ETV Bharat / sports

ಪಾಕ್​ನ ಎಲ್ಲ ಆಟಗಾರರ ಕೊರೊನಾ ವರದಿ ನೆಗೆಟಿವ್​​: ಇಸಿಬಿ ಸ್ಪಷ್ಟನೆ - ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ

ಸೋಮವಾರ ಇಂಗ್ಲೆಂಡ್​ ಆಟಗಾರರ ಕೊನೆಯ ಕೋವಿಡ್​ ಪರೀಕ್ಷೆ ನಡೆಸಿದ್ದು, ವರದಿ ನಕಾರಾತ್ಮಕವಾಗಿದೆ ಎಂದು ಇಸಿಬಿ ದೃಢಪಡಿಸಿದೆ. ಇಲ್ಲಿಯವರೆಗೆ, ಇಸಿಬಿ ತಮ್ಮ ಆಟಗಾರರು ಮತ್ತು ಸಿಬ್ಬಂದಿಯನ್ನ ಮೂರು ಬಾರಿ ಪರೀಕ್ಷೆ ನಡೆಸಿ ದೃಢಪಡಿಸಿಕೊಂಡಿದೆ.

ಪಾಕ್​ನ ಎಲ್ಲಾ ಆಟಗಾರರ ವರದಿ ನೆಗಟಿವ್​​
ಪಾಕ್​ನ ಎಲ್ಲಾ ಆಟಗಾರರ ವರದಿ ನೆಗಟಿವ್​​
author img

By

Published : Jul 1, 2020, 12:26 PM IST

ಲಂಡನ್: ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡದ 20 ಆಟಗಾರರು ಮತ್ತು 11 ನಿರ್ವಹಣಾ ಸಿಬ್ಬಂದಿ ಕೋವಿಡ್​ ಪರೀಕ್ಷೆ ನಡೆಸಿದ್ದು, ಅವರ ವರದಿ ನೆಗೆಟಿವ್​ ಬಂದಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮಂಗಳವಾರ ಪ್ರಕಟಿಸಿದೆ.

ಸೋಮವಾರ ಇಂಗ್ಲೆಂಡ್​ ಆಟಗಾರರ ಕೊನೆಯ ಕೋವಿಡ್​ ಪರೀಕ್ಷೆ ನಡೆಸಿದ್ದು, ವರದಿ ನಕಾರಾತ್ಮಕವಾಗಿದೆ ಎಂದು ಇಸಿಬಿ ದೃಢಪಡಿಸಿದೆ. ಇಲ್ಲಿಯವರಿಗೆ, ಇಸಿಬಿ ತಮ್ಮ ಆಟಗಾರರು ಮತ್ತು ಸಿಬ್ಬಂದಿಯನ್ನ ಮೂರು ಬಾರಿ ಪರೀಕ್ಷೆ ಮಾಡಿ ಕೊರೊನಾ ಇಲ್ಲದಿರುವುದನ್ನ ಖಚಿತ ಪಡಿಸಿಕೊಂಡಿದೆ.

ಜೂನ್ 26ರಂದು ನಡೆದ ಮೊದಲ ನಕಾರಾತ್ಮಕ ಪರೀಕ್ಷೆ ನಂತರ ಎಲ್ಲ ಆರು ಆಟಗಾರರನ್ನು ಸೋಮವಾರ ಮರು ಪರೀಕ್ಷಿಸಲಾಗಿದೆ ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಇತರ ನಾಲ್ಕು ಆಟಗಾರರಾದ ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಹೈದರ್ ಅಲಿ ಮತ್ತು ಹ್ಯಾರಿಸ್​​ ರೌಫ್ ಅವರ ಮಾದರಿಗಳ ಇತ್ತೀಚಿನ ಟೆಸ್ಟ್‌ನಲ್ಲಿ ಪಾಸಿಟಿವ್​ ಬಂದಿದೆ. ಅವರ ವರದಿ ಇನ್ನೂ ಎರಡು ಬಾರಿ ನೆಗೆಟಿವ್​ ಬರುವವರೆಗೂ ಪಾಕಿಸ್ತಾನದಲ್ಲಿಯೇ ಇರುತ್ತಾರೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ.

ಆರಂಭದಲ್ಲಿ ಹತ್ತರಲ್ಲಿ ಈ ನಾಲ್ವರು ಆಟಗಾರರ ವರದಿ ಪಾಸಿಟಿವ್​ ಬಂದಿದ್ದು, ಸತತ ಎರಡು ಬಾರಿ ಪರೀಕ್ಷೆಯಲ್ಲಿ ನೆಗೆಟಿವ್​ ಬರುವವರೆಗೂ ಇಂಗ್ಲೆಂಡ್‌ಗೆ ಪ್ರಯಾಣಿಸಲು ಅನುಮತಿಸುವುದಿಲ್ಲ ಎಂದು ಪಿಸಿಬಿ ಹೇಳಿದೆ.

ಇನ್ನೂ ಆರು ಆಟಗಾರರಾದ ಮೊಹಮ್ಮದ್ ಹಫೀಜ್, ವಹಾಬ್ ರಿಯಾಜ್, ಮೊಹಮ್ಮದ್ ಹಸ್ನೈನ್, ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ ಮತ್ತು ಫಖರ್ ಜಮಾನ್ ಸತತ ಎರಡು ಬಾರಿ ಕೋವಿಡ್​ ಪರೀಕ್ಷ ನಡೆಸಿದ್ದು, ಅವರ ವರದಿ ನೆಗೆಟಿವ್​ ಬಂದಿದೆ. ಅವರು ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.

ಆಗಸ್ಟ್‌ನಲ್ಲಿ ನಡೆಯಲಿರುವ ಮೂರು ಟೆಸ್ಟ್ ಮತ್ತು ಮೂರು ಟ್ವೆಂಟಿ - 20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಇಂಗ್ಲೆಂಡ್ ಪಾಕಿಸ್ತಾನಕ್ಕೆ ಆತಿಥ್ಯ ವಹಿಸುತ್ತಿದೆ. ಆದಾಗ್ಯೂ, ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸದ ನಿಖರವಾದ ದಿನಾಂಕಗಳನ್ನು ಇಸಿಬಿ ಇನ್ನೂ ಪ್ರಕಟಿಸಿಲ್ಲ.

ಇಸಿಬಿ ಘೋಷಿಸಿದಂತೆ ಪಾಕಿಸ್ತಾನ ತಂಡವು ಇಂಗ್ಲೆಂಡ್​ ತಲುಪಿದ್ದು, 14 ದಿನಗಳ ಕಡ್ಡಾಯ ಕ್ವಾರಂಟೈನ್​ ನಲ್ಲಿ ಇರಿಸಲಾಗಿದೆ.

ಮುಂದಿನ ವಾರ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯಕ್ಕಿಂತ ಮುಂಚಿತವಾಗಿ 30 ಸದಸ್ಯರ ಇಂಗ್ಲೆಂಡ್ ತಂಡ ಮತ್ತು ಸಹಾಯಕ ಸಿಬ್ಬಂದಿ ಏಗಾಸ್ ಬೌಲ್‌ನಲ್ಲಿ ಜೈವಿಕ ಸುರಕ್ಷಿತ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.