ದುಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸತತ 2ನೇ ಹಾಗೂ ಒಟ್ಟಾರೆ 5ನೇ ಪ್ರಶಸ್ತಿಗೆ ಮುತ್ತಿಕ್ಕಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 157 ರನ್ಗಳ ಸಾಧಾರಣ ಗುರಿಯನ್ನು ಮುಂಬೈ ತಂಡ 18.4 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿ 5ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.
157 ರನ್ಗಳ ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಡಿಕಾಕ್ ಮೊದಲ ವಿಕೆಟ್ಗೆ 45 ರನ್ಗಳ ಜೊತೆಯಾಟ ನೀಡಿದರು. ಡಿಕಾಕ್ 12 ಎಸೆತಗಳಲ್ಲಿ 20 ರನ್ಗಳಿಸಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್(19) ರೋಹಿತ್ ಮಾಡಿದ ಯಡವಟ್ಟಿಗೆ ರನ್ಔಟ್ ಆದರು.
ಆದರೆ ಯುವ ಆಟಗಾರ ಇಶಾನ್ ಕಿಶನ್ ಜೊತೆ ಸೇರಿದ ರೋಹಿತ್ 3ನೇ ವಿಕೆಟ್ಗೆ 47 ರನ್ ಸೇರಿಸಿದ ರೋಹಿತ್ ಪಂದ್ಯವನ್ನು ಗೆಲುವಿನ ಸನಿಹ ತಂದು ಔಟಾದರು. ಅವರು ಔಟಾಗುವ ಮುನ್ನ 51 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 68 ರನ್ಗಳಿಸಿದ್ದರು. ಇಶಾನ್ ಕಿಶನ್ 19 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 33 ರನ್ಗಳಿಸಿ ಪಂದ್ಯವನ್ನು ಗೆಲುವಿನ ಗಡಿ ದಾಟಿಸಿದರು.
-
Five time IPL CHAMPIONS @mipaltan 👏👏#Dream11IPL pic.twitter.com/tBI6xF1J2E
— IndianPremierLeague (@IPL) November 10, 2020 " class="align-text-top noRightClick twitterSection" data="
">Five time IPL CHAMPIONS @mipaltan 👏👏#Dream11IPL pic.twitter.com/tBI6xF1J2E
— IndianPremierLeague (@IPL) November 10, 2020Five time IPL CHAMPIONS @mipaltan 👏👏#Dream11IPL pic.twitter.com/tBI6xF1J2E
— IndianPremierLeague (@IPL) November 10, 2020
ಡೆಲ್ಲಿ ಪರ ಎನ್ರಿಚ್ ನೋಕಿಯೇ(ನಾರ್ಟ್ಜ್) 2, ರಬಾಡ ಮತ್ತು ಸ್ಟೋಯ್ನಿಸ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕು ಮೊದಲು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ಶ್ರೇಯಸ್ ಅಯ್ಯರ್(65) ಹಾಗೂ ಪಂತ್(56) ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 156 ರನ್ಗಳಿಸಿತ್ತು.
ಮುಂಬೈ ಪರ ಟ್ರೆಂಟ್ ಬೌಲ್ಟ್ 30 ರನ್ ನೀಡಿದ 3 ವಿಕೆಟ್ ಪಡೆದರೆ, ಕೌಲ್ಟರ್ ನೈಲ್ 29ಕ್ಕೆ 2, ಜಯಂತ್ ಯಾದವ್ 25ಕ್ಕೆ 1 ವಿಕೆಟ್ ಪಡೆದರು.