ETV Bharat / sports

ಬಜೆಟ್ ಭಾಷಣದಲ್ಲಿ ಟೀಂ ಇಂಡಿಯಾ ಅದ್ಭುತ ಗೆಲುವಿನ ಉಲ್ಲೇಖ! - ಬಜೆಟ್​ ವೇಳೆ ಟೀಂ ಇಂಡಿಯಾ ಗೆಲುವು

2021-21ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಲಾಗ್ತಿದ್ದು, ಈ ವೇಳೆ ನಿರ್ಮಲಾ ಸೀತಾರಾಮನ್​ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಮೆಲುಕು ಹಾಕಿದ್ದಾರೆ.

Nirmala Sitharaman
Nirmala Sitharaman
author img

By

Published : Feb 1, 2021, 12:27 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಸಂಸತ್​ನಲ್ಲಿ 2021-22ನೇ ಸಾಲಿನ ಬಜೆಟ್​ ಮಂಡನೆ ಮಾಡ್ತಿದ್ದು, ಈ ವೇಳೆ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಸಾಧಿಸಿರುವ ಐತಿಹಾಸಿಕ ಗೆಲುವು ನೆನಪಿಸಿಕೊಂಡಿದ್ದಾರೆ.

ಓದಿ: ಬಜೆಟ್ ಮಂಡನೆ: ಮುಂಬೈ ಷೇರು ಸೂಚ್ಯಂಕ 899 ಅಂಕ ಏರಿಕೆ!

ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಅದ್ಭುತ ಯಶಸ್ಸು ಸಾಧಿಸಿದೆ ಎಂದು ಉಲ್ಲೇಖ ಮಾಡಿರುವ ಅವರು, ನನ್ನಿಂದ ಅವರಿಗೆ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಆ ಸಂತೋಷವನ್ನು ಇಡೀ ದೇಶವೇ ಆನಂದಿಸುತ್ತಿದೆ ಎಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇದಾದ ಬಳಿಕ ಭಾರತ ಮತ್ತಷ್ಟು ಕ್ರಿಕೆಟ್ ಪ್ರೀತಿಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಯುವಕರ ಬಗ್ಗೆ ಹೇರಳವಾದ ಭರವಸೆ ಇದೆ. ಸಾಧನೆ ಮಾಡಲು ಅವರಿಗೆ ಬೆಂಬಲಿಸಿರುವುದರಿಂದ ಈ ಐತಿಹಾಸಿಕ ಗೆಲುವು ಹೊರಬಂದಿದೆ ಎಂದು ಅವರು ತಿಳಿಸಿದರು.

ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದ ಐತಿಹಾಸಿಕ ಗೆಲುವು ದಾಖಲು ಮಾಡಿತ್ತು. ಈ ಮೂಲಕ ಕಾಂಗರೂ ನಾಡಿನಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.