ಮೌಂಗನ್ಯುಯಿ: ಮಾರ್ಟಿನ್ ಗಪ್ಟಿಲ್, ನಿಕೋಲ್ಸ್ ಹಾಗೂ ಗ್ರ್ಯಾಂಡ್ಹೋಮ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲ್ಯಾಂಡ್ ತಂಡ ಮೂರನೇ ಏಕದಿನ ಪಂದ್ಯ ಗೆದ್ದು ಭಾರತದ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಟಿ20 ಸರಣಿಯನ್ನು 5-0ಯಲ್ಲಿ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್ ಏಕದಿನ ಸರಣಿಯನ್ನು 3-0ಯಲ್ಲಿ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡಿದೆ. ಭಾರತ ನೀಡಿದ್ದ 297 ರನ್ಗಳ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ 5 ವಿಕೆಟ್‌ಗಳಿಂದ ಗೆಲುವು ಕಂಡಿತು. ಆ ಮೂಲಕ ಸರಣಿ ಕ್ಲೀನ್ ಸ್ವೀಪ್ ಸಾಧಿಸಿತು. ಆರಂಭಿಕ ಬ್ಯಾಟ್ಸ್ಮನ್ ಮಾರ್ಟಿನ್ ಗಪ್ಟಿಲ್ ಕೇವಲ 46 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 66, ಹೆನ್ರಿ ನಿಕೋಲ್ಸ್ 103 ಎಸೆತಗಳಲ್ಲಿ 9 ಬೌಂಡರಿ ಸಹಿತ 80 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 106 ರನ್ಗಳ ಜೊತೆಯಾಟ ನೀಡಿದರು.
-
Colin de Grandhomme 5️⃣4️⃣*️⃣
— ICC (@ICC) February 11, 2020 " class="align-text-top noRightClick twitterSection" data="
Tom Latham 3️⃣2️⃣*️⃣
New Zealand win by five wickets!#NZvIND SCORECARD 👉 https://t.co/oe0qygBhxA pic.twitter.com/DzGiysrI0c
">Colin de Grandhomme 5️⃣4️⃣*️⃣
— ICC (@ICC) February 11, 2020
Tom Latham 3️⃣2️⃣*️⃣
New Zealand win by five wickets!#NZvIND SCORECARD 👉 https://t.co/oe0qygBhxA pic.twitter.com/DzGiysrI0cColin de Grandhomme 5️⃣4️⃣*️⃣
— ICC (@ICC) February 11, 2020
Tom Latham 3️⃣2️⃣*️⃣
New Zealand win by five wickets!#NZvIND SCORECARD 👉 https://t.co/oe0qygBhxA pic.twitter.com/DzGiysrI0c
ಗಪ್ಟಿಲ್ರನ್ನು ಚಹಾಲ್ ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಮೊದಲ ಮೇಲುಗೈ ತಂದ ಕೊಟ್ಟರು. ನಂತರ 22 ರನ್ಗಳಿಸಿದ್ದ ವಿಲಿಯಮ್ಸನ್, 12 ರನ್ಗಳಿಸಿದ್ದ ರಾಸ್ ಟೇಲರ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ನಿಶಾಮ್ ಕೂಡ 19 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಆದರೆ, ವಿಕೆಟ್ ಕೀಪರ್ ಟಾಮ್ ಲ್ಯಾಥಮ್ ಔಟಾಗದೆ 34 ಹಾಗೂ ಆಲ್ರೌಂಡರ್ ಕಾಲಿನ್ ಗ್ರ್ಯಾಂಡ್ಹೋಮ್ ಕೇವಲ 28 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 58 ರನ್ಗಳಿಸಿ ಕಿವೀಸ್ಗೆ ಇನ್ನೂ 17 ಎಸೆತಗಳಿರುವಾಗಲೇ ಗೆಲುವು ತಂದುಕೊಟ್ಟರು.
ವಿಶ್ವದ ನಂಬರ್ ಒನ್ ಬೌಲರ್ ಬುಮ್ರಾ ಈ ಪಂದ್ಯದಲ್ಲೂ ದಯನೀಯ ವೈಫಲ್ಯ ಅನುಭವಿಸಿದರು. ಅವರು 10 ಓವರ್ಗಳಲ್ಲಿ ಯಾವುದೇ ವಿಕೆಟ್ ಇಲ್ಲದೆ 50 ನೀಡಿದರೆ, ನವ್ದೀಪ್ ಸೈನಿ 8 ಓವರ್ಗಳಲ್ಲಿ 68 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಶಾರ್ದೂಲ್ ಠಾಕೂರ್ 9.1 ಓವರ್ಗಳಲ್ಲಿ 87 ರನ್ ನೀಡಿ 1 ವಿಕೆಟ್ ಪಡೆದು ದುಬಾರಿಯಾದರು. ಆದರೆ, ಸ್ಪಿನ್ನರ್ಗಳಾದ ಚಹಲ್ 3 ವಿಕೆಟ್ ಹಾಗೂ ಜಡೇಜಾ 45 ರನ್ ನೀಡಿ ಒಂದು ವಿಕೆಟ್ ಪಡೆದು ಉತ್ತಮ ದಾಳಿ ನಡೆಸಿದರು. ವೇಗಿಗಳ ಅಸ್ಥಿರ ಪ್ರದರ್ಶನದಿಂದ ತಂಡ ಸೋಲುಕಾಣಬೇಕಾಯಿತು.
80 ರನ್ಗಳಿಸಿದ ಹೆನ್ರಿ ನಿಕೋಲ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ರಾಸ್ ಟೇಲರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಕೆಎಲ್ ರಾಹುಲ್ ಅವರ ಶತಕ(112), ಹಾಗೂ ಶ್ರೇಯಸ್ ಅಯ್ಯರ್(62) ಅವರ ಅರ್ಧಶತಕದ ನೆರವಿನಿಂದ 296 ರನ್ಗಳಿಸಿತ್ತು. ಅತ್ಯುತ್ತಮ ಬೌಲಿಂಗ್ ಪ್ರದರ್ಸನ ತೋರಿದ ನ್ಯೂಜಿಲ್ಯಾಂಡ್ನ ಹೇಮಿಶ್ ಬೆನೆಟ್ 4, ಕೈಲ್ ಜಿಮಿಸನ್ ಹಾಗೂ ಜೇಮ್ಸ್ ನಿಶಾಮ್ ತಲಾ ಒಂದು ವಿಕೆಟ್ ಪಡೆದು ಭಾರತ ತಂಡ ಬೃಹತ್ ಮೊತ್ತ ಕಲೆ ಹಾಕದಂತೆ ನೋಡಿಕೊಂಡರು.