿದ್ದರೆ, ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಕ್ರಿಕೆಟ್​ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೆಚ್ಚು ದಿನಗಳ ಕಾಲ ನಂಬರ್​ ಒನ್​ ಸ್ಥಾನ ಅಲಂಕರಿಸಿತ್ತು. ಈ ಕಾರಣದಿಂದ ಧೋನಿ ಮತ್ತು ಕೊಹ್ಲಿ ನಾಯಕತ್ವದ ಶೈಲಿಗಳ ಮಿಶ್ರಣ ತಂಡಕ್ಕೆ ಸರಿ ಹೊಂದುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ನ ಕ್ರಿಕೆಟ್​ ಕನೆಕ್ಟ್​ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, "ನಾವು ಧೋನಿ ಕಾಲದಲ್ಲಿ ತಾಳ್ಮೆಯನ್ನು ನೋಡಿದ್ದೇವೆ. ಮತ್ತು ಕೊಹ್ಲಿ ಯುಗದಲ್ಲಿ ಆಕ್ರಮಣದ ಮನೋಭಾವವನ್ನು ನೋಡುತ್ತಿದ್ದೇವೆ. ಆದರೆ ಯಶಸ್ವಿ ನಾಯಕನಾಗಬೇಕಾದರೆ ಈ ಇಬ್ಬರ ಗುಣಗಳು ಅಗತ್ಯವಾಗಿ ಬೇಕಾಗಿರುತ್ತದೆ. ಒಬ್ಬ ಆಟಗಾರ ಯಶಸ್ವಿಯಾಗಬೇಕೆಂದರೆ ತಾಳ್ಮೆ ಮತ್ತು ಆಕ್ರಮಣಶೀಲತೆಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದಕ್ಕೆ ಈ ಇಬ್ಬರು ನಾಯಕರು ಸಾಕ್ಷಿಯಾಗಿದ್ದಾರೆ.

ಇಬ್ಬರೂ ಆಟದ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ವಿಶೇಷ ಗುಣಗಳನ್ನು ಬಳಸುತ್ತಿದ್ದರು ಮತ್ತು ಅದೇ ರೀತಿ ಯಶಸ್ಸನ್ನು ಸಾಧಿಸಿದರು ಎಂದು ಪಠಾಣ್​ ಹೇಳಿದ್ದಾರೆ.

ಕಷ್ಟದ ಸಂದರ್ಭದಲ್ಲಿ ತಾಳ್ಮೆಯ ಇನ್ನಿಂಗ್ಸ್​ನಿಂದ ಧೋನಿ ಎಷ್ಟೋ ಪಂದ್ಯಗಳನ್ನು ಭಾರತಕ್ಕೆ ಗೆದ್ದು ಕೊಟ್ಟಿರುವುದನ್ನು ನೋಡಿದ್ದೇವೆ. ಇನ್ನು ಕೊಹ್ಲಿ ಆಸ್ಟ್ರೇಲಿಯಾಕ್ಕೆ ತೆರಳಿ ತಮ್ಮ ಆಕ್ರಮಣಕಾರಿ ಮನೋಭಾವದಿಂದಲೇ ನಾಯಕ ಹಾಗೂ ಬ್ಯಾಟ್ಸ್​ಮನ್​ ಆಗಿ ಯಶಸ್ವಿಯಾಗಿದ್ದನ್ನು ಕೂಡ ನಾವು ನೋಡಿದ್ದೇವೆ. ಹಾಗಾಗಿ ಇವರೆಡು ಗುಣ ನಾಯಕನಾದವನಿಗೆ ಇರಬೇಕಾಗದ ಅಮೂಲ್ಯ ಗುಣಗಳು ಎಂದು ಪಠಾಣ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.