ETV Bharat / sports

'ಮುಲ್ತಾನ್ ಸುಲ್ತಾನ್ ತಂಡವನ್ನು ಪಿಎಸ್​​ಎಲ್​​ನ ವಿಜೇತ ತಂಡ ಎಂದು ಘೋಷಿಸಿ'

author img

By

Published : Mar 28, 2020, 12:26 PM IST

ಮುಲ್ತಾನ್ ಸುಲ್ತಾನ್ ತಂಡವನ್ನು ಪಾಕಿಸ್ತಾನ ಸೂಪರ್ ಲೀಗ್​ನ ವಿಜೇತ ತಂಡ ಎಂದು ಘೋಷಿಸುವಂತೆ ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.

'Multan Sultans should be declared PSL winners'
ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಮುಷ್ತಾಕ್ ಅಹ್ಮದ್

ಕರಾಚಿ: ಅಮಾನತುಗೊಳಿಸಿರುವ ಪಾಕಿಸ್ತಾನ ಸೂಪರ್ ಲೀಗ್​ನ (ಪಿಎಸ್ಎಲ್) ಟೇಬಲ್ ಟಾಪರ್ಸ್ ಮುಲ್ತಾನ್ ಸುಲ್ತಾನ್ ತಂಡವನ್ನು ವಿಜೇತ ತಂಡ ಎಂದು ಘೋಷಿಸುವಂತೆ ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಮುಷ್ತಾಕ್ ಅಹ್ಮದ್ ಸಲಹೆ ನೀಡಿದ್ದಾರೆ.

ಪಿಎಸ್‌ಎಲ್‌ನ 5ನೇ ಆವೃತ್ತಿಯನ್ನು ಮುಗಿಸುವುದು ಮುಖ್ಯವಾಗಿದೆ ಎಂದು ಮುಲ್ತಾನ್ ಸುಲ್ತಾನ ತಂಡ ಕೋಚಿಂಗ್ ಪ್ಯಾನೆಲ್‌ನಲ್ಲಿರುವ ಮುಷ್ತಾಕ್ ಹೇಳಿದ್ದಾರೆ. ಸರಿಯಾದ ರೀತಿಯಲ್ಲಿ ಪಿಎಸ್ಎಲ್ ಐದನೇ ಆವೃತ್ತಿಯನ್ನು ಮುಗಿಸಬೇಕಿದೆ. ಲೀಗ್ ಹಂತದ ಕೊನೆಯಲ್ಲಿ ಪಾಯಿಂಟ್ ಟೇಬಲ್​ನಲ್ಲಿ ಅಗ್ರ ತಂಡ ವಾಗಿರುವವರನ್ನು ವಿಜೇತರು ಎಂದು ಘೋಷಿಸಬೇಕು ಎಂದು ಹೇಳಿದ್ದಾರೆ.

52 ಟೆಸ್ಟ್ ಮತ್ತು 144 ಏಕದಿನ ಪಂದ್ಯಗಳನ್ನು ಆಡಿರುವ 49 ವರ್ಷದ ಮುಷ್ತಾಕ್ ಮತ್ತು ರಾಷ್ಟ್ರೀಯ ತಂಡದ ಬೌಲಿಂಗ್ ಕೋಚ್ ಮತ್ತು ಇಂಗ್ಲೆಂಡ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದಾರೆ.

ಪಿಸಿಬಿ, ಪಾಕಿಸ್ತಾನ ಸೂಪರ್​ ಲಿಗ್​​ನ 5ನೇ ಆವೃತ್ತಿಯನ್ನು ಸರಿಯಾದ ರೀತಿಯಲ್ಲಿ ಮುಗಿಸಬೇಕು. ಫೈನಲ್ ಸೇರಿದಂತೆ ಉಳಿದ ನಾಲ್ಕು ಅಥವಾ ಐದು ಪಂದ್ಯಗಳನ್ನು ಆಯೋಜಿಸಲು ಪ್ರಯತ್ನಿಸದಿದ್ದರೆ ಆರನೇ ಆವೃತ್ತಿಗೆ ತೊಂದರೆಯಾಗಲಿದೆ ಎಂದಿದ್ದಾರೆ. ಈ ವರ್ಷದ ಕೊನೆಯಲ್ಲಿ ಅಥವಾ ಪಿಎಸ್‌ಎಲ್ 6ರ ಮೊದಲು ಉಳಿದ ಪಂದ್ಯಗಳನ್ನು ಆಯೋಜಿಸಲು ಪಿಸಿಬಿ ನಿರ್ಧರಿಸಿದೆ. ಆ ಸಮಯದಲ್ಲಿ ಆಡಲು ಯಾವ ಆಟಗಾರರು ಲಭ್ಯವಿರುತ್ತಾರೆ ಎಂಬುದು ಸ್ಪಷ್ಟವಾಗಿಲ್ಲವಾದ್ದರಿಂದ ತಂಡಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಮುಲ್ತಾನ್ ಸುಲ್ತಾನ ತಂಡ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಹೀಗಾಗಿ ಚಾಂಪಿಯನ್ ಆಗಲು ಅರ್ಹರು ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.