ಕರಾಚಿ: ಫವಾದ್ ಆಲಮ್ ಅವರ ಭರ್ಜರಿ ಶತಕದ ನೆರವಿನಿಂದ ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಪಾಕಿಸ್ತಾನ ತಂಡ 308/8 ರನ್ ಗಳಿಸಿದ್ದು 88 ರನ್ಗಳ ಮುನ್ನಡೆಯೊಂದಿಗೆ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ.
ಮೊದಲ ದಿನ ದಕ್ಷಿಣ ಆಫ್ರಿಕಾ ತಂಡವನ್ನು 220 ರನ್ಗಳಿಗೆ ಆಲೌಟ್ ಮಾಡಿದ್ದ ಪಾಕಿಸ್ತಾನ ತಂಡ, ಕೇವಲ 27 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. 2ನೇ ದಿನ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ದಿನದಾಟದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 308 ರನ್ ಗಳಿಸಿ 88 ರನ್ಗಳ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಹಸನ್ ಅಲಿ ಅಜೇಯ 11, ನಯುಮನ್ ಅಲಿ ಅಜೇಯ 6 ರನ್ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
-
Brilliant from Fawad Alam! Pakistan 308-8 at stumps.#PAKvSA Scorecard: https://t.co/ePuJ3N5kw5#HarHaalMainCricket #BackTheBoysInGreen pic.twitter.com/YBc6JeqM7o
— Pakistan Cricket (@TheRealPCB) January 27, 2021 " class="align-text-top noRightClick twitterSection" data="
">Brilliant from Fawad Alam! Pakistan 308-8 at stumps.#PAKvSA Scorecard: https://t.co/ePuJ3N5kw5#HarHaalMainCricket #BackTheBoysInGreen pic.twitter.com/YBc6JeqM7o
— Pakistan Cricket (@TheRealPCB) January 27, 2021Brilliant from Fawad Alam! Pakistan 308-8 at stumps.#PAKvSA Scorecard: https://t.co/ePuJ3N5kw5#HarHaalMainCricket #BackTheBoysInGreen pic.twitter.com/YBc6JeqM7o
— Pakistan Cricket (@TheRealPCB) January 27, 2021
ಇನ್ನು 2ನೇ ದಿನ ಬ್ಯಾಟಿಂಗ್ ಮುಂದುವರೆಸಿದ ಅಜರ್ ಅಲಿ 151 ಎಸೆತಗಳಲ್ಲಿ 51 ರನ್ ಸಿಡಿಸಿದರೆ, ಫವಾದ್ ಆಲಮ್ 245 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 109 ರನ್ ಗಳಿಸಿ ಔಟಾದರು. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ 33 ಹಾಗೂ ಫಹೀಮ್ ಅರಾಫತ್ 64 ರನ್ ಗಳಿಸಿ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ನೆರವಾದರು.
ಮೊದಲ ದಿನ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದ ಹರಿಣಗಳು ಎರಡನೇ ದಿನ ಪಾಕ್ ಬ್ಯಾಟ್ಸ್ಮನ್ಗಳ ಮುಂದೆ ಮಂಕಾಗಿ ಕೇವಲ 4 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು. ನಿನ್ನೆ 2 ವಿಕೆಟ್ ಪಡೆದಿದ್ದ ರಬಾಡ ಇಂದು ಯಾವುದೇ ವಿಕೆಟ್ ಪಡೆಯಲಿಲ್ಲ. ನಿನ್ನೆ ಒಂದು ವಿಕೆಟ್ ಪಡೆದಿದ್ದ ಎನ್ರಿಚ್ ನೋಕಿಯಾ ಮತ್ತು ಕೇಶವ್ ಮಹಾರಾಜ್ ಇಂದು ತಲಾ ಒಂದು ವಿಕೆಟ್ ಪಡೆದರು. ಯುವ ವೇಗಿ ಲುಂಗಿ ಎಂಗಿಡಿ 2 ವಿಕೆಟ್ ಪಡೆದರು.
ಇದನ್ನು ಓದಿ:ಕೊನೆಯ 3 ಎಸೆತದಲ್ಲಿ 15 ರನ್ ಸಿಡಿಸಿದ ಸೋಲಂಕಿ : ಸೆಮಿಫೈನಲ್ ಗ್ರ್ಯಾಂಡ್ ಎಂಟ್ರಿಕೊಟ್ಟ ಬರೋಡ!