ETV Bharat / sports

ಬ್ಯಾಟ್ಸ್​ಮನ್​ಗಳನ್ನು ದೂರುವುದಿಲ್ಲ, ಅದು ನಮ್ಮ ಸಂಸ್ಕೃತಿಯಲ್ಲ: ಜಸ್ಪ್ರೀತ್​ ಬುಮ್ರಾ - ಭಾರತ- ನ್ಯೂಜಿಲ್ಯಾಂಡ್ ಟೆಸ್ಟ್​ ಸರಣಿ

ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಅತ್ಯುತ್ತಮ ಬೌಲಿಂಗ್​ ದಾಳಿ ನಡೆಸಿ ನ್ಯೂಜಿಲೆಂಡ್ ತಂಡವನ್ನು 235 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದರಿಂದ ಭಾರತ ತಂಡ ಕೇವಲ 96 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ.

New Zealand vs India
ಜಸ್ಪ್ರೀತ್​ ಬುಮ್ರಾ
author img

By

Published : Mar 1, 2020, 8:30 PM IST

ಕ್ರೈಸ್ಟ್​ಚರ್ಚ್(ನ್ಯೂಜಿಲ್ಯಾಂಡ್​)​: ಭಾರತ ತಂಡದ ಬ್ಯಾಟ್ಸ್​ಮನ್​ಗಳು ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ತಮ್ಮ ಕಳಪೆ ಪ್ರದರ್ಶನ ಮುಂದುವರಿಸುತ್ತಿದ್ದರೂ ಯಾರ್ಕರ್​ ಸ್ಪೆಷಲಿಸ್ಟ್​ ಬುಮ್ರಾ ಮಾತ್ರ ತಮ್ಮ ತಂಡದ ಬ್ಯಾಟ್ಸ್​ಮನ್​ಗಳನ್ನು ದೂರಲು ನಿರಾಕರಿಸಿದ್ದಾರೆ.

ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಅತ್ಯುತ್ತಮ ಬೌಲಿಂಗ್​ ದಾಳಿ ನಡೆಸಿ ನ್ಯೂಜಿಲ್ಯಾಂಡ್ ತಂಡವನ್ನು 235 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದರಿಂದ ಭಾರತ ತಂಡ ಕೇವಲ 96 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ.

"ನಾವು ಒಂದು ಬೌಲಿಂಗ್ ಘಟಕವಾಗಿ ಎದುರಾಳಿ ಮೇಲೆ ದಾಳಿ ನಡೆಸಿ ಅನೇಕ ಅವಕಾಶಗಳನ್ನು ಸೃಷ್ಟಿಸಿದೆವು. ಎದುರಾಳಿ ಬ್ಯಾಟ್ಸ್​ಮನ್​ಗಳಲ್ಲಿ ಒತ್ತಡ ಉಂಟುಮಾಡಿ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದೆವು. ತಂಡದಲ್ಲಿ ಸೀನಿಯರ್​ ಬೌಲರ್​ಗಳಾಗಿ ನಮ್ಮ ಪ್ರದರ್ಶನ ಸಂತೋಷ ತಂದಿದೆ" ಎಂದು ಬುಮ್ರಾ ತಿಳಿಸಿದ್ದಾರೆ.

ಜಸ್ಪ್ರೀತ್​ ಬುಮ್ರಾ

ಬ್ಯಾಟ್ಸ್​ಮನ್​ಗಳ ವೈಫಲ್ಯ ಕುರಿತು ಮಾತನಾಡಿದ ಅವರು "ನಾವು ಆರೋಪ ಮಾಡುವ ಆಟವನ್ನು ಆಡುವುದಿಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ. ಆದ್ದರಿಂದ ನಾನು ಇಲ್ಲಿ ಯಾರೊಬ್ಬರ ವೈಫಲ್ಯದ ಬಗ್ಗೆಯೂ ಮಾತನಾಡುವುದಿಲ್ಲ. ಕೆಲವೊಂದು ಬಾರಿ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿ ಬೌಲರ್‌ಗಳು ವಿಕೆಟ್​ ಪಡೆಯುವಲ್ಲಿ ವಿಫಲವಾದರೆ ನಮ್ಮನ್ನು ದೂರುವ ಸ್ವಾತಂತ್ರ್ಯ ಯಾರಿಗೂ ಇರುವುದಿಲ್ಲ. ಹಾಗೆಯೇ ಬ್ಯಾಟ್ಸ್​ಮನ್​ಗಳಿಗೂ ನಮ್ಮಂತೆಯೇ ಸ್ವಾತಂತ್ರ್ಯ ನೀಡಬೇಕಲ್ಲವೇ" ಎಂದು ಬುಮ್ರಾ ಪ್ರಶ್ನಿಸಿದ್ದಾರೆ.

ನಾವು ಒಂದು ತಂಡವಾಗಿ ಕಠಿಣ ಸಂದರ್ಭದಲ್ಲಿ ಸಿಲುಕಿದ್ದೇವೆ. ಇಂತಹ ಸನ್ನಿವೇಶದಲ್ಲಿ ತಂಡವನ್ನು ಮುಂದಕ್ಕೆ ತಳ್ಳುವ ಜವಾಬ್ದಾರಿಯನ್ನು ಮಾಡಬೇಕಾಗಿದೆ. ನಮ್ಮ ಬಳಿ ಈಗ ಇಬ್ಬರು ಬ್ಯಾಟ್ಸ್​ಮನ್​ಗಳಿದ್ದಾರೆ. ನಾಳೆ ಆದಷ್ಟು ರನ್​ ಗಳಿಸಲು ಪ್ರಯತ್ನಿಸಿಬೇಕಾಗಿದೆ" ಎಂದು ಬುಮ್ರಾ ತಿಳಿಸಿದ್ದಾರೆ.

New Zealand vs India
ಜಸ್ಪ್ರೀತ್​ ಬುಮ್ರಾ

"ನಾನು ನನ್ನ ವೈಯಕ್ತಿಕ ಪ್ರದರ್ಶನದ ಬಗ್ಗೆ ಗಮನ ಹರಿಸುವುದಿಲ್ಲ. ಕೇವಲ ಉತ್ತಮವಾಗಿ ಬೌಲಿಂಗ್​ ಮಾಡುವುದಕ್ಕೆ ಯೋಜನೆ ರೂಪಿಸಿಕೊಳ್ಳುವುದರ ಕಡೆಗೆ ಹಾಗೂ ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಪ್ರಯತ್ನಿಸುತ್ತೇನೆ. ಇದರಿಂದ ನನಗೆ ಕೆಲವೊಮ್ಮೆ ವಿಕೆಟ್​ ಸಿಗಬಹುದು, ಕೆಲವು ಬಾರಿ ಇತರೆ ಬೌಲರ್‌ಗಳಿಗೆ ವಿಕೆಟ್‌ಗಳು ಸಿಗಬಹುದು. ನನ್ನಿಂದ ಏನನ್ನು ನಿಯಂತ್ರಿಸಲು ಸಾಧ್ಯವೋ ಅದರ ಬಗ್ಗೆ ಮಾತ್ರ ನನ್ನ ಗಮನ ಇರುತ್ತದೆ" ಎಂದು 26 ವರ್ಷದ ಆಟಗಾರ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.