ಮುಂಬೈ: ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬರೋಬ್ಬರಿ 15.5 ಕೋಟಿಗೆ ಕೆಕೆಆರ್ ಸೇರಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚ ಬೆಲೆ ಪಡೆದ ವಿದೇಶಿಗ ಎಂಬ ದಾಖಲೆಗೆ ಪಾತ್ರರಾಗಿದ್ದರು.
ಆಶ್ಚರ್ಯಕರ ವಿಚಾರ ಎಂದರೆ ಕೆಕೆಆರ್ ತಂಡ ಏನಾದರೂ 2020ರ ಐಪಿಎಲ್ನಲ್ಲಿ ಲೀಗ್ನಲ್ಲಿ ಹೊರಬಿದ್ದರೆ, ಕಮ್ಮಿನ್ಸ್ ಎಸೆತಕ್ಕೆ ಲಕ್ಷ ಲಕ್ಷ ಹಣ ಪಡೆಯಲಿದ್ದಾರೆ. ಐಪಿಎಲ್ ಲೀಗ್ನಲ್ಲಿ 14 ಪಂದ್ಯಗಳು ನಡೆಯಲಿದ್ದು, ಕೆಕೆಆರ್ನ ಸ್ಟಾರ್ ಬೌಲರ್ ಆಗಿರುವ ಕಮ್ಮಿನ್ಸ್ 14 ಪಂದ್ಯಗಳಿಂದ 56 ಓವರ್ ಬೌಲಿಂಗ್ ಮಾಡಲಿದ್ದಾರೆ.
ಅಂದರೆ, ಟೂರ್ನಿಯಲ್ಲಿ 336 ಎಸೆತಗಳನ್ನು ಕಮ್ಮಿನ್ಸ್ ಎಸೆಯಲಿದ್ದಾರೆ. ಈ ಪ್ರಕಾರ ಅವರು ಪ್ರತಿ ಎಸೆತಕ್ಕೆ 4,69,696.9 ರೂ ಪಡೆಯಲಿದ್ದಾರೆ. ಒಂದು ವೇಳೆ ಕೆಕೆಆರ್ ಎಲಿಮಿನೇಟರ್ನಲ್ಲಿ ಹೊರಬಿದ್ದರೆ ಒಂದು ಎಸೆತಕ್ಕೆ 4,30,555 ರೂ ಪಡೆಯಲಿದ್ದಾರೆ.
ಕೆಕೆಆರ್ ಲೀಗ್ನಲ್ಲಿ ಮೊದಲೆರಡು ಸ್ಥಾನ ಪಡೆದು ಕ್ವಾಲಿಫೈಯರ್ 1 ಹಾಗೂ ಕ್ವಾಲಿಫೈಯರ್ 2 ರಲ್ಲೂ ಸೋತು ಹೊರಬಿದ್ದರೆ, ಒಂದು ಎಸೆತಕ್ಕೆ 3,79,901.9 ರೂ ಪಡೆಯಲಿದ್ದಾರೆ. ಕೆಕೆಆರ್ ಏನಾದರೂ ಫೈನಲ್ ಪ್ರವೇಶಿದರೆ ಕಮ್ಮಿನ್ಸ್ 3,58,796 ರೂ ಪಡೆಲಿದ್ದಾರೆ.
2014 ರಲ್ಲಿ ಬರೋಬ್ಬರಿ 14 ಕೋಟಿಗೆ ಆರ್ಸಿಬಿ ತಂಡ ಸೇರಿದ್ದ ಯುವರಾಜ್ ಸಿಂಗ್ 14 ಪಂದ್ಯಗಳಿಂದ 376 ರನ್ ಸಿಡಿಸಿದ್ದರು. ಅವರು ಪ್ರತಿ ರನ್ಗೆ 3,71,340 ರೂ ಪಡೆದಿದ್ದರು. ಇನ್ನು 2015 ರಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದಿಂದ 16 ಕೋಟಿ ಪಡೆದಿದ್ದ ಅವರು 14 ಪಂದ್ಯಗಳಿಂದ ಕೇವಲ 248 ರನ್ಗಳಿಸಿದ್ದರು. ಅವರು ಆವೃತ್ತಿಯಲ್ಲಿ ಪ್ರತಿ ರನ್ಗೂ 6,45,161ರೂ ಸಂಪಾದಿಸಿದ್ದರು.
ಇದೀಗ ಪ್ಯಾಟ್ ಕಮ್ಮಿನ್ಸ್ ಕೂಡ ಹೆಚ್ಚು ಕಡಿಮೆ ಯುವಿಯಷ್ಟೇ ಹಣ ಪಡೆದಿದ್ದಾರೆ. ಆದರೆ, ಅವರು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.