ಸೌತಾಂಪ್ಟನ್: ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಫವಾದ್ ಆಲಮ್ 11ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧ ಸೌತಾಂಪ್ಟನ್ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ 11ರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.
ಪವಾದ್ ಆಲಮ್ ಕೊನೆಯದಾಗಿ 2009ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ನಂತರ 10 ವರ್ಷಗಳ ಬಳಿಕ 2019ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದರಾದರೂ ಆಡುವ 11ರ ಬಳಗದಲ್ಲಿ ಅವಕಾಶಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಇದೀಗ 10 ವರ್ಷ 259 ದಿನದಗಳ ಬಳಿಕ ಮತ್ತೆ ಟೆಸ್ಟ್ ಕ್ರಿಕೆಟ್ನಲ್ಲಿ ಆಡಲಿದ್ದಾರೆ.
56 ಪ್ರಥಮ ದರ್ಜೆ ಪಂದ್ಯಗಳಿಂದ 37 ಶತಕ ಸಿಡಿಸಿರುವ ಫವಾದ್ ಆಲಮ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದೀರ್ಘ ವಿರಾಮದ ನಂತರ ಮರಳಿದ ಪಾಕಿಸ್ತಾನ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಪಾಕಿಸ್ತಾನ 1973ರಲ್ಲಿ ಪದಾರ್ಪಣೆ ಮಾಡಿದ್ದ ಯೂನಿಸ್ ಅಹ್ಮದ್ 2ನೇ ಟೆಸ್ಟ್ ಪಂದ್ಯಗಳನ್ನಾಡಿದ್ದರು. ನಂತರ ಮೂರನೇ ಆಡಿದ್ದು 17 ವರ್ಷ 111 ದಿನಗಳ ನಂತರ.
-
Fawad Alam will play his first Test since 2009, coming in for Shadab Khan 🇵🇰
— ICC (@ICC) August 13, 2020 " class="align-text-top noRightClick twitterSection" data="
Zak Crawley and Sam Curran replace Ben Stokes and Jofra Archer for England 🏴 #ENGvPAK pic.twitter.com/hvyqdt6gP1
">Fawad Alam will play his first Test since 2009, coming in for Shadab Khan 🇵🇰
— ICC (@ICC) August 13, 2020
Zak Crawley and Sam Curran replace Ben Stokes and Jofra Archer for England 🏴 #ENGvPAK pic.twitter.com/hvyqdt6gP1Fawad Alam will play his first Test since 2009, coming in for Shadab Khan 🇵🇰
— ICC (@ICC) August 13, 2020
Zak Crawley and Sam Curran replace Ben Stokes and Jofra Archer for England 🏴 #ENGvPAK pic.twitter.com/hvyqdt6gP1
ಟೆಸ್ಟ್ ಕ್ರಿಕೆಟ್ಗೆ ಮರಳಿದ ಸಾರ್ವಕಾಲಿಕ ದಾಖಲೆ ದಕ್ಷಿಣ ಆಫ್ರಿಕಾದ ಜಾನ್ ಟ್ರೈಕೋಸ್ ಅವರ ಹೆಸರಿನಲ್ಲಿದೆ. ಅವರು ಬರೋಬ್ಬರಿ 22 ವರ್ಷ 222 ದಿನಗಳ ನಂತರ ಟೆಸ್ಟ್ಗೆ ಮರಳಿದ್ದರು. ಇವರನ್ನು ಬಿಟ್ಟರೆ ಇಂಗ್ಲೆಂಡ್ ತಂಡ ಗೆರಾತ್ ಬಟ್ಟಿ 11 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ ಮರಳಿದ್ದರು. ಯೂನೀಸ್ ಅಹ್ಮದ್ ಮತ್ತು ಜಾನ್ ಟ್ರೈಕೋಸ್ ಕ್ರಿಕೆಟ್ ಮಂಡಳಿಗಳಿಂದ ಸುದೀರ್ಘ ನಿಷೇಧಕ್ಕೊಳಗಾಗಿ ಮತ್ತೆ ಕ್ರಿಕೆಟ್ಗೆ ಮರಳಿದ್ದರು.