ETV Bharat / sports

ಕೊನೆಯ ಓವರ್​ನಲ್ಲಿ ಸಿಂಗಲ್​​ ರನ್​​ ನಿರಾಕರಿಸಿದ ಸಾಮ್ಸನ್​ ಪರ ನಿಂತ ಸಂಗಕ್ಕರ ಹೇಳಿದ್ದೇನು?

author img

By

Published : Apr 13, 2021, 5:21 PM IST

ಸಂಜು ತಮ್ಮ ಜವಾಬ್ದಾರಿಯನ್ನು ಮುಗಿಸಿಲು ತಮ್ಮನ್ನು ತಾವು ನಂಬಿದ್ದರು. ಆ ಕೆಲಸವನ್ನು ಭಾಗಶಃ ಮುಗಿಸಿದ್ದರು. ಆದರೆ ಕೊನೆಯ ಎಸೆತದಲ್ಲಿ ಸಿಕ್ಸರ್​ಗಾಗಿ ಬಾರಿಸಿದ ಚೆಂಡು 5ರಿಂದ 6 ಅಡಿ ಹಿಂದೆ ಉಳಿಯಿತು. ನೀವು ಫಾರ್ಮ್​ನಲ್ಲಿದ್ದರೆ, ನೀವು ಚೆನ್ನಾಗಿ ಚೆಂಡನ್ನು ದಂಡಿಸುತ್ತಿರುವಾಗ, ನೀವು ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಬಹುದು" ಎಂದು ಸಂಗಕ್ಕರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಂಜು ಸಾಮ್ಸನ್​
ಸಂಜು ಸಾಮ್ಸನ್​

ಮುಂಬೈ: ಸೋಮವಾರ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ಕೊನೆಯ ಓವರ್​ನ 5ನೇ ಎಸೆತದಲ್ಲಿ ಸಿಂಗಲ್​ ರನ್​​ ತೆಗೆದುಕೊಳ್ಳಲು ನಿರಾಕರಿಸಿ ಮೋರಿಸ್​ರನ್ನು ವಾಪಸ್​ ಕಳುಹಿಸಿ ಕೊನೆಯ ಎಸೆತದಲ್ಲಿ ಸ್ಟ್ರೈಕ್ ಉಳಿಸಿಕೊಂಡ ಸಂಜು ಸಾಮ್ಸನ್​ ನಿರ್ಧಾರವನ್ನು ರಾಯಲ್ಸ್​ ತಂಡದ ನಿರ್ದೇಶಕ ಕುಮಾರ್​ ಸಂಗಕ್ಕರ ಸಮರ್ಥಿಸಿಕೊಂಡಿದ್ದಾರೆ.

ಪಂಜಾಬ್ ನೀಡಿದ್ದ 222 ರನ್​ಗಳ ಬೃಹತ್ ಗೆಲುವಿನ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ​ ರಾಯಲ್ಸ್ 217 ರನ್​ ಗಳಿಸಲಷ್ಟೇ ಶಕ್ತವಾಗಿ 4 ರನ್​ಗಳಿಂದ ಸೋಲು ಕಂಡಿತ್ತು. ರಾಯಲ್ಸ್ ಕೊನೆಯ 2 ಎಸೆತಗಳಲ್ಲಿ ಗೆಲ್ಲಲು 5 ರನ್​ಗಳ ಅವಶ್ಯಕತೆಯಿತ್ತು. 5ನೇ ಎಸೆತದಲ್ಲಿ ಲಾಂಗ್​ ಆಫ್​ನತ್ತ ಬಾರಿಸಿದ ಸಾಮ್ಸನ್ ಸಿಂಗಲ್​ ರನ್​​ ತೆಗೆದುಕೊಳ್ಳಲು ನಿರಾಕರಿಸಿ ಕ್ರಿಸ್​ ಮೋರಿಸ್​ರನ್ನು ವಾಪಸ್​ ಕಳುಹಿಸಿದ್ದರು. ಆದರೆ ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸುವಲ್ಲಿ ವಿಫಲರಾದ ಅವರು ಕ್ಯಾಚ್ ನೀಡಿ​ ಔಟ್ ಆದರು. ಸಾಮ್ಸನ್​ ಸಿಂಗಲ್​ ರನ್​​ ತೆಗೆದುಕೊಳ್ಳಲು ನಿರಾಕರಿಸಿದ ಘಟನೆ ಅಚ್ಚರಿಗೆ ಕಾರಣವಾಗಿತ್ತು.

ಆದರೆ ಕುಮಾರ್ ಸಂಗಕ್ಕರ ಮಾತ್ರ ತಮ್ಮ ನಾಯಕನ ಪರ ಬ್ಯಾಟಿಂಗ್ ಮಾಡಿದ್ದಾರೆ. ಮುಂದಿನ ಸಲ ಅವರು ಆ ತಪ್ಪನ್ನು ಮಾಡದೇ ಬೌಂಡರಿಯಿಂದ 10 ಮೀಟರ್ ದೂರಕ್ಕೆ ಹೊಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಸಂಜು ತಮ್ಮ ಜವಾಬ್ದಾರಿಯನ್ನು ಮುಗಿಸಿಲು ತಮ್ಮನ್ನು ತಾವು ನಂಬಿದ್ದರು, ಆ ಕೆಲಸವನ್ನು ಭಾಗಶಃ ಮುಗಿಸಿದ್ದರು. ಆದರೆ ಕೊನೆಯ ಎಸೆತದಲ್ಲಿ ಸಿಕ್ಸರ್​ಗಾಗಿ ಬಾರಿಸಿದ ಚೆಂಡು 5ರಿಂದ 6 ಅಡಿ ಹಿಂದೆ ಉಳಿಯಿತು. ನೀವು ಫಾರ್ಮ್​ನಲ್ಲಿದ್ದರೆ, ನೀವು ಚೆನ್ನಾಗಿ ಚೆಂಡನ್ನು ದಂಡಿಸುತ್ತಿರುವಾಗ, ನೀವು ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸಬಹುದು" ಎಂದು ಸಂಗಕ್ಕರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಂಜು ಸಾಮ್ಸನ್​
ಸಂಜು ಸಾಮ್ಸನ್​

ನಾನು ಸಂಜು ಅವರು ಆ ರೀತಿ ಮಾಡಿದ್ದನ್ನು ನಾನು ಪ್ರೋತ್ಸಾಹಿಸುತ್ತೇನೆ. ನೀವು ಸದಾ ಸಿಂಗಲ್ ಮಿಸ್​ ಮಾಡಿಕೊಂಡಿದ್ದರ ಬಗ್ಗೆ ಇಲ್ಲಿ ಮತ್ತು ಅಲ್ಲಿ ಮಾತನಾಡುತ್ತೀರಾ. ಆದರೆ ನನಗೆ ನಿರ್ಣಾಯಕ ವಿಷಯವೆಂದರೆ ಆಟಗಾರರ ನಂಬಿಕೆ ಮತ್ತು ಅವರ ಸಾಮರ್ಥ್ಯ ಏನೆಂದು ಅವರಿಗೆ ತಿಳಿದಿರುತ್ತದೆ. ಸಂಜು ಕೂಡ ತಾವೇ ಪಂದ್ಯವನ್ನು ಮುಗಿಸಲು ಬಯಸಿದ್ದರು. ಆದರೆ ಈ ಪ್ರಯತ್ನವನ್ನು ಅವರು ಕೇವಲ 5ರಿಂದ6 ಅಡಿಗಳ ಅಂತರದಿಂದ ತಪ್ಪಿಸಿಕೊಂಡರು. ಆದರೆ ನನಗೆ ವಿಶ್ವಾಸವಿದೆ, ಮುಂದಿನ ಬಾರಿ ಇಂತಹ ಸನ್ನಿವೇಶದಲ್ಲಿ ಅವರು ಬೌಂಡರಿಯಿಂದಾಚೆ 10 ಅಡಿ ದೂರ ಚೆಂಡನ್ನು ಬಾರಿಸಲಿದ್ದಾರೆ ಎಂದು ಸಂಗಕ್ಕರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ 11 ಎಸೆತಗಳಲ್ಲಿ 25 ರನ್​ ಬಾರಿಸಿದ ಯುವ ಆಟಗಾರ ರಿಯಾನ್ ಪರಾಗ್​ರನ್ನು ಕೂಡ ಗುಣಗಾನ ಮಾಡಿದ್ದಾರೆ. "ನೀವು ನೋಡಿರುವಂತೆ ರಿಯಾನ್​ ವಿಶೇಷ ಆಟಗಾರ. ಅವರು ಅದ್ಭುತವಾದ ಕೈ ವೇಗವನ್ನು ಹೊಂದಿದ್ದಾರೆ. ಆದರೆ ನಿನ್ನೆಯ ಪಂದ್ಯದಲ್ಲಿ ಅನುಭವಿ ಶಮಿ ಅವರ ಬಂಪರ್​ಗೆ ಆಡುವುದರಲ್ಲಿ ರಿಯಾನ್ ಎಡವಿದರು. ಆದರೆ ಆತನ ಆಟ ನಿಜಕ್ಕೂ ಮೆಚ್ಚುವಂತದ್ದು. ಆ ರೀತಿ ಸ್ವತಂತ್ರವಾಗಿ ಆಡುತ್ತಾರೆ. ಕೆಲವೊಮ್ಮೆ ಇದರಿಂದ ವಿಕೆಟ್ ಕಳೆದುಕೊಳ್ಳಬಹುದು. ಆದರೆ ನಾನು ಇಂತಹ ಆಟವನ್ನು ಪ್ರೇರೇಪಿಸುತ್ತೇನೆ ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ತಿಳಿಸಿದ್ದಾರೆ.

ಇದನ್ನು ಓದಿ:ನಾಯಕನಾದ ಮೊದಲ ಪಂದ್ಯದಲ್ಲೇ ಭರ್ಜರಿ ಆಟ: 54 ಎಸೆತಗಳಿಗೆ ಸಂಜು ಶತಕ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.