ಮುಂಬೈ: ಭಾರತ ತಂಡಕ್ಕೆ ನಾಯಕತ್ವ ಪ್ರತ್ಯೇಕತೆಯ ಅಗತ್ಯವಿಲ್ಲ, ವಿರಾಟ್ ಕೊಹ್ಲಿ ಎಲ್ಲ ಮಾದರಿಯಲ್ಲೂ ಅತ್ಯುತ್ತಮ ನಾಯಕತ್ವ ಪ್ರದರ್ಶನ ತೋರುತ್ತಿದ್ದಾರೆ ಎಂದು ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 2016ರಲ್ಲಿ ಟೆಸ್ಟ್ ಕ್ರಿಕೆಟ್ಗೆ ನಾಯಕತ್ವ ವಹಿಸಿಕೊಂಡ ನಂತರ ಅವರ ಸ್ಥಾನವನ್ನು ಅಲಂಕರಿಸಿದ ವಿರಾಟ್ ಪ್ರಸ್ತುತ ಮೂರು ಮಾದರಿಯ ಕ್ರಿಕೆಟ್ನಲ್ಲಿ ಅತ್ಯುತ್ತಮ ನಾಯಕರಾಗಿ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಕ್ರಿಕೆಟ್ ತಜ್ಞರು ಕೆಲಸ ಹೊರೆ ನಿರ್ವಹಿಸಲು ರೋಹಿತ್ ಶರ್ಮಾ ಜೊತೆ ಸೀಮಿತ ಓವರ್ಗಳ ನಾಯಕತ್ವ ಹಂಚಿಕೊಳ್ಳಲಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಆಭಿಮಾನಿಗಳು ಟ್ವಿಟರ್ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮಂಜ್ರೇಕರ್, ಭಾರತ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ, ಎಲ್ಲ ಮಾದರಿಯಲ್ಲೂ ಉತ್ತಮವಾಗಿ ತಂಡವನ್ನ ಮುನ್ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕತ್ವ ವಿಭಜನೆಯ ಅಗತ್ಯವಿಲ್ಲ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ಮತ್ತು ಕೊಹ್ಲಿಯಂತಹ ನಾಯಕತ್ವವನ್ನು ಪಡೆಯಲು ಭಾರತ ಅದೃಷ್ಠ ಮಾಡಿದೆ. ಇಬ್ಬರು ಎಲ್ಲ ಮಾದರಿಯಲ್ಲಿ ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಧೋನಿ ದಾರಿಯಲ್ಲೇ ನಡೆಯುತ್ತಿರುವ ಕೊಹ್ಲಿ ನಾಯಕತ್ವದ ಪ್ರತ್ಯೇಕತೆ ಅಗತ್ಯವಿಲ್ಲ ಎಂದಿದ್ದಾರೆ.
ಭವಿಷ್ಯದಲ್ಲಿ ನಾಯಕತ್ವ ವಿಭಜನೆ ಮಾಡಬಹುದು. ಭಾರತ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ನಾಯಕ ಮತ್ತು ಉತ್ತಮ ಟೆಸ್ಟ್ ಆಟಗಾರನನ್ನು ಹೊಂದಿದ್ದು, ಆದರೆ, ಆತ 50 ಓವರ್ಗಳ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡದಂತ ಸಮಯದಲ್ಲಿ ಬೇಕಾದರೆ ನಾಯಕತ್ವ ವಿಭಜನೆಯ ಬಗ್ಗೆ ಆಲೋಚಿಸಬಹುದು ಎಂದು ಅವರು ತಿಳಿಸಿದ್ದಾರೆ.
ವಿಶ್ವದ ಹಲವಾರು ತಂಡಗಳು ವಿವಿಧ ಮಾದರಿಯ ಕ್ರಿಕೆಟ್ಗೆ ಬೇರೆ ಬೇರೆ ನಾಯಕರನ್ನು ಹೊಂದಿದೆ, ಆದರೆ ಮೂರು ಮಾದರಿಯ ಕ್ರಿಕೆಟ್ಗೂ ಒಬ್ಬನೇ ನಾಯಕನಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದು.
ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ಗೆ ಟಿಮ್ ಪೇನ್ ಹಾಗೂ ಸೀಮಿತ ಓವರ್ಗಳ ಕ್ರಿಕೆಟ್ಗೆ ಆ್ಯರೋನ್ ಫಿಂಚ್ರನ್ನು ನಾಯಕನನ್ನಾಗಿ ನೇಮಿಸಿದೆ, ಇಂಗ್ಲೆಂಡ್ ಕೂಡ ಜೋ ರೂಟ್ಗೆ ಟೆಸ್ಟ್ ನಾಯಕತ್ವವನ್ನು, ವೈಟ್ ಬಾಲ್ ಕ್ರಿಕೆಟ್ಗೆ ಇಯಾನ್ ಮಾರ್ಗನ್ ಅವರನ್ನು ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.