ಚೆನ್ನೈ: ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿಗೆ ಆಗಾಗ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ನೆಚ್ಚಿನ ಆಟಗಾರನನ್ನು ಹತ್ತಿರದಿಂದ ನೋಡಲು ಆಸೆಪಡುತ್ತಿರುತ್ತಾರೆ.
ಭಾನುವಾರ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಪಂದ್ಯ ನಡೆದಿತ್ತು. ಈ ವೇಳೆ ಧೋನಿ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ನೇರವಾಗಿ ಮೈದಾನಕ್ಕೆ ನುಗ್ಗಿದ್ದಾನೆ.
Catch Me If You Fan #AnbuDen Version! #SuperPricelessThala @msdhoni and the smiling assassin @Lbalaji55! #WhistlePodu 🦁💛 pic.twitter.com/xvqaRKp9kB
— Chennai Super Kings (@ChennaiIPL) March 17, 2019 " class="align-text-top noRightClick twitterSection" data="
">Catch Me If You Fan #AnbuDen Version! #SuperPricelessThala @msdhoni and the smiling assassin @Lbalaji55! #WhistlePodu 🦁💛 pic.twitter.com/xvqaRKp9kB
— Chennai Super Kings (@ChennaiIPL) March 17, 2019Catch Me If You Fan #AnbuDen Version! #SuperPricelessThala @msdhoni and the smiling assassin @Lbalaji55! #WhistlePodu 🦁💛 pic.twitter.com/xvqaRKp9kB
— Chennai Super Kings (@ChennaiIPL) March 17, 2019
ಅಭಿಮಾನಿ ಧೋನಿಯ ಹತ್ತಿರ ಬರುತ್ತಿದ್ದಂತೆ ಧೋನಿ ಕೆಲ ಕಾಲ ಆತನ ಕೈಗೆ ಸಿಗದೆ ಮೈದಾನದಲ್ಲಿ ಓಡಾಡಿದ್ದಾರೆ. ಮಾಜಿ ಆಟಗಾರ ಎಲ್.ಬಾಲಾಜಿ ಜೊತೆ ಸೇರಿ ಧೋನಿ ಅಭಿಮಾನಿಗೆ ಸಿಗದೆ ಓಡಾಡುತ್ತಾ ಕೆಲ ಕಾಲ ನೆರದಿದ್ದವರಿಗೆ ರಂಜಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ಸರಣಿಯಲ್ಲೂ ಧೋನಿ ಫ್ಯಾನ್ ಓರ್ವ ಮೈದಾನಕ್ಕೆ ನುಗ್ಗಿ ಧೋನಿಯನ್ನು ಅಪ್ಪಿಕೊಳ್ಳಲು ಮುಂದಾಗಿದ್ದ. ಆ ವೇಳೆಯಲ್ಲೂ ಧೋನಿ ಆತನ ಕೈಗೆ ಸಿಗದೆ ಮೈದಾನಲ್ಲಿ ಓಡಿದ್ದನ್ನು ಇಲ್ಲಿ ಸ್ಮರಿಸಬಹುದು.