ಮುಂಬೈ: 2019ರ ವಿಶ್ವಕಪ್ನಂತರ ಕ್ರಿಕೆಟ್ನಿಂದ ದೂರ ಉಳಿದಿರುವ ಭಾರತ ತಂಡದ ನಾಯಕ ಎಂಎಸ್ ಧೋನಿಯನ್ನು ಬಿಸಿಸಿಐ 2020ರ ವಾರ್ಷಿಕ ಒಪ್ಪಂದದಿಂದ ಕೈಬಿಡಲಾಗಿದೆ. ಈ ಮೂಲಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಬಹುತೇಕ ಅಂತ್ಯವಾಗಿದೆ.
ಎಂಎಸ್ ಧೋನಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಿಂದ 2014ರಲ್ಲಿ ನಿವೃತ್ತಿ ಹೊಂದಿದ್ದರು. ನಂತರ 2017ರಲ್ಲಿ ಸೀಮಿತ ಓವರ್ಗಳ ನಾಯಕತ್ವದಕ್ಕೆ 2017ರಲ್ಲಿ ರಾಜಿನಾಮೆ ನೀಡಿ ಕೇವಲ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ಇಂಗ್ಲೆಂಡ್ನಲ್ಲಿ ನಡೆದಿದ್ದ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋಲುಕಂಡ ನಂತರ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ಧೋನಿ ಹೊರಗುಳಿದಿದ್ದರು.
ಧೋನಿ ಟಿ20 ವಿಶ್ವಕಪ್ ಆಡ್ತಾರಾ, ಇಲ್ವಾ ಎನ್ನುವ ಗೊಂದಲದಲ್ಲಿರುವಾಗಲೇ ಬಿಸಿಸಿಐ ತನ್ನ ವಾರ್ಷಿಕ ಒಪ್ಪಂದದ 17 ಆಟಗಾರರ ಪಟ್ಟಿಯಿಂದ ಧೋನಿ ಹೆಸರನ್ನು ತೆಗೆದಿದೆ. ಧೋನಿ ಅಲ್ಲದೆ ಹಿರಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಅಂಬಾಟಿ ರಾಯುಡು, ಖಲೀಲ್ ಅಹ್ಮದ್ರನ್ನು ಕೂಡ ಬಿಸಿಸಿಐ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ.
ಗ್ರೇಡ್ ಎ+(7 ಕೋಟಿ): ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ
ಗ್ರೇಡ್ ಎ(5 ಕೋಟಿ ಸಂಭಾವನೆ): ಆರ್.ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಚೇತೇಶ್ವರ್ ಪುಜಾರ, ಅಜಿಂಕ್ಯಾ ರಹಾನೆ, ಕೆ.ಎಲ್.ರಾಹುಲ್, ಶಿಖರ್ ಧವನ್, ಮೊಹಮ್ಮದ್ ಶಮಿ,ಇಶಾಂತ್ ಶರ್ಮಾ,ಕುಲ್ದೀಪ್ ಯಾದವ್, ರಿಷಭ್ ಪಂತ್
ಗ್ರೇಡ್ ಬಿ- (3 ಕೋಟಿ ಸಂಭಾವನೆ) : ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಯಜುವೇಂದ್ರ ಚಹಾಲ್, ಹಾರ್ದಿಕ್ ಪಾಂಡ್ಯ. ಮಯಾಂಕ್ ಅಗರ್ವಾಲ್
C ಗ್ರೇಡ್ ಪಟ್ಟಿ (1 ಕೋಟಿ ಸಂಭಾವನೆ): ಕೇದಾರ್ ಜಾದವ್, ನವದೀಪ್ ಸೈನಿ, ದೀಪಕ್ ಚಹಾರ್, ಮನೀಷ್ ಪಾಂಡೆ, ಹನುಮ ವಿಹಾರಿ, ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್