ETV Bharat / sports

ವೆಸ್ಟರ್ನ್‌ ಅಂಡ್​ ಸದರ್ನ್‌ ಓಪನ್: ವೃತ್ತಿ ಜೀವನದ 35ನೇ ಮಾಸ್ಟರ್ಸ್​ ಟೂರ್ನಿ ಗೆದ್ದ ಜೋಕೊವಿಕ್​ - ವೃತ್ತಿ ಜೀವನದ 35ನೇ ಮಾಸ್ಟರ್ಸ್​ ಟೂರ್ನಿಗೆದ್ದ ಜೋಕೊವಿಕ್​

ಈ ಟೂರ್ನಿ ಗೆಲ್ಲುವ ಮೂಲಕ ಸರ್ಬಿಯನ್​ ಟೆನ್ನಿಸ್​ಪಟು ಸ್ಪೇನಿನ ರಾಫೆಲ್​ ನಡಾಲ್​ (35)ರ ದಾಖಲೆಯನ್ನು ಸರಿಗಟ್ಟಿದರು. ನಡಾಲ್​ ಕೂಡ 35 ಮಾಸ್ಟರ್​ 1000 ಟೂರ್ನಿ ಗೆದ್ದಿದ್ದಾರೆ.

ನೊವಾಕ್​ ಜೋಕೊವಿಕ್​
ನೊವಾಕ್​ ಜೋಕೊವಿಕ್​
author img

By

Published : Aug 30, 2020, 1:00 PM IST

ನ್ಯೂಯಾರ್ಕ್‌: ವಿಶ್ವದ ನಂಬರ್​ ಒನ್​ ಟೆನ್ನಿಸ್​ ಆಟಗಾರ ನೊವಾಕ್​ ಜೋಕೊವಿಕ್ ವೆಸ್ಟರ್ನ್‌ ಅಂಡ್​ ಸದರ್ನ್‌ ಓಪನ್‌ ಪ್ರಶಸ್ತಿ ಗೆಲ್ಲುವ ಮೂಲಕ ವೃತ್ತಿ ಜೀವನದಲ್ಲಿ 35ನೇ ಮಾಸ್ಟರ್ಸ್​ ಪ್ರಶಸ್ತಿ ಗೆದ್ದಿದ್ದಾರೆ.

ಈ ಟೂರ್ನಿ ಗೆಲ್ಲುವ ಮೂಲಕ ಸರ್ಬಿಯನ್​ ಟೆನ್ನಿಸ್​ಪಟು ಸ್ಪೇನಿನ ರಾಫೆಲ್​ ನಡಾಲ್​ (35)ರ ದಾಖಲೆಯನ್ನು ಸರಿಗಟ್ಟಿದರು. ನಡಾಲ್​ ಕೂಡ 35 ಮಾಸ್ಟರ್​ 1000 ಟೂರ್ನಿ ಗೆದ್ದಿದ್ದಾರೆ.

ಜೊಕೊವಿಚ್‌ ನಿನ್ನೆ ನಡೆದ ಫೈನಲ್​ ಪಂದ್ಯದಲ್ಲಿ ಕೆನಡಾದ ಮಿಲೊಸ್‌ ರಾನಿಕ್​ ವಿರುದ್ಧ 1-6, 6-3, 6-4 ಸೆಟ್​ಗಳ ಅಂತರದಿಂದ ಮಣಿಸಿ ವೆಸ್ಟರ್ನ್​ ಮತ್ತು ಸದರ್ನ್​ ಟ್ರೋಫಿ ಎತ್ತಿ ಹಿಡಿದಿದ್ದಾರೆ.

ನೊವಾಕ್​ ಜೋಕೊವಿಕ್​

ನಾನು ಯಾವಾಗಲು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸವಾಲಾಗಿರುತ್ತೇನೆ. ಹಾಗಿದ್ದಾಗ ಮಾತ್ರ ಉನ್ನತಮಟ್ಟದ ಟೂರ್ನಿಗಳಲ್ಲಿಸ್ಪರ್ಧಿಸಲು ಮತ್ತು ಪ್ರಶಸ್ತಿ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಜೋಕೊವಿಕ್​ ಹೇಳಿದ್ದಾರೆ. ಜೊತೆಗೆ ಈ ವರ್ಷ ಆಡಿದ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿರುವುದಕ್ಕೆ ಸಂತೋಷವಿದೆ ಎಂದು ಅವರು ತಿಳಿಸಿದ್ದಾರೆ.

ಜೊಕೊವಿಚ್‌ 2016ರ ವಿಂಬಲ್ಡನ್‌ ಟೂರ್ನಿಯ ರನ್ನರ್‌ಅಪ್‌ ಆಗಿರುವ ರಾನಿಕ್ ಎದುರು ಆಡಿದ ಎಲ್ಲಾ 11 ಪಂದ್ಯ ದಲ್ಲೂ ಗೆಲುವು ಸಾಧಿಸಿದಂತಾಗಿದೆ.

ಮಹಿಳೆಯರ ವಿಭಾಗದ ಫೈನಲ್ ಪಂದ್ಯದಿಂದ ಜಪಾನ್​ನ ನವೋಮಿ ಒಸಾಕಾ ಗಾಯದ ಕಾರಣ ಹಿಂದೆ ಸರಿದಿದ್ದರಿಂದ ವಿಕ್ಟೋರಿಯಾ ಅಜರೆಂಕಾ ಚಾಂಪಿಯನ್​ ಆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.