ETV Bharat / sports

ನ್ಯೂಜಿಲ್ಯಾಂಡ್​ ತಂಡದ ಖಾಯಂ ನಾಯಕಿಯಾಗಿ ಸೋಫಿ ಡಿವೈನ್​ ನೇಮಕ - cricket new zealand

ಡಿವೈನ್​ ಕಳೆದ ಆವೃತ್ತಿಯಲ್ಲಿ ಹಂಗಾಮಿ ನಾಯಕಿಯಾಗಿ ಆಯ್ಕೆಯಾಗಿದ್ದರು. ಇದೀಗ ಕಿವೀಸ್​ ಕ್ರಿಕೆಟ್​ ಮಂಡಳಿ ಖಾಯಂ ನಾಯಕಿಯಾಗಿ ಅವರನ್ನ ಆಯ್ಕೆ ಮಾಡಿದೆ. ಸತ್ತರ್​ವೇಟ್​ ಹೆರಿಗೆ ರಜೆ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ. ಇದರಿಂದ 2021ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನ ಭಾಗವಾಗಲಿದ್ದಾರೆ.

Sophie Devine
ಸೋಫಿ ಡಿವೈನ್​
author img

By

Published : Jul 9, 2020, 12:31 PM IST

ಆಕ್ಲೆಂಡ್​: ನ್ಯೂಜಿಲ್ಯಾಂಡ್​ ಕ್ರಿಕೆಟ್​ ಮಂಡಳಿ ಮಹಿಳಾ ತಂಡಕ್ಕೆ ಖಾಯಂ ನಾಯಕಿಯಾಗಿ ಸ್ಫೋಟಕ ಆರಂಭಿಕ ಬ್ಯಾಟರ್​ ಸೋಫಿ ಡಿವೈನ್ ಅವ​ರನ್ನು ನೇಮಕ ಮಾಡಿದೆ. ಇಷ್ಟು ವರ್ಷಗಳ ಕಾಲ ನಾಯಕಿಯಾಗಿದ್ದ ಆ್ಯಮಿ ಸತ್ತರ್​ವೇಟ್​ ಹೆರಿಗೆ ರಜೆ ಮುಗಿಸಿ ಬಂದ ಬಳಿಕ ಉಪನಾಯಕಿಯಾಗಿ ಮುಂದುವರಿಯಲಿದ್ದಾರೆ.

ಡಿವೈನ್​ ಕಳೆದ ಆವೃತ್ತಿಯಲ್ಲಿ ಹಂಗಾಮಿ ನಾಯಕಿಯಾಗಿ ಆಯ್ಕೆಯಾಗಿದ್ದರು. ಇದೀಗ ಕಿವೀಸ್​ ಕ್ರಿಕೆಟ್​ ಮಂಡಳಿ ಖಾಯಂ ನಾಯಕಿಯಾಗಿ ಆಯ್ಕೆ ಮಾಡಿದೆ. ಸತ್ತರ್​ವೇಟ್​ ಹೆರಿಗೆ ರಜೆ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ. ಇದರಿಂದ 2021ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ವೇಳೆ ತಂಡದ ಪ್ರಮುಖ ಭಾಗವಾಗಲಿದ್ದಾರೆ.

Sophie Devine
ಆ್ಯಮಿ ಸತ್ತರವೇಟ್​

ವೈಟ್​ಫರ್ನ್​ ನಾಯಕತ್ವ ನನಗೆ ನೀಡಿರುವುದು ನನಗೆ ಸಿಕ್ಕಿರುವ ದೊಡ್ಡ ಗೌರವ. ಕಳೆದ ಋತುವಿನಲ್ಲಿ ನಾನು ನಾಯಕಿಯಾಗಿ ನನ್ನ ಸಮಯವನ್ನು ಆನಂದಿಸಿದ್ದೇನೆ. ಆ ಸಂದರ್ಭದಲ್ಲಿ ಕೆಲವು ಸವಾಲಿನ ಫಲಿತಾಂಶವನ್ನು ಕಂಡಿದ್ದೇನೆ. ನಾವು ಒಂದು ತಂಡವಾಗಿ ಕ್ರಿಕೆಟ್​ ಮತ್ತು ಸಂಸ್ಕೃತಿಯೊಂದಿಗೆ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದ್ದೇವೆ ಎಂದು ಭಾವಿಸಿದ್ದೇನೆ ಎಂದು ಡಿವೈನ್​ ತಿಳಿಸಿದ್ದಾರೆ.

ಇನ್ನು ಆ್ಯಮಿ ಸತ್ತರ್​ವೇಟ್​ ಕೂಡ ಪ್ರತಿಕ್ರಿಯಿಸಿದ್ದು "ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಎದುರು ನೋಡುತ್ತಿದ್ದೇನೆ ಮತ್ತು ಸೋಫಿ ಮತ್ತು ತಂಡವನ್ನು ಬೆಂಬಲಿಸಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.

ನ್ಯೂಜಿಲ್ಯಾಂಡ್​ ತಂಡದ ಲೀ ತಹುಹು ಅವರನ್ನು ವಿವಾಹವಾಗಿರುವ ಸತ್ತರ್​ವೇಟ್​ ಕಳೆದ ವರ್ಷ ಮಗುವಿಗೆ ಜನ್ಮನೀಡಿದ್ದರು. ಹೀಗಾಗಿ ಅವರು ಒಂದು ವರ್ಷದ ಅವಧಿಗೆ ಕ್ರಿಕೆಟ್​ನಿಂದ ದೂರ ಉಳಿಯಲು ನಿರ್ಧರಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.