ನವದೆಹಲಿ: ಈ ಬಾರಿಯ ಟೂರ್ನಿ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆಗೊಳಗಾಗುವ ಲೀಗ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಆಟಗಾರರ ಸುರಕ್ಷಿತ ದೃಷ್ಟಿಯಿಂದ ಪ್ರತಿದಿನ ಕೋವಿಡ್ ಟೆಸ್ಟ್ ನಡೆಸಬೇಕೆಂದು ಹೇಳಿದ್ದಾರೆ.
ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಐಪಿಎಲ್ 2020ರ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಪ್ರಕಟಿಸಿದ ಬೆನ್ನಲ್ಲೇ ನೆಸ್ವಾಡಿಯಾ ಈ ರೀತಿ ಹೇಳಿಕೆ ನೀಡಿದ್ದಾರೆ.
ಎಲ್ಲ ತಂಡಗಳು ಈಗ ಬಿಸಿಸಿಐನಿಂದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಗಾಗಿ ಕಾಯುತ್ತಿವೆ. ಇದು ಮುಂದಿನ ವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿಯಮಾವಳಿಗಳನ್ನು ಅಂತಿಮಗೊಳಿಸುತ್ತದೆ.
ಐಪಿಎಲ್ ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಲು ಮೈದಾನದ ಹೊರಗೆ ಮತ್ತು ಒಳಗಿನ ಚಟುವಟಿಕೆಗಳಿಗೆ ಕಟ್ಟುನಿಟ್ಟಾದ ಸುರಕ್ಷತಾ ಪ್ರೋಟೋಕಾಲ್ಗಳನ್ನ ವಿಧಿಸಬೇಕು. ಇದರಲ್ಲಿ ಬಿಸಿಸಿಐ ಯಾವುದೇ ರಾಜಿ ಮಾಡಿಕೊಳ್ಳಬಾರದು "ಎಂದು ವಾಡಿಯಾ ಪಿಟಿಐಗೆ ತಿಳಿಸಿದ್ದಾರೆ. ಜೊತೆಗೆ ಸಾಧ್ಯವಾದಷ್ಟು ನಿತ್ಯವೂ ಪರೀಕ್ಷೆ ಬಯಸುತ್ತಿದ್ದೇನೆ. ನಾನೇದರೂ ಕ್ರಿಕೆಟಿಗನಾಗಿದ್ದರೆ ಪ್ರತಿದಿನ ನನ್ನನ್ನು ಪರೀಕ್ಷಿಸಿಕೊಳ್ಳುವುದಕ್ಕೆ ನನಗೆ ಸಂತೋಷವಾಗುತ್ತಿತ್ತು. ಇದರಿಂದ ಯಾವುದೇ ಹಾನಿಯಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಾರಿಯ ಐಪಿಎಲ್ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರ ವರೆಗೆ ನಡೆಯಲಿದೆ. ಯುಎಇಗೆ ಈಗ ಪ್ರಯಾಣಿಸಬೇಕಾದರೆ ಪ್ರತೀ ಪ್ರಯಾಣಿಕನೂ ಇಲ್ಲಿಂದ ಹೊರಡುವುದಕ್ಕೂ ಮುನ್ನ ಕೊರೊನಾ ನೆಗೆಟಿವ್ ಇರಬೇಕು ಮತ್ತು ಅಲ್ಲಿ ತಲುಪಿದ ಬಳಿಕ ಮತ್ತೆ ಪರೀಕ್ಷೆ ನಡೆಸಬೇಕು. ಎರಡರಲ್ಲೂ ನೆಗೆಟಿವ್ ಬಂದರಷ್ಟೇ ಕ್ವಾರಂಟೈನ್ ರಹಿತ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಕ್ಲಬ್ಗಳಂತೆ ಬಯೋ ಸೆಕ್ಯೂರ್ ವಾತಾವರಣದಲ್ಲಿ ಐಪಿಎಲ್ ನಡೆಯುವುದು ಅಸಾಧ್ಯ ಎಂಬುದು ಮೇಲುನೋಟಕ್ಕೆ ತಿಳಿದು ಬಂದಿದೆ. ಅದನ್ನು ಆಯೋಜಕರು ಯುಎಇನಲ್ಲಿ ಜಾರಿ ತರುವುದು ಅಸಾಧ್ಯವಾಗಿದೆ.
"ಜೈವಿಕ ಸುರಕ್ಷಿತತೆ( ಬಯೋ ಸೆಕ್ಯೂರ್)ಯು ಬಹಳ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಯಾಗಿದೆ. ಆದರೆ, ಇದನ್ನು ಎಂಟು ತಂಡಗಳ ಟೂರ್ನಮೆಂಟ್ನಲ್ಲಿ ಅದನ್ನು ಕಾರ್ಯಗತಗೊಳಿಸಬಹುದೇ ಎಂದು ತಿಳಿದಿಲ್ಲ. ನಾವು ಬಿಸಿಸಿಐನಿಂದ ಎಸ್‌ಒಪಿಗಳಿಗಾಗಿ ಕಾಯುತ್ತಿದ್ದೇವೆ. ಯುಎಇ ಕೂಡ ಹೆಚ್ಚಿನ ಪರೀಕ್ಷಾ ದರವನ್ನು ಹೊಂದಿದೆ (472,575 ಪ್ರತಿ 10 ಲಕ್ಷಕ್ಕೆ) ಮತ್ತು ಅವರು ಸಾಕಷ್ಟು ತಂತ್ರಜ್ಞಾನವನ್ನು ಹೊಂದಿದ್ದಾರೆ. ಸಮರ್ಪಕ ಪರೀಕ್ಷೆ ನಡೆಯುವಂತೆ ನೋಡಿಕೊಳ್ಳಲು ಬಿಸಿಸಿಐಗೆ ಸ್ಥಳೀಯ ಸರ್ಕಾರದ ಸಹಾಯ ಕೇಳಬೇಕು ”ಎಂದು ವಾಡಿಯಾ ಹೇಳಿದ್ದಾರೆ.