ಬ್ರಿಸ್ಬೇನ್: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಅವರು ಶನಿವಾರ ಗಬ್ಬಾ ಟೆಸ್ಟ್ ಪಂದ್ಯದ ಎರಡನೇ ದಿನದಂದು ಉಪನಾಯಕ ರೋಹಿತ್ ಶರ್ಮಾ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚುಬಾರಿ ರೋಹಿತ್ ವಿಕೆಟ್ ಉರುಳಿಸಿದ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ನೂರನೇ ಟೆಸ್ಟ್ ಪಂದ್ಯವಾಡುತ್ತಿರುವ ನಾಥನ್ ಲಿಯಾನ್ ಟೀಂ ಇಂಡಿಯಾದ ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ನಿಧಾನವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ಕ್ರಮೇಣ ಬೌಂಡರಿಗಳ ಮೂಲಕ ರನ್ ಗಳಿಕೆಯ ವೇಗ ಹೆಚ್ಚಿಸಿದ್ರು, 44 ರನ್ ಗಳಿಸಿರುವಾಗ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ರೋಹಿತ್ ತಮ್ಮ ವಿಕೆಟ್ ಅನ್ನು ಆಫ್ ಸ್ಪಿನ್ನರ್ ನಾಥನ್ ಲಿಯಾನ್‌ಗೆ ಉಡುಗೊರೆಯಾಗಿ ನೀಡಿದರು.
-
Nathan Lyon's 397th Test wicket seemed to come out of nowhere and the Aussies were pumped! #OhWhatAFeeling #AUSvIND | @Toyota_Aus pic.twitter.com/rIhl4ZjbTu
— cricket.com.au (@cricketcomau) January 16, 2021 " class="align-text-top noRightClick twitterSection" data="
">Nathan Lyon's 397th Test wicket seemed to come out of nowhere and the Aussies were pumped! #OhWhatAFeeling #AUSvIND | @Toyota_Aus pic.twitter.com/rIhl4ZjbTu
— cricket.com.au (@cricketcomau) January 16, 2021Nathan Lyon's 397th Test wicket seemed to come out of nowhere and the Aussies were pumped! #OhWhatAFeeling #AUSvIND | @Toyota_Aus pic.twitter.com/rIhl4ZjbTu
— cricket.com.au (@cricketcomau) January 16, 2021
ನಾಥನ್ ಲಿಯಾನ್ ಟೆಸ್ಟ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಅವರನ್ನು ಆರು ಬಾರಿ ಔಟ್ ಮಾಡಿದ್ದಾರೆ. ರೋಹಿತ್ ಶರ್ಮಾ ಇಲ್ಲಿಯವರೆಗೆ ಲಿಯಾನ್ ಅವರ 258 ಎಸೆತಗಳನ್ನು ಎದುರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಾ ಐದು ಬಾರಿ ರೋಹಿತ್ ಅವರನ್ನು ಔಟ್ ಮಾಡಿದ್ರೆ, ವೆರ್ನಾನ್ ಫಿಲಾಂಡರ್ ಮೂರು ಬಾರಿ ಔಟ್ ಮಾಡಿದ್ದಾರೆ.
ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ ಕಾರಣ ದ್ವಿತೀಯ ದಿನದಾಟ ಮುಕ್ತಾಯವಾಗಿದೆ. ಭಾರತ ತಂಡ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದ್ದು, ಪೂಜಾರ 8 ಮತ್ತು ರಹಾನೆ 2 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.