ಟೌರಂಗಾ (ನ್ಯೂಜಿಲೆಂಡ್): ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ ಕಿವೀಸ್ ಪರ ಅತಿ ಹೆಚ್ಚು ಬಾರಿ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ವಿಲಿಯಮ್ಸನ್ ಈ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಕಿವೀಸ್ ಪರ 55 ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಪಾಕ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 129 ರನ್ ಗಳಿಸಿದ ವಿಲಿಯಮ್ಸನ್ ಈ ಸಾಧನೆ ಮಾಡಿದ್ದಾರೆ.
-
💯 for Kane Williamson 🎉
— ICC (@ICC) December 26, 2020 " class="align-text-top noRightClick twitterSection" data="
The New Zealand captain goes to his 23rd Test century with a crisp cover drive for four👏
How many will he go on to score today?#NZvPAK SCORECARD ▶️ https://t.co/LMlsERb5mp pic.twitter.com/zslK7O2WLS
">💯 for Kane Williamson 🎉
— ICC (@ICC) December 26, 2020
The New Zealand captain goes to his 23rd Test century with a crisp cover drive for four👏
How many will he go on to score today?#NZvPAK SCORECARD ▶️ https://t.co/LMlsERb5mp pic.twitter.com/zslK7O2WLS💯 for Kane Williamson 🎉
— ICC (@ICC) December 26, 2020
The New Zealand captain goes to his 23rd Test century with a crisp cover drive for four👏
How many will he go on to score today?#NZvPAK SCORECARD ▶️ https://t.co/LMlsERb5mp pic.twitter.com/zslK7O2WLS
ಟೆಸ್ಟ್ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ಪರ ಹೆಚ್ಚು ಅರ್ಧಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ವಿಲಿಯಮ್ಸನ್ ಇನ್ನೂ 15 ಅರ್ಧಶತಕ ಸಿಡಿಸಬೇಕು. 46 ಅರ್ಧಶತಕ ಬಾರಿಸಿರುವ ಫ್ಲೆಮಿಂಗ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಪಾಕ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ನ್ಯೂಜಿಲೆಂಡ್ ತಂಡಕ್ಕೆ ವಿಲಿಯಮ್ಸನ್ ಆಸರೆಯಾದ್ರು. ತಾಳ್ಮೆಯಿಂದ ಬ್ಯಾಟ್ ಬೀಸಿದ ಕಿವೀಸ್ ನಾಯಕ, ಟೆಸ್ಟ್ ಕ್ರಿಕೆಟ್ನಲ್ಲಿ 23ನೇ ಶತಕ ದಾಖಲಿಸಿ ಬೃಹತ್ ಮೊತ್ತ ಪೇರಿಸುವಲ್ಲಿ ತಂಡಕ್ಕೆ ನೆರವಾಗಿದ್ದಾರೆ.