ETV Bharat / sports

ಎಲ್‌ಪಿಎಲ್: ಕ್ಯಾಂಡಿ ಟಸ್ಕರ್ಸ್ ಸೇರಿಕೊಂಡ ಮುನಾಫ್​ ಪಟೇಲ್​

author img

By

Published : Nov 19, 2020, 7:56 PM IST

ನವೆಂಬರ್​ 26ರಿಂದ ನಡೆಯಲಿರುವ ಲಂಕಾ ಪ್ರೀಮಿಯರ್ ಲೀಗ್​​​ನ ಕ್ಯಾಂಡಿ ಟಸ್ಕರ್ಸ್​​ ತಂಡದಲ್ಲಿ ಭಾರತದ ಮಾಜಿ ವೇಗಿ ಮುನಾಫ್​ ಪಟೇಲ್​ ಸೇರಿಕೊಂಡಿದ್ದಾರೆ.

Munaf Patel Joins Kandy Tuskers Squad in Sri Lanka
ಭಾರತ ತಂಡದ ಮಾಜಿ ವೇಗಿ ಮುನಾಫ್​ ಪಟೇಲ್​

ಹೈದರಾಬಾದ್​​: ಭಾರತ ತಂಡದ ಮಾಜಿ ವೇಗಿ ಮುನಾಫ್​ ಪಟೇಲ್​ ಅವರು ಲಂಕಾ ಪ್ರೀಮಿಯರ್​ ಲೀಗ್​​ನ (ಎಲ್‌ಪಿಎಲ್) ಕ್ಯಾಂಡಿ ಟಸ್ಕರ್ಸ್​​ ತಂಡಕ್ಕೆ ಸೇರಿಕೊಂಡಿದ್ದು, ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾರೆ.

ಮುನಾಫ್ ಪಟೇಲ್ ಕ್ಯಾಂಡಿ ಟಸ್ಕರ್ಸ್ ಕ್ಯಾಂಪ್​​ಗೆ ಸೇರಿಕೊಂಡಿದ್ದಾರೆ ಎಂದು ಘೋಷಿಸಲು ಹೆಮ್ಮೆ ಅನಿಸುತ್ತಿದೆ ಎಂದು ಫ್ರ್ಯಾಂಚೈಸಿ ಟ್ವೀಟ್ ಮಾಡಿದೆ. ಭಾರತದ ಮಾಜಿ ಆಲ್​ರೌಂಡರ್​​ ಇರ್ಫಾನ್​ ಪಠಾಣ್​​ ಕೂಡ ಇದೇ ತಂಡದಲ್ಲಿ ಆಡಲಿದ್ದಾರೆ.

ಯೂನಿವರ್ಸಲ್​ ಬಾಸ್​​ ಕ್ರಿಸ್ ಗೇಲ್, ಕುಶಾಲ್ ಪೆರೆರಾ, ಕುಶಾಲ್ ಮೆಂಡೀಸ್, ನುವಾನ್ ಪ್ರದೀಪ್ ಮತ್ತು ಇಂಗ್ಲೆಂಡ್ ತಂಡದ ಬಲಗೈ ವೇಗದ ಬೌಲರ್ ಪ್ಲಂಕೆಟ್ ಕೂಡ ತಂಡದಲ್ಲಿದ್ದಾರೆ. ಆದರೆ, ಐಪಿಎಲ್​​​ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಕ್ರಿಸ್​​ಗೇಲ್​ ಕ್ಯಾಂಡಿ ಟಸ್ಕರ್ಸ್​​​​ನಲ್ಲಿ ಆಡುತ್ತಿಲ್ಲ. ಈ ವಿಷಯವನ್ನು ಫ್ರಾಂಚೈಸಿಯೇ ಟ್ವೀಟ್​ ಮೂಲಕ ಖಚಿತಪಡಿಸಿದೆ. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಎಲ್‌ಪಿಎಲ್‌ನಲ್ಲಿ ಕೊಲಂಬೊ, ಕ್ಯಾಂಡಿ, ಗ್ಯಾಲೆ, ಡಂಬುಲ್ಲಾ ಮತ್ತು ಜಾಫ್ನಾ ತಂಡಗಳ ನಡುವೆ ನವೆಂಬರ್​​ 26ರಿಂದ 23 ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯ ಹಂಬಂಟೋಟಾ ಮಹಿಂದಾ ರಾಜಪಕ್ಸೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕೊಲಂಬೊ ತಂಡವು ಕ್ಯಾಂಡಿ ಟಸ್ಕರ್ಸ್ ಅನ್ನು ಎದುರಿಸಲಿದೆ. ಡಿ.13 ಮತ್ತು 14 ರಂದು ಸೆಮಿಫೈನಲ್ ಮತ್ತು ಡಿ.16 ರಂದು ಫೈನಲ್​ ಪಂದ್ಯ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.