ಕರಾಚಿ: ಪಾಕಿಸ್ತಾನದ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದ್ದು, ಆತಿಥೇಯ ಪಾಕ್ ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಪಾಕ್ ಬೌಲರ್ ನೂಮಾನ್ ಅಲಿ 5 ವಿಕೆಟ್ ಹಾಗೂ ಯಾಸಿರ್ ಶಾ 4 ವಿಕೆಟ್ ಕಬಳಿಕೆ ಮಾಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಪದಾರ್ಪಣೆ ಪಂದ್ಯದಲ್ಲೇ ಮಿಂಚು ಹರಿಸಿದ ನೂಮಾನ್ ಎದುರಾಳಿ ತಂಡಕ್ಕೆ ಮಾರಕವಾಗಿ ಕಾಡಿದರು.
-
After winning the Karachi Test, Pakistan swap places with South Africa and move to the fifth position in the ICC World Test Championship standings.#WTC21 pic.twitter.com/O4g0G7mzvY
— ICC (@ICC) January 29, 2021 " class="align-text-top noRightClick twitterSection" data="
">After winning the Karachi Test, Pakistan swap places with South Africa and move to the fifth position in the ICC World Test Championship standings.#WTC21 pic.twitter.com/O4g0G7mzvY
— ICC (@ICC) January 29, 2021After winning the Karachi Test, Pakistan swap places with South Africa and move to the fifth position in the ICC World Test Championship standings.#WTC21 pic.twitter.com/O4g0G7mzvY
— ICC (@ICC) January 29, 2021
ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 69.2 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 220 ರನ್ ಗಳಿಸಿತ್ತು. ಪಾಕ್ ಪರ ಯಾಸೀರ್ ಶಾ 3 ವಿಕೆಟ್, ಶಾಹಿನ್ ಆಫ್ರಿದಿ 2, ನೂಮಾನ್ 2 ಹಾಗೂ ಹಸನ್ ಅಲಿ 1 ವಿಕೆಟ್ ಪಡೆದುಕೊಂಡರು.
ಮೊದಲ ಇನ್ನಿಂಗ್ಸ್ನಲ್ಲಿ ಪಾಕ್ ಆಲಂ ಅವರ ಶತಕದ ನೆರವಿನಿಂದ 119.2 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 378 ರನ್ ಗಳಿಸಿ, 158 ರನ್ಗಳ ಮುನ್ನಡೆ ಪಡೆದುಕೊಂಡಿತು. ಎರಡನೇ ಇನ್ನಿಂಗ್ಸ್ನಲ್ಲಿ ಆಫ್ರಿಕಾ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 100.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 245 ರನ್ ಮಾತ್ರ ಗಳಿಸಿತು.
ಹೀಗಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 88 ರನ್ಗಳ ಗುರಿ ಬೆನ್ನತ್ತಿದ್ದ ಪಾಕ್ ತಂಡ 22.5 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಫವಾದ್ ಆಲಂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.