ಮುಂಬೈ: ಭಾರತದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾಗಿಯಾಗಿದೆ. ಇಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಮೂರು ಏಕದಿನ ಪಂದ್ಯಗಳ ಮೊದಲ ಹಣಾಹಣಿ ನಡೆಯುತ್ತಿದೆ. ಈ ಮಧ್ಯೆ ಕಾಂಗರೂ ತಂಡದ ವೇಗಿ ಕಮ್ಮಿನ್ಸ್ಗೆ ಭಾರತೀಯ ಅಭಿಮಾನಿಯೊಬ್ಬರು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.
-
Pat Cummins is in India & was welcomed with a beautiful 🎁 by his fan 💜👕
— KolkataKnightRiders (@KKRiders) January 14, 2020 " class="align-text-top noRightClick twitterSection" data="
📹 Watch what Pat had to say 🗣#INDvAUS @patcummins30 #KKR #KorboLorboJeetbo pic.twitter.com/x0UirB0zGS
">Pat Cummins is in India & was welcomed with a beautiful 🎁 by his fan 💜👕
— KolkataKnightRiders (@KKRiders) January 14, 2020
📹 Watch what Pat had to say 🗣#INDvAUS @patcummins30 #KKR #KorboLorboJeetbo pic.twitter.com/x0UirB0zGSPat Cummins is in India & was welcomed with a beautiful 🎁 by his fan 💜👕
— KolkataKnightRiders (@KKRiders) January 14, 2020
📹 Watch what Pat had to say 🗣#INDvAUS @patcummins30 #KKR #KorboLorboJeetbo pic.twitter.com/x0UirB0zGS
ಕಮ್ಮಿನ್ಸ್ ಭೇಟಿ ಮಾಡಿರುವ ಅಭಿಮಾನಿ, ಈ ಹಿಂದೆ ಅವರು ಕೆಕೆಆರ್ ತಂಡದಲ್ಲಿದ್ದ ವೇಳೆ ಹಾಕಿಕೊಂಡಿದ್ದ ಜರ್ಸಿ ಕೊಟ್ಟಿದ್ದಾರೆ. ಈ ಜರ್ಸಿ ನೋಡಿದ ಆಸೀಸ್ ಆಲ್‌ರೌಂಡರ್ ಹಳೆ ನೆನಪು ಮೆಲುಕು ಹಾಕಿದ್ದಾರೆ.
ಐಪಿಎಲ್‌ನಲ್ಲಿ ಕೋಲ್ಕತ್ತಾ ತಂಡದ ಪರ 2014 ಹಾಗೂ 2015ರಲ್ಲಿ ಕಣಕ್ಕಿಳಿದಿದ್ದ ಇವರು, ನಂತರ ಬೇರೆ ಬೇರೆ ಫ್ರಾಂಚೈಸಿ ಪಾಲಾಗಿದ್ದರು. ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿಯಲು ಅಣಿಯಾಗಿರುವ ಕಮ್ಮಿನ್ಸ್, ಹರಾಜು ವೇಳೆ 15.5 ಕೋಟಿ ರೂಪಾಯಿಗೆ ಬಿಕರಿಯಾಗಿ ಕ್ರಿಕೆಟ್ ಲೋಕದಲ್ಲಿ ಭಾರಿ ಸುದ್ದಿ ಮಾಡಿದ್ದರು.