ಕರಾಚಿ: ಮದುವೆ ಮಾಡಿಕೊಳ್ಳುವ ಜೋಡಿ ಖುಶಿಯಲ್ಲಿ ಎಲ್ಲರೊಂದಿಗೆ ಫೋಟೋಶೂಟ್ ಮಾಡಿಸಿಕೊಳ್ಳುವುದು, ಮನೆಗೆ ಬಂದ ಅತಿಥಿಗಳೊಂದಿಗೆ ಮಾತನಾಡುವುದೆಲ್ಲಾ ಮದುವೆ ಕಾರ್ಯಕ್ರಮಗಳಲ್ಲಿ ಕಾಮನ್. ಆದ್ರೆ ಇಲ್ಲೊಂದು ಜೋಡಿ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಅಪರೂಪದ ಘಟನೆ ನಡೆದಿದೆ.
ನಿನ್ನೆ ಪಾಕಿಸ್ತಾನ-ಆಸ್ಟ್ರೇಲಿಯಾ ತಂಡಗಳ ನಡುವೆ ಎರಡನೇ ಟಿ-20 ಪಂದ್ಯ ನಡೆಯುತ್ತಿತ್ತು. ಇದೇ ವೇಳೆ ಪಾಕಿಸ್ತಾನದ ಜೋಡಿಯೊಂದು ಅಮೆರಿಕಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುಮಧುರ ಸಂದರ್ಭದಲ್ಲಿ ಅವರು ತಮ್ಮ ಮದುವೆ ಸಂಭ್ರಮ ಬದಿಗಿಟ್ಟು ಟಿವಿ ಮುಂದೆ ಕುಳಿತು ಕ್ರಿಕೆಟ್ ನೋಡ್ತಾ ಎಂಜಾಯ್ ಮಾಡಿದ್ದಾರೆ.
-
Here's a message we got from a fan in the US 👫#CoupleGoals
— ICC (@ICC) November 6, 2019 " class="align-text-top noRightClick twitterSection" data="
You know it's love when ... pic.twitter.com/4YuGImuXjW
">Here's a message we got from a fan in the US 👫#CoupleGoals
— ICC (@ICC) November 6, 2019
You know it's love when ... pic.twitter.com/4YuGImuXjWHere's a message we got from a fan in the US 👫#CoupleGoals
— ICC (@ICC) November 6, 2019
You know it's love when ... pic.twitter.com/4YuGImuXjW
ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನವ ಜೋಡಿ ತಾವು ಮದುವೆಯಾಗುತ್ತಿದ್ದ ಸ್ಥಳದಲ್ಲೇ ಆಸ್ಟ್ರೇಲಿಯಾ-ಪಾಕಿಸ್ತಾನದ ನಡುವಿನ ಚುಟುಕು ಕದನ ನೋಡಿದ್ದಾರೆ. ಈ ಕುರಿತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿರುವ ಐಸಿಸಿ ಕೂಡ ತನ್ನ ಟ್ವಿಟರ್ನಲ್ಲಿ ಈ ಫೋಟೋ ಹಂಚಿಕೊಂಡಿದೆ.
ಪಾಕ್ ಕ್ರಿಕೆಟ್ ತಂಡದ ಅಭಿಮಾನಿ ಹಸನ್ ತಲ್ಸಿನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆಯೂ ಅವರು ಎರಡನೇ ಟಿ-20 ಪಂದ್ಯವನ್ನು ಸಂಪೂರ್ಣವಾಗಿ ವೀಕ್ಷಿಸಿದ್ದಾರೆ.
ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಆಸ್ಟ್ರೇಲಿಯಾ 7ವಿಕೆಟ್ಗಳ ಅಂತರದಿಂದ ಗೆದ್ದುಕೊಂಡಿದೆ.