ETV Bharat / sports

ಭಾರತೀಯರ 3ನೇ ವಿಶ್ವಕಪ್​ ಕನಸನ್ನು ನುಚ್ಚುನೂರುಗೊಳಿಸಿ ಸತತ 2ನೇ ಬಾರಿಗೆ ಫೈನಲ್​ ಪ್ರವೇಶಿಸಿದ ಕಿವೀಸ್​ - ಭುವನೇಶ್ವರ್​

ಮ್ಯಾಂಚೆಸ್ಟರ್​
author img

By

Published : Jul 10, 2019, 3:28 PM IST

Updated : Jul 10, 2019, 9:32 PM IST

15:23 July 10

ಭಾರತೀಯರ 3ನೇ ವಿಶ್ವಕಪ್​ ಕನಸನ್ನು ನುಚ್ಚುನೂರುಗೊಳಿಸಿ ಸತತ 2ನೇ ಬಾರಿಗೆ ಫೈನಲ್​ ಪ್ರವೇಶಿಸಿದ ಕಿವೀಸ್​

ಮ್ಯಾಂಚೆಸ್ಟರ್​: ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಭಾರತ ತಂಡ ಸೆಮಿಫೈನಲ್​ನಲ್ಲಿ ಕಿವೀಸ್​ ಬೌಲರ್​ಗಳ ಮಾರಕ ದಾಳಿಗೆ ಸಿಲುಕಿ 18 ರನ್​ಗಳ ಸೋಲು ಕಾಣುವುದರ ಮೂಲಕ ಶತಕೋಟಿ ಭಾರತೀಯರ ಮೂರನೇ ವಿಶ್ವಕಪ್​ ಕನಸಿಗೆ ತಣ್ಣೀರೆರಚಿದೆ.

ಕಿವೀಸ್​ ನೀಡಿದ 240 ರನ್​ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನೆತ್ತಿದ ಭಾರತೀಯ ಪಡೆ ಕೇವಲ 5 ರನ್​ ಆಗುವಷ್ಟರಲ್ಲಿ ರೋಹಿತ್​ ಶರ್ಮಾ(1),ಕೊಹ್ಲಿ(1) ಹಾಗೂ ಕನ್ನಡಿಗ ಕೆಎಲ್​ ರಾಹುಲ್​ (1) ವಿಕೆಟ್​ ಕಳೆದು ಕೊಂಡು ಆಘಾತ ಅನುಭವಿಸಿತು. ಈ ಮೂವರ ನಂತರ ಬಂದ ಕಾರ್ತಿಕ್​ ಕೂಡ ರನ್​ಗಳಿಸಲು ಪರದಾಡಿ 25 ಬಾಲ್​ಗಳಲ್ಲಿ ಕೇವಲ 6 ರನ್​ಗಳಿಸಿ ಮ್ಯಾಟ್​ ಹೆನ್ರಿಗೆ ವಿಕೆಟ್​ ಒಪ್ಪಿಸಿದರು.

ಪಾಂಡ್ಯ-ಪಂತ್​ 47 ರನ್​ಗಳ ಜೊತೆಯಾಟ:

24 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ಕೊಹ್ಲಿ ಪಡೆಗೆ ಯುವ ಕ್ರಿಕೆಟಿಗರಾದ ಪಾಂಡ್ಯ 32 ಹಾಗೂ ಪಂತ್​ 32 ರನ್​ಗಳಿಸಿ ಆರಂಭಿಕ ಆಘಾತದಿಂದ ಪಾರು ಮಾಡಿದರೂ ನಿರ್ಣಾಯಕ ಘಟ್ಟದಲ್ಲಿ ವಿಕೆಟ್​ ಒಪ್ಪಿಸಿದ್ದು ಭಾರತಕ್ಕೆ ನುಂಗಲಾರದ ತುತ್ತಾಯಿತು. ಈ ಇಬ್ಬರು ಮಿಚೆಲ್​ ಸ್ಯಾಂಟ್ನರ್​ಗೆ ವಿಕೆಟ್​ ಒಪ್ಪಿಸಿದರು.

ಕೋಟ್ಯಾಂತರ ಭಾರತೀಯರಲ್ಲಿ ವಿಶ್ವಕಪ್​ ಆಸೆ ಮೂಡಿಸಿದ ಧೋನಿ-ಜಡೇಜಾ ಇನ್ನಿಂಗ್ಸ್​:

30.3 ಓವರ್​ಗಳಲ್ಲಿ 96 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿದ್ದ ಭಾರತ ತಂಡಕ್ಕೆ 7 ನೇ ವಿಕೆಟ್​ ಜೊತೆಯಾಟದಲ್ಲಿ  116 ರನ್​ಗಳ ಜೊತೆಯಾಟ ನಡೆಸಿ ಭಾರತಕ್ಕೆ ಗೆಲುವಿನ ಆಸೇ ಮೂಡಿಸಿದ್ದರು. ಆದರೆ 59 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್​ ಸಿಡಿಸಿ 77 ರನ್​ಗಳಿಸಿದ್ದ ವೇಳೆ ಬೌಲ್ಟ್​ ಬೌಲಿಂಗ್​ನಲ್ಲಿ ವಿಲಿಯಮ್ಸನ್​ಗೆ ಕ್ಯಾಚ್​ ನೀಡಿದ ಔಟಾದರು.

ಗ್ರೇಟ್​ ಮ್ಯಾಚ್​ ಫಿನಿಶರ್​ ಎಂದೇ ಖ್ಯಾತಿ ಪಡೆದಿದ್ದ ಧೋನಿ ಮೇಲೆ ಕೋಟ್ಯಾಂತರ ಭಾರತೀಯರು ನಿರೀಕ್ಷೆ ಇಟ್ಟಿಕೊಂಡಿದ್ದರು. ಆದರೆ 49 ನೇ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸರ್​ ಸಿಡಿಸಿದ ಧೋನಿ ಮೂರನೇ ಎಸೆತದಲ್ಲಿ ಎರಡು ರನ್​ ತೆಗೆಯಲು ಹೋಗಿ ರನ್​ಔಟಾಗುವುದರೊಂದಿಗೆ ಭಾರತದ ವಿಶ್ವಕಪ್​ ಕನಸು ನುಚ್ಚುನೂರಾಯಿತು. ಕೊನೆಗೆ ಭಾರತ ತಂಡ 49.3 ಓವರ್​ಗಳಲ್ಲಿ 221ರನ್​ಗಳಿಗೆ ಆಲೌಟ್​ ಆಗುವುದರೊಂದಿಗೆ ವಿಶ್ವಕಪ್​ ಅಭಿಯಾನ ಮುಗಿಸಿತು.

ಅದ್ಭುತ ಬೌಲಿಂಗ್​ ನಡೆಸಿದ ಮ್ಯಾಟ್​ ಹೆನ್ರಿ 37ಕ್ಕೆ3, ಬೌಲ್ಟ್​ 42ಕ್ಕೆ2, ಮಿಚೆಲ್​ ಸ್ಯಾಂಟ್ನರ್​ 34ಕ್ಕೆ 2 ನಿಶಾಮ್​ 49 ಕ್ಕೆ 1 ಹಾಗೂ ಫರ್ಗ್ಯಸನ್​ 43ಕ್ಕೆ 1 ವಿಕೆಟ್​ ಪಡೆದು ನ್ಯೂಜಿಲ್ಯಾಂಡ್​ ತಂಡವನ್ನು ಫೈನಲ್​ಗೇರುವಂತೆ ಮಾಡಿದರು.

ಗುರುವಾರ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ನಡುವೆ ಎರಡನೇ ಸೆಮಿಫೈನಲ್​ ನಡೆಯಲಿದ್ದು ಜುಲೈ 14 ಭಾನುವಾರ ವಿಶ್ವಕಪ್​ನ ಅಂತಿಮ ಪಂದ್ಯ ನಡೆಯಲಿದೆ.

Intro:Body:Conclusion:
Last Updated : Jul 10, 2019, 9:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.