ಪುಣೆ: ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಬ್ಯಾಟ್ಸ್ಮನ್ ಆಗಿ ಅದ್ಭುತ ಪ್ರತಿಭೆ ಹೊಂದಿದ್ದಾರೆ. ಆದರೆ, ಯುವ ಆಟಗಾರ ವಿಕೆಟ್ ಕೀಪಿಂಗ್ನಲ್ಲಿ ಇನ್ನೂ ತೊಟ್ಟಿಲಲ್ಲಿರುವ ಮಗು ಎಂದು ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಅಭಿಪ್ರಾಯ ಪಟ್ಟಿದ್ದಾರೆ.
23 ವರ್ಷದ ಪಂತ್ ಆಸ್ಟ್ರೇಲಿಯಾದ ಭದ್ರಕೋಟೆ ಗಬ್ಬಾದಲ್ಲಿ ದಿಗ್ವಿಜಯ ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು. ಆದರೆ, ವಿಕೆಟ್ ಕೀಪಿಂಗ್ ವಿಚಾರದಲ್ಲಿ ಮಾತ್ರ ಭಾರಿ ಟೀಕೆಗೆ ಗುರಿಯಾಗಿದ್ದರು.
" ರಿಷಭ್ ಪಂತ್ ಬ್ಯಾಟಿಂಗ್ನಲ್ಲಿ ಅದ್ಧುತ ಪ್ರತಿಭೆಯನ್ನು ಪಡೆದಿದ್ದಾರೆ. ಅವರ ನೈಸರ್ಗಿಕವಾಗಿ ದಂಡಿಸುವ ಕೌಶಲ್ಯತೆ ಹೊಂದಿದ್ದಾರೆ. ಆದರೆ, ವಿಕೆಟ್ ಕೀಪಿಂಗ್ನಲ್ಲಿ ಮಾತ್ರ ಇನ್ನು ತೊಟ್ಟಿಲಿನಲ್ಲಿದ್ದಾರೆ. ಅವರು ಇನ್ನು ಬಹಳಷ್ಟನ್ನು ಕಲಿಯಬೇಕಾಗಿದೆ. ಜೊತೆಗೆ ಆಸ್ಟ್ರೇಲಿಯಾದಲ್ಲಿ ತೋರಿದ ಪ್ರದರ್ಶನದ ರೀತಿ ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡಬೇಕೆಂಬುದರ ಬಗ್ಗೆ ಇನ್ನೂ ಸುಧಾರಿಸಬೇಕಿದೆ ಎಂದು ಕಿರ್ಮಾನಿ ತಿಳಿಸಿದ್ದಾರೆ.
ಪಂತ್ ವಿಕೆಟ್ ಕೀಪಿಂಗ್ ಬಗ್ಗೆ ಕೆಲುವು ಸಲಹೆಗಳನ್ನು ನೀಡಿರುವ ಅವರು, ಪಂತ್ ವಿಕೆಟ್ ಕೀಪಿಂಗ್ನಲ್ಲಿ ಮೂಲ ತಂತ್ರಗಳನ್ನು ಹೊಂದಿರಬೇಕು, ಅವರ ವಿಶ್ವದ ವೇಗದ ಬೌಲರ್ಗೆ ಕೀಪಿಂಗ್ ಮಾಡುವುದು ಸುಲಭ, ಏಕೆಂದರೆ ಅಲ್ಲಿ ಸಾಕಷ್ಟು ಸಮಯವಿರುತ್ತದೆ. ಆದರೆ ಸ್ವಿಂಗ್ ಬೌಲರ್ಗಳಿಗೆ ಕೀಪಿಂಗ್ ಮಾಡುವಾಗ ಚೆಂಡಿನ ಬೌನ್ಸ್ ಮತ್ತು ಅದಕ್ಕೆ ಅನುಗುಣವಾಗಿ ಚಲನೆ ಮಾಡಬೇಕಿರುತ್ತದೆ ಎಂದು 1976 ರಿಂದ 1986ರ ವರೆಗೆ 88 ಟೆಸ್ಟ್ ಮತ್ತು 49 ಏಕದಿನ ಪಂದ್ಯಗಳನ್ನಾಡಿರುವ ಕಿರ್ಮಾನಿ ಹೇಳಿದ್ದಾರೆ.
ಆದರೂ ಪಂತ್ ಬ್ರಿಸ್ಬೇನ್ನಲ್ಲಿ ತೋರಿದ ಬ್ಯಾಟಿಂಗ್ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಿರ್ಮಾನಿ, ಆತ ಕೇವಲ 20ರ ವಯೋಮಾನದವನಾಗಿದ್ದಾನೆ, ಕಲಿಯಲು ಇನ್ನೂ ಅವಕಾಶವಿದೆ. ಸಂದರ್ಭಕ್ಕೆ ತಕ್ಕಂತೆ ತಾಳ್ಮೆಯ ಆಟವನ್ನು ಮೈಗೂಡಿಸಿಕೊಳ್ಳಬೇಕು, ವಿಕೆಟ್ ಕೈಚೆಲ್ಲಬಾರದು ಎಂದು ತಿಳಿಸಿದ್ದಾರೆ.
ಇದನ್ನು ಓದಿ:2ನೇ ಇನ್ನಿಂಗ್ಸ್ನಲ್ಲಿ ಡಿಕ್ಲೇರ್ ಘೋಷಿಸದಿರಲು ರಿಷಭ್ ಪಂತ್ ಭೀತಿ ಕಾರಣ: ಜೋ ರೂಟ್