ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಲ್ಲಿ ಬಳಕೆ ಮಾಡುತ್ತಿರುವ ಜರ್ಸಿ ನಂ.7 ಅನ್ನು ಇನ್ನು ಮಂದೆ ಬೇರೆ ಆಟಗಾರರು ಬಳಸುವಂತಿಲ್ಲ. ಈ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಂಡಿದ್ದು ವಿಶೇಷವಾಗಿದೆ.
2014ರಲ್ಲೇ ಧೋನಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದು, ಇದೀಗ ಟೆಸ್ಟ್ ಚಾಂಪಿಯನ್ಶಿಫ್ ಆರಂಭಗೊಳ್ಳುತ್ತಿರುವ ಕಾರಣ, ಅವರು ಬಳಕೆ ಮಾಡುತ್ತಿರುವ ಜರ್ಸಿ ಯಾವುದೇ ಕಾರಣಕ್ಕೂ ಇತರ ಆಟಗಾರರು ಬಳಕೆ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಆಗಸ್ಟ್ 22ರಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಡಲಿದ್ದು, ಜರ್ಸಿ ನಂ.7 ಲಭ್ಯವಿರುವ ಕಾರಣ ಕೆಲ ಆಟಗಾರರು ಈ ನಂಬರ್ ಬಳಕೆ ಮಾಡುವ ಇಚ್ಚೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇನ್ನು, ಇದೇ ಮೊದಲ ಬಾರಿಗೆ ಟೆಸ್ಟ್ನಲ್ಲಿ ಆಟಗಾರರ ಜರ್ಸಿ ಮೇಲೆ ಸಂಖ್ಯೆ ಬಳಕೆ ಮಾಡಲು ಬಿಸಿಸಿಐ ಮುಂದಾಗಿದೆ.
ಧೋನಿ ಮಾತ್ರವಲ್ಲ, ಭಾರತ ಕ್ರಿಕೆಟ್ ತಂಡದ ದಂತಕತೆ ಸಚಿನ್ ತೆಂಡುಲ್ಕರ್ ಧರಿಸುತ್ತಿದ್ದ ಜರ್ಸಿ ನಂ.10 ಬಳಸದಿರಲು ಬಿಸಿಸಿಐ ನಿರ್ಧರಿಸಿದೆ.