ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೂರು ಟೆಸ್ಟ್ ಹಾಗೂ ಟಿ-20 ಪಂದ್ಯಗಳಲ್ಲಿ ಭಾಗಿಯಾಗಲು ಇಂದು ಲಂಡನ್ಗೆ ಬಂದಿಳಿದಿದೆ. ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಟ್ವೀಟ್ ಮಾಡಿದ್ದು, ಜುಲೈ 30ರಿಂದ ಆರಂಭಗೊಳ್ಳಲಿರುವ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲು ಪಾಕ್ ಇಂಗ್ಲೆಂಡ್ಗೆ ಆಗಮಿಸಿದೆ ಎಂದಿದೆ.
ಸದ್ಯ 14 ದಿನಗಳ ಕಾಲ ಪಾಕ್ ಕ್ರಿಕೆಟ್ ತಂಡ ಕ್ವಾರಂಟೈನ್ಗೊಳಗಾಗಲಿದ್ದು, ಬಳಿಕ ತರಬೇತಿಯಲ್ಲಿ ಭಾಗಿಯಾಗಲಿದೆ ಎಂದು ಪಿಸಿಬಿ ತಿಳಿಸಿದೆ. ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗಾಗಿ ಪಿಸಿಬಿ 29 ಪ್ಲೇಯರ್ಸ್ ತಂಡ ಪ್ರಕಟಗೊಳಿಸಿದೆ. ಆದರೆ ಇದರಲ್ಲಿ 9 ಪ್ಲೇಯರ್ಸ್ಗೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಕೇವಲ 20 ಪ್ಲೇಯರ್ಸ್ ಹಾಗೂ ಸಹಾಯಕ ಸಿಬ್ಬಂದಿ ತೆರಳಿದ್ದಾರೆ.
-
🛬 Pakistan men's team has arrived in England for their upcoming series that's due to begin on 30 July.#ENGvPAK pic.twitter.com/yexvA20e10
— ICC (@ICC) June 29, 2020 " class="align-text-top noRightClick twitterSection" data="
">🛬 Pakistan men's team has arrived in England for their upcoming series that's due to begin on 30 July.#ENGvPAK pic.twitter.com/yexvA20e10
— ICC (@ICC) June 29, 2020🛬 Pakistan men's team has arrived in England for their upcoming series that's due to begin on 30 July.#ENGvPAK pic.twitter.com/yexvA20e10
— ICC (@ICC) June 29, 2020
ಉಭಯ ತಂಡಗಳ ನಡುವೆ ನಡೆಯುವ ಪಂದ್ಯದ ವೇಳೆ ಯಾವುದೇ ಕ್ರೀಡಾಭಿಮಾನಿಗಳಿಗೆ ಅವಕಾಶ ಇರುವುದಿಲ್ಲ. ಅಜರ್ ಅಲಿ ತಂಡವನ್ನ ಮುನ್ನಡೆಸಲಿದ್ದಾರೆ. ಟಿ-20 ತಂಡಕ್ಕೆ ಬಾಬರ್ ಆಜಂ ಸಾರಥ್ಯ ವಹಿಸಿದ್ದಾರೆ.
ಶಬಾದ್ ಖಾನ್, ಹ್ಯಾರಿಸ್ ರೌಪ್, ಹೈದರ್ ಅಲಿ, ಫಖಾರ್ ಜಮಾನ್, ಮೊಹಮ್ಮದ್ ರಿಯಾಜ್, ವಹಾಬ್ ರಿಯಾಜ್, ಇಮ್ರಾನ್ ಖಾನ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸೀನ್ ಹಾಗೂ ಕೌಶೀಫ್ ಭಟ್ಟಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿರುವ ಕಾರಣ ತಂಡದೊಂದಿಗೆ ಪ್ರಯಾಣ ಬೆಳೆಸಿಲ್ಲ.
ಪ್ರಯಾಣ ಬೆಳೆಸಿದ ಪ್ಲೇಯರ್ಸ್
ಅಜರ್ ಅಲಿ(ಕ್ಯಾಪ್ಟನ್), ಬಾಬರ್ ಅಜಂ(ಉ.ನಾಯಕ), ಅಬಿದಿ ಅಲಿ, ಅಸಾದ್ ಶಫೀಕ್, ಫಹೀಮ್ ಅಶ್ರಫ್, ಪವಾಡ್ ಆಲಂ, ಅಹ್ಮದ್, ಇಮಾದ್ ವಾಸೀಂ, ಇಮಾಮ್ ಉಲ್ ಹಕ್, ಕೌಶೀದ್ ಶಾ, ಮೊಹಮ್ಮದ್ ಅಬ್ಬಾಸ್, ಮುಸಾ ಖಾನ್, ನಸೀಂ ಶಾ, ರೋಹಿಲ್ ನಜೀರ್, ಸರ್ಫರಾಜ್ ಅಹ್ಮದ್, ಶಹೀನ್ ಶಾ ಆಫ್ರೀದಿ, ಶಾನ್ ಮಾಸೂದ್, ಶೋಹಿಲ್ ಖಾನ್, ಉಸ್ಮಾನ್ ಶಿನ್ವಾರಿ ಹಾಗೂ ಯಾಸೀರ್ ಶಾ.