ETV Bharat / sports

ಮಾಜಿ ಆಟಗಾರರ ಮೇಲೆ ಹಿತಾಸಕ್ತಿ ಸಂಘರ್ಷ ಆರೋಪ : ದ್ರಾವಿಡ್​ ಬೆನ್ನಿಗೆ ನಿಂತ ಗಂಗೂಲಿ

ರಾಹುಲ್​ ದ್ರಾವಿಡ್​ ಇತ್ತೀಚೆಗೆ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥರಾಗಿರುವುದಕ್ಕೂ, ಇಂಡಿಯಾ ಸಿಮೆಂಟ್​ನಲ್ಲಿ ಹುದ್ದೆ ಪಡೆದಿರುವುದರಲ್ಲಿ ಯಾವುದೇ ಹಿತಾಸಕ್ತಿ ಸಂಘರ್ಷವಿಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ.

conflict of interest
author img

By

Published : Aug 24, 2019, 10:19 AM IST

ಮುಂಬೈ: ಇತ್ತೀಚೆಗೆ ಭಾರತದ ಮಾಜಿ ಆಟಗಾರರ ಬಿಸಿಸಿಐನಿಂದ ಪಡೆದಿರುವ ಹುದ್ದೆಗಳ ಮೇಲೆ ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿ ಬರುತ್ತಿದೆ. ಇದು ಗಂಗೂಲಿ ಕೋಪಕ್ಕೆ ಕಾರಣವಾಗಿದ್ದು, ಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಪ್ರಾಯೋಗಿಕ ಸ್ಪಷ್ಟನೆ ಇರಬೇಕು ಎಂದು ತಿಳಿಸಿದ್ದಾರೆ.

ರಾಹುಲ್​ ದ್ರಾವಿಡ್​ ಇತ್ತೀಚೆಗೆ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಇಂಡಿಯಾ ಸಿಮೆಂಟ್​ನಲ್ಲಿ ಉಪಾಧ್ಯಕ್ಷ ಹುದ್ದೆಯಲ್ಲಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ. ಯಾಕಂದರೆ, ಇಂಡಿಯಾ ಸಿಮೆಂಟ್​ ಅವರ ಶಾಶ್ವತವಾದ ವೃತ್ತಿ. ಆದರೆ, ಎನ್​ಸಿಎ 2 ವರ್ಷ ಅಥವಾ 3 ವರ್ಷದ ವೃತ್ತಿ. ಇದರಲ್ಲಿ ಹಿತಾಶಕ್ತಿ ಸಂಘರ್ಷ ಹೇಗಾಗುತ್ತದೆ ಎಂದು ಗಂಗೂಲಿ ಪ್ರಶ್ನಿಸಿದ್ದಾರೆ.

ಮೊದಲಾಗಿ ದ್ರಾವಿಡ್​ಗೆ ತಾವೂ ಮುಂದೆ ಎನ್​ಸಿಎ ಮುಖ್ಯಸ್ಥರಾಗುತ್ತೇವೆಂದು ತಿಳಿದಿರುವುದಿಲ್ಲ. ಅವರಿಗಿರುವ ಕೌಶಲ್ಯಗಳಿಂದ ಅವರನ್ನು ಬಿಸಿಸಿಐ ಎನ್​ಸಿಎ ಮುಖ್ಯಸ್ಥರನ್ನಾಗಿ ಮಾಡಿದೆ. ಅವರಷ್ಟೇ ಅಲ್ಲ, ಈ ಹಿಂದೆ ಬಿಸಿಸಿಐ ಹಿತಾಸಕ್ತಿ ಸಂಘರ್ಷದ ನೋಟಿಸ್​ ನೀಡಿರುವ ಎಲ್ಲಾ ಮಾಜಿ ಆಟಗಾರಿಗೂ ಅವರವರ ಕೌಶಲ್ಯದಿಂದಲೇ ಗೌರವಾನ್ವಿತ ಹುದ್ದೆಗಳು ಸಿಕ್ಕಿವೆ. ಕಾಮೆಂಟರಿ ಅಥವಾ ಕೋಚಿಂಗ್​ ಮಾಡುವುದರಲ್ಲಿ ನನಗೆ ಯಾವುದೇ ನಿಯಮ ಉಲ್ಲಂಘನೆ ಕಂಡುಬರುವುದಿಲ್ಲ ಎಂದಿದ್ದಾರೆ.

ಗಂಗೂಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್​ರನ್ನು ಉದಾಹರಣೆ ನೀಡುವ ಮೂಲಕ ಹಿತಾಸಕ್ತಿ ಸಂಘರ್ಷದ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ, ಪಾಂಟಿಂಗ್​ ಆಸ್ಟ್ರೇಲಿಯಾದ ಕೋಚ್​ ಹಾಗೂ ಆ್ಯಶಸ್​ನಲ್ಲಿ ಕಾಮೆಂಟರಿಯನ್ನು ಜೊತೆಯಾಗಿ ನಡೆಸುತ್ತಿದ್ದಾರೆ. ಮುಂದಿನ ವರ್ಷದ ಐಪಿಎಲ್​ನಲ್ಲೂ ಡೆಲ್ಲಿ ಕ್ಯಾಪಿಟಲ್​ ಕೋಚ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇವೆಲ್ಲ ಹುದ್ದೆಗಳು ಅವರಿಗಿರುವ ಕೌಶಲ್ಯದಿಂದಲೇ ಬಂದಿದೆ. ಇದರಲ್ಲಿ ಯಾವ ಹಿತಾಸಕ್ತಿ ಸಂಘರ್ಷ ಇದೆ ಎಂದು ತಮ್ಮ ವಿರುದ್ಧ ಆರೋಪ ಮಾಡಿರುವವರ ಮೇಲೆ ಗಂಗೂಲಿ ಕಿಡಿಕಾರಿದ್ದಾರೆ.​

ದ್ರಾವಿಡ್​ ಎನ್​ಸಿಎ ಮುಖ್ಯಸ್ಥ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಒಡೆತನವಿರುವ ಇಂಡಿಯಾ ಸಿಮೆಂಟ್​ ಗ್ರೂಪ್​ನಲ್ಲಿ ಉಪಾಧ್ಯಕ್ಷ ಹುದ್ದೆ ಪಡೆದಿರುವುದಕ್ಕೆ ಬಿಸಿಸಿಐ ಒಂಬುಡ್ಸ್​ಮನ್​ ನಿವೃತ್ತ ನ್ಯಾಯಮೂರ್ತಿ ದ್ರಾವಿಡ್​ಗೆ ಸ್ಪಷ್ಟನೇ ನೀಡುವಂತೆ ಸೆಪ್ಟೆಂಬರ್​ 26ರಂದು ದಿನಾಂಕ ನಿಗದಿ ಮಾಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.