ಮುಂಬೈ: ಐಪಿಎಲ್ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಐಪಿಎಲ್ನಲ್ಲಿ 4 ಬಾರಿ ಟ್ರೋಫಿ ಎತ್ತಿಹಿಡಿಯುವಲ್ಲಿ ನೆರವಾಗಿದ್ದ ಶ್ರೀಲಂಕಾದ ಯಾರ್ಕರ್ ಕಿಂಗ್ ಲಸಿತ್ ಮಾಲಿಂಗ ಅವರನ್ನು 2021ರ ಐಪಿಎಲ್ಗೂ ಮುನ್ನ ತಂಡದಿಂದ ಕೈಬಿಟ್ಟಿದೆ.
ಬಿಸಿಸಿಐ ಜನವರಿ 20ರಂದು ರೀಟೈನ್ ಆಟಗಾರರ ಲಿಸ್ಟ್ ಸಲ್ಲಿಸಲು ಅಂತಿಮ ದಿನವಾಗಿ ಘೋಷಿಸಿತ್ತು. ಇಂದು ಮುಂಬೈ ಇಂಡಿಯನ್ಸ್ ತನ್ನ 18 ಆಟಗಾರರನ್ನು ಉಳಿಸಿಕೊಂಡಿರುವುದಾಗಿ ತಿಳಿಸಿದ್ದು, ಲಸಿತ್ ಮಾಲಿಂಗಾ ಸೇರಿದಂತೆ ಒಟ್ಟು 7 ಆಟಗಾರರನ್ನು ಬಿಟ್ಟುಕೊಟ್ಟಿದೆ.
-
🚨 Your 1️⃣8️⃣ retained Champions for #IPL2021 🥁💙#OneFamily #MumbaiIndians pic.twitter.com/yFjNmZZu9e
— Mumbai Indians (@mipaltan) January 20, 2021 " class="align-text-top noRightClick twitterSection" data="
">🚨 Your 1️⃣8️⃣ retained Champions for #IPL2021 🥁💙#OneFamily #MumbaiIndians pic.twitter.com/yFjNmZZu9e
— Mumbai Indians (@mipaltan) January 20, 2021🚨 Your 1️⃣8️⃣ retained Champions for #IPL2021 🥁💙#OneFamily #MumbaiIndians pic.twitter.com/yFjNmZZu9e
— Mumbai Indians (@mipaltan) January 20, 2021
ಮಾಲಿಂಗ 2009ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. 2019ರವರೆಗೂ ಚಾಂಪಿಯನ್ ತಂಡದ ಪರ ಆಡಿದ್ದ ಅವರು 2020ರಲ್ಲಿ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹೊರ ಉಳಿದಿದ್ದರು. ಅವರು ಕಳೆದ ಒಂದು ವರ್ಷದಿಂದ ಯಾವುದೇ ಟೂರ್ನಿಯಲ್ಲಿ ಆಡದ ಕಾರಣ ಮುಂಬೈ ಇಂಡಿಯನ್ಸ್ ಅವರನ್ನು ಮಿನಿ ಹರಾಜಿಗೂ ಮುನ್ನ ತಂಡದಿಂದ ರಿಲೀಸ್ ಮಾಡಿದೆ. ಮಾಲಿಂಗ ಪ್ರಸ್ತುತ ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಹೊಂದಿದ್ದಾರೆ. 37 ವರ್ಷದ ಶ್ರೀಲಂಕಾದ ವೇಗಿ 170 ವಿಕೆಟ್ ಪಡೆದಿದ್ದಾರೆ.
ಮಾಲಿಂಗ ಜೊತೆಗೆ ದುಬಾರಿ ಬೆಲೆ ಆಲ್ರೌಂಡರ್ ನಾಥನ್ ಕೌಲ್ಟರ್ ನೈಲ್, ಜೇಮ್ಸ್ ಪ್ಯಾಟಿನ್ಸನ್ರನ್ನು ಹಾಲಿ ಚಾಂಪಿಯನ್ ಹೊರಹಾಕಿದೆ.
ಇದನ್ನು ಓದಿ:18 ಆಟಗಾರರನ್ನು ಉಳಿಸಿಕೊಂಡ ಸಿಎಸ್ಕೆ: ಜಾಧವ್, ಚಾವ್ಲಾ ಸೇರಿ 6 ಮಂದಿ ಔಟ್
ಮುಂಬೈ ಇಂಡಿಯನ್ಸ್ ಉಳಿಸಿಕೊಂಡ ಆಟಗಾರರು
ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕ್ರಿಸ್ ಲಿನ್, ಅನ್ಮೋಲ್ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಅನುಕಲ್ ರಾಯ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ರಾಹುಲ್ ಚಹಾರ್, ಜಯಂತ್ ಯಾದವ್, ಧವಳ್ ಕುಲಕರ್ಣಿ, ಮೊಹ್ಸಿನ್ ಖಾನ್.
-
Thank you for everything! There will always be a special place for you all in MI’s #OneFamily! 💙#MumbaiIndians pic.twitter.com/qjhMLHPTLc
— Mumbai Indians (@mipaltan) January 20, 2021 " class="align-text-top noRightClick twitterSection" data="
">Thank you for everything! There will always be a special place for you all in MI’s #OneFamily! 💙#MumbaiIndians pic.twitter.com/qjhMLHPTLc
— Mumbai Indians (@mipaltan) January 20, 2021Thank you for everything! There will always be a special place for you all in MI’s #OneFamily! 💙#MumbaiIndians pic.twitter.com/qjhMLHPTLc
— Mumbai Indians (@mipaltan) January 20, 2021
ಬಿಡುಗಡೆ ಮಾಡಿದ ಆಟಗಾರರು
ಲಸಿತ್ ಮಾಲಿಂಗ, ಮಿಚೆಲ್ ಮೆಕ್ಲೆನಗನ್, ಜೇಮ್ಸ್ ಪ್ಯಾಟಿನ್ಸನ್, ನಾಥನ್ ಕೌಲ್ಟರ್ ನೈಲ್, ಶೆರ್ಫಾನ್ ರುದರ್‌ಫೋರ್ಡ್, ದಿಗ್ವಿಜಯ್ ದೇಶ್‌ಮುಖ್, ಪ್ರಿನ್ಸ್ ಬಲ್ವಂತ್ ರೈ.
ಇದನ್ನು ಓದಿ:12 ಆಟಗಾರರನ್ನು ಉಳಿಸಿಕೊಂಡ ಆರ್ಸಿಬಿ.. ಕೈಬಿಟ್ಟವರಿಷ್ಟು____