ಆಕ್ಲೆಂಡ್: ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಪಡೆ ತತ್ತರಿಸಿದ್ರೂ, ಕೊಹ್ಲಿ ಪಡೆ ಬೌಲರ್ಗಳ ಮೇಲೆ ರಾಸ್ ಟೇಲರ್ ಮತ್ತೊಮ್ಮೆ ಸವಾರಿ ಮಾಡಿದ್ದರಿಂದ ಕಿವೀಸ್ ಪಡೆ ಸ್ಪರ್ಧಾತ್ಮಕ ರನ್ ಸೇರಿಸುವಲ್ಲಿ ಯಶಸ್ವಿಯಾಗಿದೆ.
![India vs New Zealand](https://etvbharatimages.akamaized.net/etvbharat/prod-images/5999951_twdfdfdfdf.jpg)
ಬಾಲಂಗೋಚಿ ಜೆಮ್ಸನ್ ಅಜೇಯ (25) ಜೊತೆ ಸೇರಿ ಟೇಲರ್ ಅಜೇಯ(73) ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕೊಹ್ಲಿ ಪಡೆ ಗೆಲುವಿಗೆ 274ರನ್ಗಳ ಸ್ಪರ್ಧಾತ್ಮಕ ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪಡೆ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಗಪ್ಟಿಲ್-ಹೆನ್ರಿ ಜೋಡಿ ಮೊದಲ ಜೊತೆಯಾಟದಲ್ಲೇ 16.5 ಓವರ್ಗಳಲ್ಲಿ 93ರನ್ಗಳಿಕೆ ಮಾಡ್ತು.
![India vs New Zealand](https://etvbharatimages.akamaized.net/etvbharat/prod-images/5999951_wdfdfdfdfdf.jpg)
41ರನ್ಗಳಿಕೆ ಮಾಡಿದ್ದ ಹೆನ್ರಿ ಚಹಾಲ್ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಇದಾದ ಬಳಿಕ ಬಂದ ಥಾಮ್ ಬ್ಲಂಡೆಲ್ 22ರನ್ಗಳಿಕೆ ಮಾಡಿದರು. ಇದಾದ ಬಳಿಕ ಮೈದಾನಕ್ಕೆ ಬಂದ ಯಾವೊಬ್ಬ ಆಟಗಾರ ಕೂಡ ಎರಡಂಕಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ. ಕ್ಯಾಪ್ಟನ್ ಲಾಥಮ್ 7ರನ್, ನೆಶಮ್ 3, ಗ್ರ್ಯಾಂಡ್ಹೋಮ್ 5, ಚ್ಯಾಪ್ಮ್ಯಾನ್ 1, ಸೌಥಿ 3ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ವಿಕೆಟ್ ಪತನದ ನಡುವೆ ಬ್ಯಾಟ್ ಬೀಸಿದ ಟೇಲರ್ ರನ್ಗಳಿಕೆ ಮಾಡಿ ತಂಡ 250ರ ಗಡಿ ದಾಟುವಂತೆ ಮಾಡಿದರು.
![India vs New Zealand](https://etvbharatimages.akamaized.net/etvbharat/prod-images/5999951_twdfdfdf.jpg)
ಮುರಿಯದ 9ನೇ ವಿಕೆಟ್ಗೆ ಜೊತೆಯಾದ ರಾಸ್ ಟೇಲರ್- ಜೆಮ್ಸನ್ 76 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಈ ವೇಳೆ ಟೇಲರ್ 73ರನ್ ಹಾಗೂ ಜೆಮ್ಸನ್ 25ರನ್ಗಳಿಕೆ ಮಾಡಿದರು. ಹೀಗಾಗಿ ನ್ಯೂಜಿಲ್ಯಾಂಡ್ ಕೊನೆಯದಾಗಿ 50 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 273ರನ್ಗಳಿಕೆ ಮಾಡಿದೆ.
ಟೀಂ ಇಂಡಿಯಾ ಪರ ಚಹಾಲ್ 3 ವಿಕೆಟ್, ಶಾರ್ದೂಲ್ ಠಾಕೂರ್ 2ವಿಕೆಟ್, ಜಡೇಜಾ 1ವಿಕೆಟ್ ಪಡೆದುಕೊಂಡರು. ಈಗಾಗಲೇ ನ್ಯೂಜಿಲ್ಯಾಂಡ್ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರಿಂದ ಟೀಂ ಇಂಡಿಯಾಗೆ ಈ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.