ETV Bharat / sports

ನಾಳೆಯಿಂದ ಪಾಕ್​ ಟಿ - 20 ಟೂರ್ನಿ ಆರಂಭ.. ವೀಕ್ಷಕರಿಗೆ ಅವಕಾಶ!

author img

By

Published : Feb 19, 2021, 3:13 PM IST

ಪಾಕಿಸ್ತಾನ ಕ್ರಿಕೆಟ್ ಟೂರ್ನಿ ವೀಕ್ಷಣೆ ಮಾಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದ್ದು, ಕೊರೊನಾ ನಿಯಮಾವಳಿ ಅನುಸರಣೆ ಮಾಡುವುದು ಕಡ್ಡಾಯವಾಗಿದೆ.

Pakistan T20 tournament
Pakistan T20 tournament

ಕರಾಚಿ: ಕೊರೊನಾ ಮಹಾಮಾರಿ ಬಳಿಕ ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್​ ಟೂರ್ನಿ ವೀಕ್ಷಣೆ ಮಾಡಲು ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡಲಾಗುತ್ತಿದ್ದು, ನಾಳೆಯಿಂದ ಪಾಕಿಸ್ತಾನ ಸೂಪರ್​ ಲೀಗ್​ ಟಿ-20 ಟೂರ್ನಿ ಆರಂಭಗೊಳ್ಳುತ್ತಿದೆ.

ಈಗಾಗಲೇ ಪಾಕಿಸ್ತಾನದಲ್ಲಿ ನಡೆದ ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ ಖಾಲಿ ಮೈದಾನದಲ್ಲಿ ನಡೆದಿದ್ದು, ಇದೇ ಪ್ರಥಮ ಬಾರಿಗೆ ಕ್ರಿಕೆಟ್ ವೀಕ್ಷಣೆ ಮಾಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಕ್ರಿಕೆಟ್​ ಪಂದ್ಯ ವೀಕ್ಷಣೆ ಮಾಡಲು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್ ಕೇವಲ 20 ಪ್ರತಿಶತ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾಗಿದೆ.

ಕರಾಚಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ 7,500 ವೀಕ್ಷಕರು ಹಾಗೂ ಗಡಾಫಿ ಸ್ಟೇಡಿಯಂನಲ್ಲಿ 5,500 ಅಭಿಮಾನಿಗಳು ಇದೀಗ ಕುಳಿತುಕೊಂಡು ಕ್ರಿಕಟ್​ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ. ಪಾಕ್​ ಕ್ರಿಕೆಟ್ ಲೀಗ್​ನಲ್ಲಿ ಆರು ತಂಡಗಳು ಭಾಗಿಯಾಗಲಿದ್ದು, ಕ್ರಿಸ್ ಗೇಲ್​, ಬೆನ್ ಡಕ್​, ಕ್ರಿಸ್ ಲಿನ್​, ರಾಶೀದ್ ಖಾನ್​ ಸೇರಿದಂತೆ ಅನೇಕ ಸ್ಟಾರ್​ ಪ್ಲೇಯರ್ಸ್ ಭಾಗಿಯಾಗುತ್ತಿದ್ದಾರೆ. ನಾಳೆಯಿಂದ ಆರಂಭಗೊಳ್ಳಲಿರುವ ಪಾಕ್​ ಟಿ-20 ಟೂರ್ನಿಯ ಫೈನಲ್ ಪಂದ್ಯ ಮಾರ್ಚ್​ 22ರಂದು ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.