ವೆಲ್ಲಿಂಗ್ಟನ್: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಅನ್ನು ಐಸಿಸಿ ಮುಂದೂಡುತ್ತಿದ್ದಂತೆ ಬಿಸಿಸಿಐ ಐಪಿಎಲ್ ನಡೆಸಲು ಸಿದ್ದವಾಗುತ್ತಿದೆ. ಈಗಾಗಲೇ ಐಪಿಎಲ್ ಆಧ್ಯಕ್ಷ ಬ್ರಿಜೇಶ್ ಪಟೇಲ್, ಯುಎಇನಲ್ಲಿ ಟೂರ್ನಿ ನಡೆಸುವುದಾಗಿ ಹೇಳಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆಯಲು ಮನವಿಯನ್ನು ಸಲ್ಲಿಸಿರುವುದಾಗಿಯೂ ತಿಳಿಸಿದ್ದಾರೆ.
ಈ ಬಾರಿಯ ಐಪಿಎಲ್ ನಡೆಯುವುದು ಬಹುತೇಕ ಖಚಿತವಾಗುತ್ತಿದ್ದಂತೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡುವುದಾಗಿ ತಿಳಿಸಿವೆ. ಆದರೆ ಸುರಕ್ಷತೆಗೆ ಸಂಬಂಧಿಸಿದ ಪ್ರೋಟೋಕಾಲ್ಗಳನ್ನು ಆಟಗಾರರೇ ನೋಡಿಕೊಳ್ಳಬೇಕೆಂದು ತಿಳಿಸಿದೆ.
ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸ್ (ಸನ್ರೈಸರ್ಸ್ ಹೈದರಾಬಾದ್) ಜಿಮ್ಮಿ ನೀಶಮ್(ಕಿಂಗ್ಸ್ ಇಲೆವನ್ ಪಂಜಾಬ್) ಲ್ಯೂಕಿ ಫರ್ಗುಸನ್ (ಕೋಲ್ಕತ್ತಾ ನೈಟ್ ರೈಡರ್ಸ್) ಮಿಚೆಲ್ ಮೆಕ್ ಲಾಗೆನ್ ಮತ್ತು ಟ್ರೆಂಟ್ ಬೋಲ್ಟ್(ಮುಂಬೈ ಇಂಡಿಯನ್ಸ್)ಮಿಚೆಲ್ ಸ್ಯಾಂಟ್ನರ್ (ಚೆನ್ನೈ ಸೂಪರ್ ಕಿಂಗ್ಸ್)
ಐಪಿಎಲ್‌ನಲ್ಲಿ ಆಡಲು ನಮ್ಮ ಆಟಗಾರರಿಗೆ ನಾವು ಅನುಮತಿ ನೀಡುತ್ತೇವೆ. ಆದರೆ ಟೂರ್ನಿಯಲ್ಲಿ ಭಾಗವಹಿಸುವ ಅಂತಿಮ ನಿರ್ಧಾರ ಆಟಗಾರರಿಗೆ ಬಿಟ್ಟಿದ್ದು ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯ ವಕ್ತಾರ ರಿಚರ್ಡ್ ಬೂಕ್ ಹೇಳಿದ್ದಾರೆ.