ದುಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇಂದು ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ನಲ್ಲಿ 200ನೇ ಪಂದ್ಯವನ್ನಾಡುತ್ತಿದ್ದು, ಧೋನಿ ನಂತರ ಈ ಮೈಲುಗಲ್ಲು ತಲುಪಿದ ಮೊದಲ ಆಟಗಾರನಾಗಿದ್ದಾರೆ.
2008ರಲ್ಲಿ ಡೆಕ್ಕನ್ ಚಾರ್ಜಸ್ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ರೋಹಿತ್ ಶರ್ಮಾ, 2009ರಲ್ಲಿ ಆ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು. ನಂತರ 2011ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್ರನ್ನು ಖರೀದಿಸಿತ್ತು. ರೋಹಿತ್ ಮುಂಬೈ ತಂಡದಲ್ಲಿ ನಾಯಕನಾಗಿ 4 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದಾರೆ.
-
200th outing for @ImRo45 in IPL.
— IndianPremierLeague (@IPL) November 10, 2020 " class="align-text-top noRightClick twitterSection" data="
Will this be a memorable one?#Dream11IPL #Final pic.twitter.com/0Z9NyHJyQk
">200th outing for @ImRo45 in IPL.
— IndianPremierLeague (@IPL) November 10, 2020
Will this be a memorable one?#Dream11IPL #Final pic.twitter.com/0Z9NyHJyQk200th outing for @ImRo45 in IPL.
— IndianPremierLeague (@IPL) November 10, 2020
Will this be a memorable one?#Dream11IPL #Final pic.twitter.com/0Z9NyHJyQk
ರೋಹಿತ್ಗೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(204) ಐಪಿಎಲ್ನಲ್ಲಿ 200 ಪಂದ್ಯಗಳ ಮೈಲುಗಲ್ಲು ತಲುಪಿದ್ದರು. ಇದೀಗ ರೋಹಿತ್ ಕೂಡ ಧೋನಿ ಸಾಲಿಗೆ ಸೇರಿದ್ದಾರೆ.
ರೋಹಿತ್ ಐಪಿಎಲ್ನಲ್ಲಿ 199 ಪಂದ್ಯಗಳಿಂದ 5,162 ರನ್ ಸಿಡಿಸಿದ್ದಾರೆ. ಹಿಟ್‌ಮ್ಯಾನ್ ಐಪಿಎಲ್ ಕೆರಿಯರ್ನಲ್ಲಿ 38 ಅರ್ಧಶತಕ ಹಾಗೂ 1 ಶತಕ ಸಿಡಿಸಿದ್ದಾರೆ.