ETV Bharat / sports

ಬಾಬರ್ ಅಜಮ್ 82: ಜಿಂಬಾಬ್ವೆ ವಿರುದ್ಧ ಪಾಕಿಸ್ತಾನಕ್ಕೆ 6 ವಿಕೆಟ್​ಗಳ​ ಜಯ

ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಜಿಂಬಾಬ್ವೆ ವೆಸ್ಲಿ ಮಾಧೆವೆರೆ​ ಅವರ (70 ರನ್) ಅರ್ಧಶತಕ, ಬ್ರೆಂಡನ್ ಟೇಲರ್​ 20, ಸೀನ್ ವಿಲಿಯಮ್ಸ್​ 25 ಹಾಗೂ ಚಿಗುಂಬುರ 2​1 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ​ಗಳಿಸಿತ್ತು.

ಪಾಕಿಸ್ತಾನ- ಜಿಂಬಾಬ್ವೆ
ಪಾಕಿಸ್ತಾನ- ಜಿಂಬಾಬ್ವೆ
author img

By

Published : Nov 7, 2020, 8:30 PM IST

ರಾವಲ್ಪಿಂಡಿ: ನಾಯಕ ಬಾಬರ್​ ಅಜಮ್ ಅಬ್ಬರದ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಟಿ-20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿ, ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಜಿಂಬಾಬ್ವೆ ವೆಸ್ಲಿ ಮಾಧೆವೆರೆ​ ಅವರ (70 ರನ್) ಅರ್ಧಶತಕ, ಬ್ರೆಂಡನ್ ಟೇಲರ್​ 20, ಸೀನ್ ವಿಲಿಯಮ್ಸ್​ 25 ಹಾಗೂ ಚಿಗುಂಬುರ 2​1 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್​ ಗಳಿಸಿತ್ತು.

ಪಾಕಿಸ್ತಾನ ಪರ ಹ್ಯಾರೀಸ್​ ರವೂಫ್ 25ಕ್ಕೆ 2, ರಿಯಾಜ್ 37ಕ್ಕೆ 2, ಮೊಹಮ್ಮದ್​ ಹಸ್ನೈನ್​ 25ಕ್ಕೆ 1, ಉಸ್ಮಾನ್ ಖಾದಿರ್​ 24ಕ್ಕೆ 1 ವಿಕೆಟ್​ ಪಡೆದು ಮಿಂಚಿದರು.

157 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ 18.5 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಗುರಿ ತಲುಪಿ ಜಯ ಸಾಧಿಸಿತು.

ನಾಯಕ ಬಾಬರ್ ಅಜಮ್​ 55 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 82 ರನ್​ ಗಳಿಸಿದರೆ, ಮೊಹಮ್ಮದ್ ಹಫೀಜ್​ 32 ಎಸೆತಗಳಲ್ಲಿ 36 ರನ್​ ಗಳಿಸಿದರು. ಫಖಾರ್ ಜಮಾನ್ 19 ರನ್​ ಗಳಿಸಿ ತಂಡದ ಗೆಲುವಿನ ರೂವಾರಿಗಳಾದರು.

ಜಿಂಬಾಬ್ವೆ ಪರ ಮುಝರಬನಿ 26 ರನ್​ ನೀಡಿ 2 ವಿಕೆಟ್ ಪಡೆದರೆ, ಚಟಾರ ಮತ್ತು ಎನ್​ಗರಾವಾ ತಲಾ ಒಂದು ವಿಕೆಟ್​ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.