ಹೈದರಾಬಾದ್: ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿ ಬಿಡುವಿನ ವೇಳೆ ತಮ್ಮ ಮಗಳು ಝೀವಾ ಜೊತೆಗೆ ಸಖತ್ ಎಂಜಾಯ್ ಮಾಡುತ್ತಾರೆ.
ಐಪಿಎಲ್ನ ಮೊದಲ ಪಂದ್ಯದ ಭರ್ಜರಿ ಗೆಲುವಿನ ಬಳಿಕ ಧೋನಿ ತಮ್ಮ ಮಗಳ ಜೊತೆಗೆ ಕೆಲ ಕಾಲ ಸಮಯ ಕಳೆದಿದ್ದಾರೆ. ಧೋನಿ ತಮ್ಮ ಮಗಳೊಂದಿಗೆ ಆರು ವಿವಿಧ ಭಾಷೆಯಲ್ಲಿ ಮಾತನಾಡಿದ್ದು ಇದಕ್ಕೆ ಅದೇ ಭಾಷೆಯಲ್ಲಿ ಝೀವಾ ಉತ್ತರ ನೀಡಿದ್ದಾಳೆ.
- " class="align-text-top noRightClick twitterSection" data="
">
ಧೋನಿ, ತಮಿಳು,ಬೆಂಗಾಲಿ,ಗುಜರಾತಿ,ಭೋಜ್ಪುರಿ,ಪಂಜಾಬಿ ಹಾಗೂ ಉರ್ದುವಿನಲ್ಲಿ ಹೇಗಿದ್ದೀಯಾ ಎಂದು ಕೇಳಿದ್ದಾರೆ. ಇದಕ್ಕೆ ಝೀವಾ ಸಮರ್ಪಕವಾಗಿ ಉತ್ತರಿಸಿದ್ದಾಳೆ.
ಧೋನಿ ಹಾಗೂ ಮಗಳು ಝೀವಾಳ ಮಾತುಕತೆ ಈ ವಿಡಿಯೋವನ್ನು ಸ್ವತಃ ಧೋನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮುದ್ದಾದ ಮಾತುಕತೆಗೆ ನೆಟಿಜನ್ಸ್ ಫುಲ್ ಫಿದಾ ಆಗಿದ್ದಾರೆ.