ಅಹಮದಾಬಾದ್ (ಗುಜರಾತ್): ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ-20 ಪಂದ್ಯದಲ್ಲಿ ಭಾರತ 8 ರನ್ಗಳ ಗೆಲುವು ದಾಖಲಿಸಿದೆ. ಈ ಬಳಿಕ ಮಾತನಾಡಿದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್, "ನಾನು ಪಂದ್ಯದಿಂದ ಔಟಾದ ಬಗ್ಗೆ ನಿರಾಸೆಯಾಗಿಲ್ಲ. ಈ ವಿಚಾರ ನನ್ನ ನಿಯಂತ್ರಣದಲ್ಲಿಲ್ಲ" ಎಂದು ಹೇಳಿದರು.
ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಬಂದ ಸೂರ್ಯಕುಮಾರ್ ಯಾದವ್ ಕೇವಲ 31 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 57 ರನ್ಗಳಿಸಿ ಅನುಮಾನಾಸ್ಪದ ಕ್ಯಾಚ್ಗೆ ಬಲಿಯಾದರು. ನಾಲ್ಕನೇ ಟಿ -20ಯಲ್ಲಿ ಜಯಗಳಿಸುವುದರೊಂದಿಗೆ, ಭಾರತ ಐದು ಪಂದ್ಯಗಳ ಸರಣಿಯನ್ನು 2-2ರಿಂದ ಸಮಬಲ ಸಾಧಿಸಿದೆ. ಸರಣಿ ಯಾರ ಮುಡಿಗೆ ಎಂಬುವುದು ಶನಿವಾರ ನಡೆಯುವ ಪಂದ್ಯದಲ್ಲಿ ನಿರ್ಧಾರವಾಗಲಿದೆ.
ವಿವಾದಾತ್ಮಕ ತೀರ್ಪಿಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಸೂರ್ಯಕುಮಾರ್, "ನಾನು ಬ್ಯಾಟಿಂಗ್ ಮಾಡಲು ಹೊರಟಾಗ ನನ್ನ ಯೋಜನೆ ನಿಜವಾಗಿಯೂ ಸ್ಪಷ್ಟವಾಗಿತ್ತು. ಐಪಿಎಲ್‌ನಲ್ಲಿ ಕಳೆದ ಎರಡು - ಮೂರು ಕಂತುಗಳಲ್ಲಿ ನಾನು ಆರ್ಚರ್‌ನನ್ನು ನೋಡಿದ್ದೇನೆ. ಹೊಸ ಬ್ಯಾಟ್ಸ್‌ಮನ್ ಬಂದಾಗಲೆಲ್ಲಾ ನಾನು ಅವರ ಎಲ್ಲಾ ಆಟಗಳನ್ನು ನೋಡಿದ್ದೇನೆ. ಅವರು ಯಾವ ಯೋಜನೆಗಳನ್ನು ಹೊಂದಿದ್ದಾರೆ ಎಂಬುದು ಅರ್ಥೈಸಿಕೊಂಡಿದ್ದೇನೆ "ಎಂದು ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
"ಭಾರತಕ್ಕಾಗಿ ಮೂರನೆಯ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಇದು ನನಗೆ ಒಂದು ಉತ್ತಮ ಅವಕಾಶವಾಗಿತ್ತು. ನನ್ನನ್ನು ಔಟ್ ಎಂದು ಘೋಷಿಸಿದ ಬಗ್ಗೆ ನಿಜವಾಗಿಯೂ ನಿರಾಸೆಗೊಂಡಿಲ್ಲ. ಏಕೆಂದರೆ ಕೆಲವು ವಿಷಯಗಳು ನನ್ನ ನಿಯಂತ್ರಣದಲ್ಲಿಲ್ಲ. ನನ್ನ ನಿಯಂತ್ರಣದಲ್ಲಿರುವ ವಿಷಯಗಳು, ಅದನ್ನು ನಿಯಂತ್ರಿಸಲು ನಾನು ಪ್ರಯತ್ನಿಸುತ್ತೇನೆ" ಎಂದರು.