ದುಬೈ : 13ನೇ ಐಪಿಎಲ್ಗೆ ಇನ್ನೂ ಕೆಲವೇ ದಿನಗಳಿವೆ. ಈ ಹಿಂದಿನ ಆವೃತ್ತಿಗಳಿಗಿಂತ ಆಟಗಾರರಿಗೆ ಮತ್ತು ಅಭಿಮಾನಿಗಳಿಗೆ ಈ ಆವೃತ್ತಿ ವಿಭಿನ್ನವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇ ತಲುಪಿದ್ದು ಬಯೋ ಸೆಕ್ಯೂರ್ ವಲಯದಲ್ಲಿ ಸೇರಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರೋಟೋಕಾಲ್ಗಳನ್ನು ಮೀರದಂತೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರಿಗೆ ಎಚ್ಚರಿಸಿದ್ದಾರೆ.
ಕೊರೊನಾ ಭೀತಿಯಿರುವುದರಿಂದ ಮೊದಲ ಕೆಲವು ಪಂದ್ಯಗಳು ಅಭಿಮಾನಿಗಳಿಲ್ಲದೆ ಜೀವ ಸುರಕ್ಷತಾ ವಲಯದಲ್ಲಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ. ಈ ಸಂದರ್ಭದಲ್ಲಿ ತಮ್ಮ ತಂಡದ ಆಟಗಾರರೂ ಮುನ್ನೆಚ್ಚರಿಕಾ ಕ್ರಮ ಅನುಸರಿಸುವಂತೆ ಕೊಹ್ಲಿ ತಿಳಿಸಿದ್ದಾರೆ.
- " class="align-text-top noRightClick twitterSection" data="">
ಕೋವಿಡ್-19 ಪರಿಸ್ಥಿತಿಯ ವಿಚಾರವಾಗಿ ನಾನು ಹೇಳಿರುವ ವಿಚಾರಗಳು ಯಾರಿಗೂ ಒತ್ತಡದ ವಿಷಯವಾಗಬಾರದು. ನಾವೆಲ್ಲರೂ ಕ್ರಿಕೆಟ್ ಆಡಲು ಮತ್ತು ಈ ಟೂರ್ನಿ ಯಶಸ್ವಿಗೊಳಿಸಲು ಇಲ್ಲಿದ್ದೇವೆ. ಟೂರ್ನಾಮೆಂಟ್ಗಾಗಿ ಎಲ್ಲರೂ ಬಯೋ ಸೆಕ್ಯೂರ್ ನಿಯಮಗಳನ್ನು ಗೌರವಿಸಬೇಕು ಎಂದು ಆರ್ಸಿಬಿ ಅಧಿಕೃತ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ನಾವಿಲ್ಲಿದ್ದೇವೆ ಅಂದರೆ ಅದು ಕ್ರಿಕೆಟ್ ಆಡುವ ಅವಕಾಶ ಸಿಕ್ಕಿರುವುದರಿಂದ. ನಾವಿಲ್ಲಿ ಬಂದಿರುವುದು ಮೋಜು-ಮಸ್ತಿ ಮಾಡಿ ದುಬೈ ಸುತ್ತಾಡೋದಕ್ಕಲ್ಲ. ಅದಕ್ಕೆ ಇದು ಸಮಯವೂ ಅಲ್ಲ. ನಾವೆಲ್ಲರೂ ಪ್ರಸ್ತುತ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಬೇಕು. ಮತ್ತು ಪ್ರತಿಯೊಬ್ಬರು ಅದನ್ನು ಒಪ್ಪಿಕೊಳ್ಳಬೇಕು. ಮತ್ತು ಪರಿಸ್ಥಿತಿಗೆ ವಿರುದ್ಧವಾಗಿ ಯಾವುದೇ ಕೆಲಸಗಳನ್ನು, ಆಸೆಗಳನ್ನು ಹೊಂದಿರಬಾರದು"ಎಂದು ಕೊಹ್ಲಿ ಆರ್ಸಿಬಿ ಆಟಗಾರರಿಗೆ ಎಚ್ಚಿರಿಕೆ ನೀಡಿದ್ದಾರೆ.