ಬ್ರಿಸ್ಬೇನ್: ಮೊದಲ ಪಂದ್ಯದಲ್ಲಿ 36 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡ ನಂತರ ಗಾಯದಿಂದ ಹೊಡೆತ ತಿಂದು ತಂಡ ಟೆಸ್ಟ್ ಸರಣಿ ಗೆದ್ದಿರುವುದು ನಿಜಕ್ಕೂ ಅಚ್ಚರಿ ಎನಿಸುತ್ತಿದೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
"ಇದು ಅತ್ಯಂತ ಕಠಿಣ ಪ್ರವಾಸ. ಇದನ್ನು ಯಾವುದರಿಂದಲೂ ಮೀರಿಸಲು ಸಾಧ್ಯವಿಲ್ಲ. ಕೇವಲ 36 ರನ್ಗಳಿಗೆ ಆಲೌಟ್ ಆದ ನಂತರ, ಸರಣಿ ಗೆದ್ದಿರುವುದು ರೋಚಕ. ಪಂದ್ಯವನ್ನು ಬಿಟ್ಟುಕೊಡುವುದು (ಗಿವಿಂಗ್ ಅಪ್) ನಮ್ಮ ಶಬ್ದಕೋಶದಲ್ಲಿಲ್ಲ" ಎಂದು ಸರಣಿಯನ್ನು 2-1ರಲ್ಲಿ ಗೆದ್ದ ನಂತರ ಶಾಸ್ತ್ರಿ ಹೇಳಿದರು.
- ' class='align-text-top noRightClick twitterSection' data=''>
ಭಾರತೀಯ ತಂಡ ಮಂಗಳವಾರ ಆಸ್ಟ್ರೇಲಿಯಾ ನೀಡಿದ್ದ 328 ರನ್ಗಳ ಗುರಿಯನ್ನು ಇನ್ನೂ 3 ಓವರ್ಗಳ ಆಟ ಬಾಕಿ ಇರುವಂತೆ ಗೆದ್ದು ಬೀಗಿದೆ. ಯುವ ಆಟಗಾರರಾದ ಶುಬ್ಮನ್ ಗಿಲ್ 91 ರನ್ ಹಾಗೂ ರಿಷಭ್ ಪಂತ್ 89 ರನ್ಗಳಿಸಿ 32 ವರ್ಷಗಳಿಂದ ಬ್ರಿಸ್ಬೇನ್ನಲ್ಲಿ ಸೋಲಿಲ್ಲದೆ ಮೆರೆದಾಡಿದ್ದ ಆಸೀಸ್ ತಂಡಕ್ಕೆ ಆಘಾತ ನೀಡಿದರು.
ಇದನ್ನೂ ಓದಿ:'ಭಾರತದಲ್ಲಿ 1.5 ಬಿಲಿಯನ್ ಜನರಿದ್ದಾರೆ, ಅಲ್ಲಿಂದ ಬಂದಿರುವ 11 ಮಂದಿಯೆದುರು ಆಡುವುದು ಕಠಿಣ'