ETV Bharat / sports

ಮೊದಲ ಟೆಸ್ಟ್​ ಸೋಲಿಗೆ ವಾಸಿಮ್​ ಅಕ್ರಮ್​ ದೂಷಿಸಿದ್ದು ಯಾರನ್ನು ಗೊತ್ತಾ? - ಇಂಗ್ಲೆಂಡ್​ಗೆ ಜಯ

ಪಾಕಿಸ್ತಾನ ನೀಡಿದ್ದ 277 ರನ್​ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ 117 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡ ಆಘಾತ ಅನುಭವಿಸಿತ್ತು. ಆದರೆ ಬಟ್ಲರ್​ (75) ಹಾಗೂ ಕ್ರಿಸ್​ ವೋಕ್ಸ್ ​(84) ಭರ್ಜರಿ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್​ ತಂಡ ಇನ್ನೊಂದು ದಿನವಿರುವಂತೆ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಇಂಗ್ಲೆಂಡ್​ ಪಾಕಿಸ್ತಾನ ಟೆಸ್ಟ್
ಇಂಗ್ಲೆಂಡ್​ ಪಾಕಿಸ್ತಾನ ಟೆಸ್ಟ್
author img

By

Published : Aug 9, 2020, 4:29 PM IST

ಮ್ಯಾಂಚೆಸ್ಟರ್​: ಇಂಗ್ಲೆಂಡ್​ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ 3 ವಿಕೆಟ್​ಗಳ ಸೋಲು ಕಂಡು ನಿರಾಶೆ ಅನುಭವಿಸಿದೆ. 107 ರನ್​ಗಳ ಮುನ್ನಡೆ ಪಡೆದರೂ ಪಾಕ್​ ತಂಡ ಸೋತಿರುವುದಕ್ಕೆ ನಾಯಕ ಅಜರ್​ ಅಲಿ ಕಾರಣ ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸೀಮ್​ ಅಕ್ರಮ್​ ದೂಷಿಸಿದ್ದಾರೆ.

ಪಾಕಿಸ್ತಾನ ನೀಡಿದ್ದ 277 ರನ್​ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್​ 117 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತ್ತು. ಆದರೆ ಬಟ್ಲರ್ ​(75) ಹಾಗೂ ಕ್ರಿಸ್​ ವೋಕ್ಸ್ ​(84) ಭರ್ಜರಿ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್​ ತಂಡ ಇನ್ನೂ ಒಂದು ದಿನವಿರುವಂತೆ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಸೋಲಿನ ಬಳಿಕ ಮಾತನಾಡಿದ ವಾಸೀಮ್​ ಅಕ್ರಮ್, ಕ್ರಿಸ್​ ವೋಕ್ಸ್​ರನ್ನು ನಮ್ಮ ತಂಡದ ಆಟಗಾರರು ಲಘುವಾಗಿ ಪರಿಗಣಿಸಿದ್ದೇ ಅಚ್ಚರಿಯ ಸೋಲಿಗೆ ಕಾರಣ ಎಂದಿದ್ದಾರೆ.

ಈ ಸೋಲು ಪಾಕ್‌ ತಂಡಕ್ಕೆ ಮತ್ತು ಅಭಿಮಾನಿಗಳಿಗೆ ಬಹಳ ನೋವನ್ನುಂಟು ಮಾಡಿದೆ. ಕ್ರಿಕೆಟ್​ನಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಇಲ್ಲಿ ನಮ್ಮ ಸೋಲಿಗೆ ನಾಯಕನ ತಂತ್ರಗಾರಿಕೆಯ ವೈಫಲ್ಯವೇ ಕಾರಣ. ಅಜರ್​ ಅಲಿ ನಿರ್ಣಾಯಕ ಹಂತದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಲವು ಬಾರಿ ವಿಫಲರಾದರು ಎಂದಿದ್ದಾರೆ.

ಕ್ರಿಸ್​ ವೋಕ್ಸ್​ ಬ್ಯಾಟಿಂಗ್‌ಗೆ​ ಬಂದಾಗ ಬೌನ್ಸ್​ ಮತ್ತು ಶಾರ್ಟ್​ಪಿಚ್​ ಎಸೆತಗಳು ಕಾಣಿಸಲಿಲ್ಲ. ಅವರು ಸುಲಭವಾಗಿ ರನ್​ ಗಳಿಸಿದರು. ವಿಕೆಟ್​ಗಾಗಿ ಹೆಚ್ಚು ಸ್ಪಿನ್ ಬೌಲರ್​ಗಳನ್ನು ಬಳಸಿದರು. ನನ್ನ ಪ್ರಕಾರ, ವೋಕ್ಸ್​ ಬ್ಯಾಟಿಂಗಿಳಿದಾಗ​ ಹೆಚ್ಚು ವೇಗಿಗಳಿಂದ ಬೌಲಿಂಗ್ ಮಾಡಿಸಬೇಕಿತ್ತು. ಬೌಲರ್​ಗಳ ವೈಫಲ್ಯವನ್ನು ಬಳಸಿಕೊಂಡ ಬಟ್ಲರ್​-ವೋಕ್ಸ್​ ಜೋಡಿ ಪಾಕ್​ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಂಡಿತು ಎಂದು ಅಕ್ರಮ್​ ತಮ್ಮ ತಂಡದ ಸೋಲಿಗೆ ಕಾರಣ ತಿಳಿಸಿದ್ದಾರೆ.

ಇಂಗ್ಲೆಂಡ್​ ತಂಡ ವಿಶ್ವ ಚಾಂಪಿಯನ್ ಭಾಗವಾಗಿರುವ ಈ ಟೆಸ್ಟ್​ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ. ಎರಡು ತಂಡಗಳ ನಡುವಿನ ಮುಂದಿನ ಪಂದ್ಯ ಆಗಸ್ಟ್​ 13ರಿಂದ ಸೌತಾಂಪ್ಟನ್​ನಲ್ಲಿ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.