ETV Bharat / sports

ಭಾರತದ ನಂತರ ಪಿಂಕ್​ ಬಾಲ್​ ಟೆಸ್ಟ್​ ಆಡಲು ಬಾಂಗ್ಲಾದೇಶಕ್ಕೆ ಆಹ್ವಾನ ನೀಡಿದ ಪಾಕ್​ - ಬಾಂಗ್ಲಾದೇಶ ಟೆಸ್ಟ್​ ಸರಣಿ

ಜನವರಿಯಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದರಿಂದ ಪಿಸಿಬಿ​ ಸಿಎಒ ವಾಸೀಮ್​ ಖಾನ್ ಕರಾಚಿಯಲ್ಲಿ ನಡೆಯುವ 2 ಪಂದ್ಯಗಳ​ ಟೆಸ್ಟ್​ ಸರಣಿಯಲ್ಲಿ ಒಂದು ಪಂದ್ಯವನ್ನು   ಪಿಂಕ್​ ಬಾಲ್(ಡೇ ಅಂಡ್​ ನೈಟ್​)ನಲ್ಲಿ ಆಡಲು ಆಹ್ವಾನ ನೀಡಿದ್ದಾರೆ.​

Pakistan invites Bangladesh
Pakistan invites Bangladesh
author img

By

Published : Dec 11, 2019, 12:25 PM IST

ಲಾಹೋರ್​: ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ಭಾರತ- ಬಾಂಗ್ಲಾದೇಶದ ನಡುವೆ ಪಿಂಕ್​ ಬಾಲ್​ ಯಶಸ್ವಿಯಾಗಿ ಪೂರ್ಣಗೊಂಡ ಬೆನ್ನಲ್ಲೇ ಪಾಕಿಸ್ತಾನ ಕೂಡ ಬಾಂಗ್ಲಾದೇಶಕ್ಕೆ ಆಹ್ವಾನ ನೀಡಿದೆ.

ಜನವರಿಯಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದರಿಂದ ಪಿಸಿಬಿ​ ಸಿಎಒ ವಾಸೀಮ್​ ಖಾನ್ ಕರಾಚಿಯಲ್ಲಿ ನಡೆಯುವ 2 ಪಂದ್ಯಗಳ​ ಟೆಸ್ಟ್​ ಸರಣಿಯಲ್ಲಿ ಒಂದು ಪಂದ್ಯವನ್ನು ಪಿಂಕ್​ ಬಾಲ್(ಡೇ ಅಂಡ್​ ನೈಟ್​)ನಲ್ಲಿ ಆಡಲು ಆಹ್ವಾನ ನೀಡಿದ್ದಾರೆ.​

ಬಿಸಿಬಿ ಅಧಿಕಾರಿಗಳು ಪಿಸಿಬಿ ನೀಡಿರುವ ಮನವಿಯನ್ನು ಸ್ವೀಕರಿಸಿದ್ದು, ತಮ್ಮ ಸರ್ಕಾರದ ಜೊತೆ ಚರ್ಚೆ ನಡೆಸಿದ ಬಳಿಕವೇ ತಮ್ಮ ನಿರ್ಧಾರವನ್ನು ಇನ್ನೊಂದು ವಾರದಲ್ಲಿ ತಿಳಿಸುವುದಾಗಿ ತಿಳಿಸುವುದಾಗಿ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಪಾಕಿಸ್ತಾನ ಯಾವುದೇ ತಟಸ್ಥ ಸ್ಥಳದಲ್ಲಿ ಇನ್ಮುಂದೆ ಯಾವುದೇ ಸರಣಿಯನ್ನು ಆಡುವುದಿಲ್ಲ. ಯಾವುದಾದರೂ ತಂಡದ ಪಾಕಿಸ್ತಾನದಲ್ಲಿ ಆಡುವುದಕ್ಕೆ ತಕರಾರು ತೆಗೆದರೆ, ಅವರು ಅದಕ್ಕಾಗಿ ತಕ್ಕ ಕಾರಣವನ್ನು ನೀಡಬೇಕಿದೆ. ನಾವು ನಮ್ಮ ತವರಿನ ಸರಣಿಗಳನ್ನು ಪಾಕಿಸ್ತಾನದಲ್ಲೇ ಆಡುವ ಉದ್ದೇಶ ಹೊಂದಿದ್ದೇವೆ ಎಂದಿದ್ದಾರೆ.

2009ರಲ್ಲಿ ಶ್ರೀಲಂಕಾ ಆಟಗಾರರ ಮೇಲೆ ಉಗ್ರರ ದಾಳಿ ನಡೆದ ಮೇಲೆ ಯಾವುದೇ ರಾಷ್ಟ್ರ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಬಯಸಿಲ್ಲ. ಆದರೆ 10 ವರ್ಷಗಳ ನಂತರ ಮತ್ತೆ ಶ್ರೀಲಂಕಾ ತಂಡವೇ ಟೆಸ್ಟ್​ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ತೆರಳಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.