ETV Bharat / sports

ಇಂಗ್ಲಿಷ್‌ ಕ್ರಿಕೆಟಿಗರಿಗೆ ಹೊಟ್ಟೆನೋವು; ದೇಹದ ತೂಕ ಇಳಿಕೆ

author img

By

Published : Mar 9, 2021, 4:28 PM IST

ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿ ಕಳೆದ ವಾರ ಮುಗಿದಿದೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 3-1ರ ಅಂತರದಲ್ಲಿ ಸರಣಿ ವಶಪಡಿಸಿಕೊಂಡು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪ್ರವೇಶಿಸಿದೆ.

ಭಾರತ ಇಂಗ್ಲೆಂಡ್ ಟೆಸ್ಟ್​ ಸರಣಿ
ಬೆನ್​ ಸ್ಟೋಕ್ಸ್​

ಅಹ್ಮದಾಬಾದ್​: ಭಾರತದೆದುರಿನ 4ನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ತಮ್ಮನ್ನೂ ಸೇರಿದಂತೆ ಕೆಲವು ಇಂಗ್ಲೆಂಡ್ ಆಟಗಾರರು ಹೊಟ್ಟೆ ತೊಂದರೆಗೆ ತುತ್ತಾಗಿ ದಿಢೀರ್​ ತೂಕ ಕಳೆದುಕೊಂಡಿದ್ದಾರೆ ಎಂದು ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ತಿಳಿಸಿದ್ದಾರೆ.

4 ಪಂದ್ಯಗಳ ಟೆಸ್ಟ್​ ಸರಣಿ ಕಳೆದ ವಾರ ಮುಗಿದಿದೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 3-1ರ ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪ್ರವೇಶಿಸಿತು. ಕೊನೆಯ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್​ ಹಾಗೂ 25 ರನ್​ಗಳಿಂದ ಗೆದ್ದು ಬೀಗಿತ್ತು.

ನಮ್ಮ ತಂಡದ ಆಟಗಾರರು ಇಂಗ್ಲೆಂಡ್​ ಸಂಪೂರ್ಣವಾಗಿ ಬದ್ಧರಾಗಿದ್ದರು. ಹಾಗಾಗಿ ಕಳೆದ ವಾರ ತಂಡದ ಕೆಲವರು ಅನಾರೋಗ್ಯಕ್ಕೆ ಒಳಗಾಗಿದ್ದರೂ 41 ಡಿಗ್ರಿ ಉಷ್ಣಾಂಶವಿದ್ದ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದರು. ಪರಿಣಾಮ, ಒಂದು ವಾರದ ಅಂತರದಲ್ಲಿ ನಾನು 5 ಕೆ.ಜಿ ತೂಕ ಕಳೆದುಕೊಂಡಿದ್ದೇನೆ. ಡಾಮ್ ಸಿಬ್ಲೆ 4 ಕೆ.ಜಿ, ಜಿಮ್ಕಿ ಆ್ಯಂಡರ್ಸನ್​ 3 ಕೆ.ಜಿ ತೂಕ ಕಳೆದುಕೊಂಡಿದ್ದಾರೆ. ಜಾಕ್​ ಲೀಚ್​ ತಮ್ಮ ಬೌಲಿಂಗ್ ಸ್ಪೆಲ್ ಮುಗಿದ ನಂತರ ಮೈದಾನದ ಹೊರಗುಳಿಯುತ್ತಿದ್ದರು. ಆ ಸಮಯದಲ್ಲಿ ಅವರು ಶೌಚಾಲಯದಲ್ಲೇ ಹೆಚ್ಚು ಸಮಯ ಕಳೆದಿದ್ದರು ಎಂದು ಸ್ಟೋಕ್ಸ್​ ತಿಳಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್​ ನಡುವೆ 5 ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಕ್ರಿಕೆಟ್​ ಪಂದ್ಯಗಳು ಮಾರ್ಚ್​ 12ರಿಂದ ಆರಂಭವಾಗಲಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಇದನ್ನೂ ಓದಿ: ಧವನ್​ಗಿಂತಲೂ ರಾಹುಲ್ ಟಿ20ಯಲ್ಲಿ ರೋಹಿತ್​ಗೆ ಉತ್ತಮ ಜೋಡಿ: ವಿವಿಎಸ್ ಲಕ್ಷ್ಮಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.