ನವದೆಹಲಿ : ಕ್ರಿಕೆಟ್ ಜಗತ್ತಿನ ಅತಿ ಹೆಚ್ಚು ವಿಕೆಟ್ ಸಾಧನೆ ಮಾಡಿರುವ ಶ್ರೀಲಂಕಾದ ಲೆಜೆಂಡ್ ಮುತ್ತಯ್ಯ ಮುರುಳೀಧರನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದಿರುವ ಬೌಲರ್ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.
133 ಪಂದ್ಯಗಳನ್ನಾಡಿರುವ ಮುತ್ತಯ್ಯ ಮುರುಳೀಧರನ್ 230 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಅವರು ಇಷ್ಟು ಇನ್ನಿಂಗ್ಸ್ಗಳಲ್ಲಿ ಬರೋಬ್ಬರಿ 44,039 ಎಸೆತಗಳನ್ನು ಎಸೆದಿದ್ದಾರೆ. ಇವರು ಇನ್ನಿಂಗ್ಸ್ವೊಂದರಲ್ಲಿ ಸರಾಸರಿ 32 ಓವರ್ ಎಸೆದಿದ್ದಾರೆ.
-
Muttiah Muralitharan bowled 44,039 balls in Test cricket – the most by any bowler 🤯
— ICC (@ICC) July 25, 2020 " class="align-text-top noRightClick twitterSection" data="
That's about 7,340 overs across 230 innings and an average of 32 overs in each innings!#ICCHallOfFame pic.twitter.com/2KbtrkQ1kZ
">Muttiah Muralitharan bowled 44,039 balls in Test cricket – the most by any bowler 🤯
— ICC (@ICC) July 25, 2020
That's about 7,340 overs across 230 innings and an average of 32 overs in each innings!#ICCHallOfFame pic.twitter.com/2KbtrkQ1kZMuttiah Muralitharan bowled 44,039 balls in Test cricket – the most by any bowler 🤯
— ICC (@ICC) July 25, 2020
That's about 7,340 overs across 230 innings and an average of 32 overs in each innings!#ICCHallOfFame pic.twitter.com/2KbtrkQ1kZ
2ನೇ ಸ್ಥಾನದಲ್ಲಿರುವ ಭಾರತದ ಲೆಜೆಂಡರಿ ಸ್ಪಿನ್ನರ್ ಕನ್ನಡಿಗ ಅನಿಲ್ ಕುಂಬ್ಳೆ 132 ಪಂದ್ಯಗಳಿಂದ 40,850 ಎಸೆತಗಳನ್ನು ಎಸೆದಿದ್ದಾರೆ. 3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಶೇನ್ ವಾರ್ನ್ 145 ಪಂದ್ಯಗಳಿಂದ 40,705 ಎಸೆತಗಳನ್ನು ಎಸೆದಿದ್ದಾರೆ. ಈ ಮೂವರನ್ನು ಬಿಟ್ಟರೆ ಬೇರೆ ಯಾವುದೇ ಬೌಲರ್ 40 ಸಾವಿರ ಗಡಿ ದಾಟಿಲ್ಲ.
ಇನ್ನು, ಅತಿ ಹೆಚ್ಚು ವಿಕೆಟ್ ಪಡೆದ ಲಿಸ್ಟ್ನಲ್ಲೂ ಈ ಮೂವರೇ ಇದ್ದಾರೆ. ಮುರುಳೀಧರನ್ 800, ಶೇನ್ ವಾರ್ನ್ 700 ಹಾಗೂ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದಿದ್ದಾರೆ.