ETV Bharat / sports

ಈ ದಿನದಂದೇ ಎರಡು ಬಾರಿ ತ್ರಿಶತಕ ಸಿಡಿಸಿ ಅಬ್ಬರಿಸಿದ್ದ ನಜಾಫಗಢ ನವಾಬ

ಟೀಂ ಇಂಡಿಯಾ ಪರ ಟೆಸ್ಟ್​ನಲ್ಲಿ ಮೊದಲ ತ್ರಿಶತಕ ಬಂದಿದ್ದು ಸೆಹ್ವಾಗ್ ಅವರ ಬ್ಯಾಟ್​ನಿಂದಲೇ. ಅಲ್ಲಿಯವರೆಗೆ ಡಬಲ್ ಸೆಂಚುರಿ ಸಾಧನೆಯಲ್ಲೇ ಕಳೆದು ಹೋಗುತ್ತಿದ್ದ ಭಾರತದ ಬ್ಯಾಟ್ಸ್​ಮನ್​ಗಳ ಮಧ್ಯೆ ಮೊದಲ ಬಾರಿ ಟ್ರಿಪಲ್ ಸೆಂಚುರಿ ಸಿಡಿಸಿ ಸೆಹ್ವಾಗ್ ದಾಖಲೆಯ ಪುಟ ಸೇರಿದ್ದರು.

Sehwag
ವಿರೇಂದ್ರ ಸೆಹ್ವಾಗ್
author img

By

Published : Mar 29, 2021, 10:39 AM IST

ನವದೆಹಲಿ: ಮಾರ್ಚ್​ 29 ರಂದು ಟೀಂ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟ್ಸ್​ಮನ್ ವಿರೇಂದ್ರ ಸೆಹ್ವಾಗ್ ಅವರಿಗೆ ವಿಶೇಷ ದಿನ. ಈ ದಿನವಂತೂ ವೀರು ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಏಕೆಂದರೆ ವಿರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್​ನ್ನು ಏಕದಿನ ಮಾದರಿಯಲ್ಲಿ ಆಡಿ ತ್ರಿಶತಕ ಸಿಡಿಸಿದ ದಿನವದು.

ಹೌದು, ಟೀಂ ಇಂಡಿಯಾ ಪರ ಟೆಸ್ಟ್​ನಲ್ಲಿ ಮೊದಲ ತ್ರಿಶತಕ ಬಂದಿದ್ದು ಸೆಹ್ವಾಗ್ ಅವರ ಬ್ಯಾಟ್​ನಿಂದಲೇ. ಅಲ್ಲಿಯವರೆಗೆ ಡಬಲ್ ಸೆಂಚುರಿ ಸಾಧನೆಯಲ್ಲೇ ಕಳೆದು ಹೋಗುತ್ತಿದ್ದ ಭಾರತದ ಬ್ಯಾಟ್ಸ್​ಮನ್​ಗಳ ಮಧ್ಯೆ ಮೊದಲ ಬಾರಿ ಟ್ರಿಪಲ್ ಸೆಂಚುರಿ ಸಿಡಿಸಿ ಸೆಹ್ವಾಗ್ ದಾಖಲೆಯ ಪುಟ ಸೇರಿದ್ದರು. 2004 ರಲ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಸೆಹ್ವಾಗ್ ತ್ರಿಶತಕ ಸಿಡಿಸಿದ್ದರು. ಅಚ್ಚರಿಯ ವಿಷಯ ಎಂದರೆ ಈ ಸಾಧನೆ ಮಾಡಿದ ಇದೇ ದಿನಾಂಕದಂದೇ ಮತ್ತೊಮ್ಮೆ ವೀರು ತ್ರಿಶತಕ ಬಾರಿಸಿ ತಮ್ಮ ದಾಖಲೆಯನ್ನ ತಾವೇ ಮುರಿದಿದ್ದರು.

ನಜಾಫ್​ಗಢದ ನವಾಬ ಎಂದೇ ಖ್ಯಾತಿ ಪಡೆದಿದ್ದ ವಿರೇಂದ್ರ ಸೆಹ್ವಾಗ್ 2004, ಮಾರ್ಚ್​ 29 ರಂದು ಪಾಕಿಸ್ತಾನ ವಿರುದ್ಧ ಪಾಕ್​ನಲ್ಲಿ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದಿದ್ದರು. ಪಾಕಿಸ್ತಾನದ ವಿರುದ್ಧದ ಮೂರು ಟೆಸ್ಟ್​​ ಪಂದ್ಯಗಳ ಸರಣಿಯ ಮೊದಲ ಟೆಸ್ಟ್​ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆಕಾಶ್ ಚೋಪ್ರಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಸೆಹ್ವಾಗ್, ಏಕದಿನ, ಟಿ-20 ಮಾದರಿಯಲ್ಲಿ ಬ್ಯಾಟಿಂಗ್ ಆರಂಭಿಸಿದರು.

ಒಂದೆಡೆ ಆಕಾಶ್ ಚೋಪ್ರಾ (42 ರನ್) ಮತ್ತು ರಾಹುಲ್ ದ್ರಾವಿಡ್ ( 6 ) ರನ್​ಗಳಿಸಿ ಬೇಗನೆ ಔಟಾಗಿ ತಂಡ ಸಂಕಷ್ಟದಲ್ಲಿತ್ತು. ಇತ್ತ ಸೆಹ್ವಾಗ್ ಮಾತ್ರ ಬಿರುಸಿನ ಆಟವನ್ನೇ ಮುಂದುವೆರೆಸಿದ್ದರು. ಮೊದಲ ದಿನದಾಟದ ಅಂತ್ಯದಲ್ಲಿ ಸೆಹ್ವಾಗ್ ಅಜೇಯ 228 ರನ್​ ಸಿಡಿಸಿದ್ದರು. ಮರುದಿನ ಸಕ್ಲೇನ್ ಮುಷ್ತಾಕ್ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಸೆಹ್ವಾಗ್ 300 ರನ್ ಪೂರೈಸಿದರು. ಕೇವಲ 364 ಎಸೆತಗಳನ್ನು ಎದುರಿಸಿದ ವೀರು ಭಾರತದ ಪರ ಮೊದಲ ತ್ರಿಶತಕ ಸಿಡಿಸಿದ ಆಟಗಾರ ಎಂಬ ಹೇಗ್ಗಳಿಕೆಗೆ ಪಾತ್ರರಾಗಿದ್ದರು. 375 ಎಸೆತಗಳಲ್ಲಿ ಒಟ್ಟು 309 ರನ್ ಗಳಿಸಿದ ವೀರು ಕೊನೆಗೂ ವಿಕೆಟ್ ಒಪ್ಪಿಸಿದರು. ಈ ವೇಳೆ, ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 39 ಬೌಂಡರಿ ಮತ್ತು 6 ಸಿಕ್ಸರ್​ಗಳು ಹರಿದು ಬಂದಿದ್ದವು. ಈ ಪಂದ್ಯವನ್ನು ಟೀಂ ಇಂಡಿಯಾ 52 ರನ್​ಗಳಿಂದ ಗೆದ್ದುಕೊಂಡಿತ್ತು.

  • 29th March- a special date for me. Had the privilege and honour of becoming the first Indian to score a triple hundred in Test cricket. Icing in the cake was to score against Pakistan in Multan.

    Coincidentally 4 years later on the same date got out on 319 against South Africa. pic.twitter.com/ZKBHa5rCOA

    — Virender Sehwag (@virendersehwag) March 29, 2021 " class="align-text-top noRightClick twitterSection" data=" ">

ತಾವು ಸಿಡಿಸಿದ ತ್ರಿಶತಕ ವನ್ನ ನೆನಪಿಸಿಕೊಂಡ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. "ಮಾರ್ಚ್ 29- ನನಗೆ ವಿಶೇಷ ದಿನಾಂಕ. ಟೆಸ್ಟ್ ಕ್ರಿಕೆಟ್​​ನಲ್ಲಿ ತ್ರಿಶತಕ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಮತ್ತು ಗೌರವ ಹೊಂದಿದ್ದೆ. ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸ್ಕೋರ್ ಮಾಡುವುದು ಕೇಕ್ ಮೇಲೆ ಐಸಿಂಗ್ ಮಾಡಿದ ಹಾಗೇ ಇತ್ತು. ಕಾಕತಾಳೀಯವಾಗಿ 4 ವರ್ಷಗಳ ನಂತರ ಅದೇ ದಿನಾಂಕದಂದು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಂದು ತ್ರಿಶತಕ (319) ಹೊರಬಂದಿತು. " ಎಂದು ಟ್ವೀಟ್​ ಮಾಡಿದ್ದಾರೆ.

ಓದಿ : ಆಂಗ್ಲರ ವಿರುದ್ಧ 7 ರನ್​ಗಳ ರೋಚಕ ಜಯ ಸಾಧಿಸಿದ ಭಾರತ.. 2-1ರಲ್ಲಿ ಏಕದಿನ ಸರಣಿ ವಶ!

ಈ ಸಾಧನೆ ಮಾಡಿ ಬರೋಬ್ಬರಿ ನಾಲ್ಕು ವರ್ಷಕ್ಕೆ ಸೆಹ್ವಾಗ್ ಮತ್ತೊಮ್ಮೆ ಆರ್ಭಟಿಸಿದ್ದರು. ಚೆನ್ನೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ ಮುಲ್ತಾನ್​ ಕಾ ಸುಲ್ತಾನ್ ತಮ್ಮ ಹಳೆಯ ಖದರ್ ತೋರಿಸಿದ್ದರು. ಚೆನ್ನೈ ಪಿಚ್‌ನಲ್ಲಿ ಕೇವಲ 116 ಎಸೆತಗಳಲ್ಲಿ ಶತಕ ಪೂರೈಸಿದ್ದ, ಸೆಹ್ವಾಗ್ ದ್ವಿಶತಕವನ್ನು 200 ಎಸೆತಗಳಲ್ಲಿ ಪೂರೈಸಿದ್ದರು.

ದಕ್ಷಿಣ ಆಫ್ರಿಕಾ ಬೌಲರುಗಳ ಬೆಂಡೆತ್ತಿದ ವೀರು, ಕೇವಲ 278 ಎಸೆತಗಳಲ್ಲಿ ತ್ರಿಶತಕ ಪೂರೈಸಿ ಹೊಸ ದಾಖಲೆ ಬರೆದಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ತ್ರಿಪಲ್ ಸೆಂಚುರಿ ಎಂಬ ರೆಕಾರ್ಡ್ ಆಗಿ ಉಳಿದಿದೆ. ಈ ದಾಖಲೆಯ ಇನಿಂಗ್ಸ್​ನಲ್ಲಿ ಸೆಹ್ವಾಗ್ ಬ್ಯಾಟ್​ನಿಂದ ಮೂಡಿ ಬಂದಿದ್ದು 42 ಭರ್ಜರಿ ಬೌಂಡರಿ ಹಾಗೂ 5 ಸೂಪರ್ ಸಿಕ್ಸರ್​ಗಳು. 304 ಎಸೆತಗಳಲ್ಲಿ 319 ರನ್ ಬಾರಿಸಿ ತಮ್ಮದೇ ಈ ಹಿಂದಿನ 309 ರನ್​ಗಳ ದಾಖಲೆಯನ್ನ ಅವರೇ ಅಳಿಸಿ ಹಾಕಿದ್ದರು.

ಸೆಹ್ವಾಗ್ ಅವರಲ್ಲದೆ ಭಾರತ ಪರ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಬಾರಸಿದ್ದಾರೆ. 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಾಯರ್ ಈ ಸಾಧನೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.