ಸೌತಾಂಪ್ಟನ್: ವೆಸ್ಟ್ ಇಂಡೀಸ್ ತಂಡವನ್ನು ಲಘುವಾಗಿ ಪರಿಗಣಿಸಿ, ಸ್ಟುವರ್ಟ್ ಬ್ರಾಡ್ ಅವರಂಥ ಅನುಭವಿ ಆಟಗಾರನನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಇಂಗ್ಲೆಂಡ್ನಲ್ಲಿ ಸೋಲಿನ ಮುಖಭಂಗ ಅನುಭವಿಸಬೇಕಾಯ್ತು ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರನ್ನು ಆಡಿಸಿದ್ದ ಇಂಗ್ಲೆಂಡ್ ಈ ಸರಣಿಯ ಮೊದಲ ಪಂದ್ಯಕ್ಕೆ ಅವರನ್ನೇಕೆ ಆಯ್ಕೆ ಮಾಡಲಿಲ್ಲ? ಅವರು ವೆಸ್ಟ್ ಇಂಡೀಸ್ ತಂಡವನ್ನು ಲಘವಾಗಿ ಪರಿಗಣಿಸಿದರೆ? ಈ ಹಿಂದಿನ ಸರಣಿಯಲ್ಲೂ ಅವರನ್ನು ಕಡೆಗಣಿಸಿದ್ದಕ್ಕೆ ಸರಣಿ ಸೋಲು ಅನುಭವಿಸಿದ್ವಿ ಎಂದು ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರಾಡ್ ಪ್ರಸ್ತುತ ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಅವರು 138 ಟೆಸ್ಟ್ ಪಂದ್ಯಗಳಿದ 485 ವಿಕೆಟ್ ಪಡೆದಿದ್ದಾರೆ. ಆ್ಯಶಸ್ ಸರಣಿ ಹಾಗೂ ದಕ್ಷಿಣ ಅಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ತಮ್ಮನ್ನು ಕೈಬಿಟ್ಟಿದ್ದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಮಾರ್ಕ್ವುಡ್ ಮತ್ತು ಆರ್ಚರ್ರನ್ನು ಬೇರ್ಪಡಿಸಲಾಗದ ಕಾರಣ ಅವರು ಬ್ರಾಡ್ ಮತ್ತು ಮತ್ತು ಜಿಮ್ಮಿಯನ್ನು ಬೇರ್ಪಡಿಸಿದರು. ಆದರೆ ಭವಿಷ್ಯವನ್ನು ನೋಡುವುದಾದರೆ ಮುಂದಿನ ಪಂದ್ಯ ಗೆಲ್ಲಲೇಬೇಕಿದೆ. ಮೂರು ಪಂದ್ಯಗಳ ಸರಣಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ ಎಂದು ಇಂಗ್ಲೆಂಡ್ ತಂಡಕ್ಕೆ ಕಿವಿಮಾತು ಹೇಳಿದ್ದಾರೆ.
ಇಂಗ್ಲೆಂಡ್ ವಿಸ್ಡನ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 4 ವಿಕೆಟ್ಗಳ ಸೋಲು ಕಂಡಿದೆ. ಮುಂದಿನ ಪಂದ್ಯ ಜುಲೈ 16ರಿಂದ ಆರಂಭವಾಗಲಿದೆ. ಇಂಗ್ಲೆಂಡ್ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡವಿದೆ. ಎರಡನೇ ಪಂದ್ಯಕ್ಕೆ ನಾಯಕ ಜೋ ರೂಟ್ ಮರಳುವ ಸಾಧ್ಯತೆಯಿದೆ.