ETV Bharat / sports

ಟಿ20 ಕ್ರಿಕೆಟ್​ನಲ್ಲಿ ಒಂದೇ ತಂಡದ ವಿರುದ್ಧ ಸತತ ಜಯ: ವಿಶ್ವದಾಖಲೆ ಬರೆದ ಪಾಕ್​ ತಂಡ

ಪಾಕಿಸ್ತಾನ ತಂಡ 2010ರಿಂದ 2020ರ ಹತ್ತು ವರ್ಷಗಳಲ್ಲಿ ಜಿಂಬಾಬ್ವೆ ವಿರುದ್ಧ 13 ಪಂದ್ಯಗಳನ್ನಾಡಿದ್ದು ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಈ ಮೂಲಕ ಒಂದೇ ತಂಡದ ವಿರುದ್ಧ ಸತತ ಹೆಚ್ಚು ಪಂದ್ಯ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.

ಪಾಕಿಸ್ತಾನ - ಜಿಂಬಾಬ್ವೆ
ಪಾಕಿಸ್ತಾನ - ಜಿಂಬಾಬ್ವೆ
author img

By

Published : Nov 8, 2020, 8:51 PM IST

ರಾವಲ್ಪಿಂಡಿ: ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ತಂಡ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ ಗೆಲ್ಲುವ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಪಡೆದ ವಿಶ್ವದಾಖಲೆಗೆ ಪಾತ್ರವಾಗಿದೆ.

ಪಾಕಿಸ್ತಾನ ತಂಡ 2010ರಿಂದ 2020ರ ಹತ್ತು ವರ್ಷಗಳಲ್ಲಿ ಜಿಂಬಾಬ್ವೆ ವಿರುದ್ಧ 13 ಪಂದ್ಯಗಳನ್ನಾಡಿದ್ದು ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಈ ಮೂಲಕ ಒಂದೇ ತಂಡದ ವಿರುದ್ಧ ಸತತ 13 ಪಂದ್ಯ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.

ಪಾಕಿಸ್ತಾನವನ್ನು ಹೊರೆತುಪಡಿಸಿದರೆ, ಅಫ್ಘಾನಿಸ್ತಾನ ಐರ್ಲೆಂಡ್​ ವಿರುದ್ಧ 2017ರಿಂದ 20ರವರೆಗೆ ಸತತ12 ಪಂದ್ಯ ಜಯಿಸಿ 2ನೇ ಸ್ಥಾನದಲ್ಲಿದೆ. ಭಾರತ ತಂಡ ಜಿಂಬಾಬ್ವೆ ವಿರುದ್ಧ 2009ರಿಂದ 2018ರವರೆಗೆ ಸತತ 8 ಜಯ, ಅಫ್ಘಾನ್​ 2015 ರಿಂದ -19ರವರೆಗೆ 8ಜಯಗಳಿಸಿ ನಂತರದ ಸ್ಥಾನದಲ್ಲಿದೆ. ಇನ್ನು ಭಾರತ ತಂಡ ಶ್ರೀಲಂಕಾ, ಆಸ್ಟ್ರೇಲಿಯಾ ಹಾಗೂ ವೆಸ್ಟ್​ ಇಂಡೀಸ್​ ವಿರುದ್ಧ ಸತತ 7 ಪಂದ್ಯಗಳನ್ನು ಸೋಲಿಲ್ಲದೆ ಗೆದ್ದಿರುವ ದಾಖಲೆಯನ್ನು ಹೊಂದಿದೆ.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.