ETV Bharat / sports

ನಟರಾಜನ್​ ಭಾರತ ಬಯಸಿದಂತೆ ಬೌಲಿಂಗ್ ಮಾಡುತ್ತಿದ್ದಾರೆ : ರೋಹಿತ್ ಶರ್ಮಾ ಮೆಚ್ಚುಗೆ - India vs Australia Brisbane test

ಭಾರತ ತಂಡದ ವೇಗಿಗಳು ಆಸ್ಟ್ರೇಲಿಯಾ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 369 ರನ್​ಗಳಿಗೆ ಆಲೌಟ್​ ಮಾಡಿದ್ದಾರೆ. ಎರಡು ವರ್ಷಗಳ ನಂತರ ಟೆಸ್ಟ್​ ಕ್ರಿಕೆಟ್​ಗೆ ಮರಳಿದ ಶಾರ್ದುಲ್​ ಠಾಕೂರ್​ ಮತ್ತು ಇದೇ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿದ್ದ ಟಿ ನಟರಾಜನ್​ ಹಾಗೂ ವಾಷ್ಟಿಂಗ್ಟನ್ ಸುಂದರ್​ ತಲಾ ಮೂರು ವಿಕೆಟ್​ ಪಡೆದು ಮಿಂಚಿದ್ದರು. ಅದರಲ್ಲೂ ನಟರಾಜನ್​ ಶತಕ ಸಿಡಿಸಿದ್ದ ಲಾಬುಶೇನ್​ ಸೇರಿದಂತೆ 3 ವಿಕೆಟ್​ ಪಡೆದು ಭಾರತಕ್ಕೆ ಮುನ್ನಡೆ ದೊರೆಕಿಸಿಕೊಟ್ಟಿದ್ದರು.

Rohit sharma on Natarajan
ರೋಹಿತ್ ಶರ್ಮಾ ನಟರಾಜನ್​
author img

By

Published : Jan 16, 2021, 3:46 PM IST

ಬ್ರಿಸ್ಬೇನ್​: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿರುವ ಟಿ.ನಟರಾಜನ್​ ಭಾರತ ತಂಡಕ್ಕೆ ಪ್ರಸ್ತುತ ಯಾವ ರೀತಿಯ ಬೌಲಿಂಗ್​ ಅಗತ್ಯವಿದೆ ಎನ್ನುವುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಉಪನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಭಾರತ ತಂಡದ ವೇಗಿಗಳು ಆಸ್ಟ್ರೇಲಿಯಾ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 369 ರನ್​ಗಳಿಗೆ ಆಲೌಟ್​ ಮಾಡಿದ್ದಾರೆ. ಎರಡು ವರ್ಷಗಳ ನಂತರ ಟೆಸ್ಟ್​ ಕ್ರಿಕೆಟ್​ಗೆ ಮರಳಿದ ಶಾರ್ದುಲ್​ ಠಾಕೂರ್​ ಮತ್ತು ಇದೇ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿದ್ದ ಟಿ ನಟರಾಜನ್​ ಹಾಗೂ ವಾಷ್ಟಿಂಗ್ಟನ್ ಸುಂದರ್​ ತಲಾ ಮೂರು ವಿಕೆಟ್​ ಪಡೆದು ಮಿಂಚಿದ್ದರು. ಅದರಲ್ಲೂ ನಟರಾಜನ್​ ಶತಕ ಸಿಡಿಸಿದ್ದ ಲಾಬುಶೇನ್​ ಸೇರಿದಂತೆ 3 ವಿಕೆಟ್​ ಪಡೆದು ಭಾರತಕ್ಕೆ ಮುನ್ನಡೆ ದೊರೆಕಿಸಿಕೊಟ್ಟಿದ್ದರು.

" ನಟರಾಜನ್​ ನಮ್ಮ ನಂಬಿಕಾರ್ಹ ಬೌಲರ್ ಆಗಿದ್ದಾರೆ. ಅವರು ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಆಡಿದಾಗ ಸಾಕಷ್ಟು ಶಿಸ್ತು ಪ್ರದರ್ಶಿಸಿದ್ದಾರೆ. ಅವರು ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ನಂತರ ಅದೇ ವಿಶ್ವಾಸವನ್ನು ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲೂ ಮುಂದುವರಿಸಿದರು. ಅದೇ ರೀತಿ ಟೆಸ್ಟ್​ ಕ್ರಿಕೆಟ್​ನಲ್ಲೂ ಅವಕಾಶ ಪಡೆದು, ಮೊದಲ ಸ್ಪೆಲ್​ನಲ್ಲೇ ತುಂಬಾ ನಿಖರತೆಯಿಂದ ಬೌಲಿಂಗ್ ಮಾಡಿದ್ದಾರೆ" ಎಂದು ರೋಹಿತ್ ಶರ್ಮಾ 2ನೇ ದಿನದ ನಂತರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

" ಮೊದಲ ಟೆಸ್ಟ್ ಆಡುತ್ತಿರುವ ಬೌಲರ್​, ತಮ್ಮ ಬೌಲಿಂಗ್ ಅನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ನಾವು ನಿಜವಾಗಿಯೂ ಹೇಳಬಹುದು. ಇದು ಭಾರತ ತಂಡ ಕೂಡ ಬಯಸುತ್ತಿರುವ ಸಂಗತಿಯಾಗಿದೆ. ನಟರಾಜನ್, ನಾವು ಅವರಿಂದ ನಿರೀಕ್ಷಿಸಿದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆತ ಖಚಿತವಾಗಿ ನಮಗೆ ನಂಬಿಕಾರ್ಹ ಬೌಲರ್​ನಂತೆ ಕಾಣುತ್ತಿದ್ದಾರೆಂದು ನಾನು ಭಾವಿಸುತ್ತೇನೆ " ಎಂದು ಹಿಟ್​ಮ್ಯಾನ್​ ಹೇಳಿದ್ದಾರೆ.

ಆಸ್ಟ್ರೇಲಿಯಾದ 369 ರನ್​ಗಳ ಹಿಂಬಾಲಿಸುತ್ತಿರುವ ಭಾರತ ತಂಡ 2ನೇ ದಿನಂದತ್ಯಕ್ಕೆ 2 ವಿಕೆಟ್ ಕಳೆದುಕೊಂಡು 62 ರನ್​ಗಳಿಸಿದೆ. ಗಿಲ್​ ಕೇವಲ 7 ರನ್​ಗೆ ವಿಕೆಟ್​ ಒಪ್ಪಿಸಿದರೆ, ರೋಹಿತ್​ ಶರ್ಮಾ 44 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. ಪ್ರಸ್ತುತ ನಾಯಕ ರಹಾನೆ 2ರನ್​ ಹಾಗೂ ಚೇತೇಶ್ವರ್​ ಪೂಜಾರ 8 ರನ್​ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.