ETV Bharat / sports

ವಾವ್ಹ್​ ಧೋನಿ: ಪಿಚ್​​​ ರೋಲರ್​ ಡ್ರೈವ್​ ಮಾಡಿದ್ರು ಮಾಹಿ- ವಿಡಿಯೋ ವೈರಲ್​! - ಮಹೇಂದ್ರ ಸಿಂಗ್ ಧೋನಿ

ಕ್ರಿಕೆಟ್​​ನಿಂದ ಕೊಂಚ ದೂರ ಉಳಿದಿರುವ ಧೋನಿ, ಮುಂಬರುವ ಐಪಿಎಲ್​ಗಾಗಿ ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಧೋನಿ ಪಿಚ್​ ರೋಲರ್​​ ಡ್ರೈವ್​ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

MS Dhoni Driving Pitch Roller
ವಾವ್ಹ್​ ಧೋನಿ : ಪಿಚ್​​​ ರೋಲರ್​ ಡ್ರೈವ್​ ಮಾಡಿದ್ರು ಮಾಹಿ : ವಿಡಿಯೋ ವೈರಲ್​!
author img

By

Published : Feb 27, 2020, 11:16 PM IST

ಧೋನಿ ಬಹುಮುಖ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ. ಇತ್ತಿಚೆಗೆ ಭಾರತೀಯ ಸೇನೆಯಲ್ಲಿ ಕಾಣಿಕೊಂಡಿದ್ದು, ಜಮ್ಮು ಕಾಶ್ಮೀರದಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ಇದೀಗ ಕ್ರಿಕೆಟ್​​​ ಪಿಚ್​​ ಸಮ ಮಾಡುವ ಪಿಚ್​​ ರೋಲರ್​​ ಡ್ರೈವ್​​ ಮಾಡಿದ್ದಾರೆ.

ಕ್ರಿಕೆಟ್​​ನಿಂದ ಕೊಂಚ ದೂರ ಉಳಿದಿರುವ ಧೋನಿ, ಮುಂಬರುವ ಐಪಿಎಲ್​ಗಾಗಿ ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ ಧೋನಿ ಪಿಚ್​ ರೋಲರ್​​ ಡ್ರೈವ್​ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಧೋನಿ ತನ್ನ ತವರು ರಾಂಚಿಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಿಚ್ ಸಮ ಮಾಡುವ ಪಿಚ್ ರೋಲರ್ ಓಡಿಸಿದ್ದಾರೆ. ಈ ವಿಡಿಯೋವನ್ನು ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಹಾಕಿ ಒನ್​ ಮ್ಯಾನ್​​ ಡಿಫರೆಂಟ್​ ರೋಲ್ಸ್​​ ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಇನ್ನು ಇದೇ ಮಾರ್ಚ್​​ನಿಂದ ಇಂಡಿಯನ್​ ಪ್ರೀಮಿಯರ್​ ಲೀಗ್​ ನಡೆಯಲಿದ್ದು, ಧೋನಿ ಚೆನ್ನೈ ಸೂಪರ್​​ಕಿಂಗ್ಸ್​​ ತಂಡದಲ್ಲಿ ಮಿಂಚಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಸ್​​ಕೆ ಮುಖ್ಯಸ್ಥ ವಿಶ್ವನಾಥನ್​​, ಧೋನಿ ಮಾರ್ಚ್​​ 2ರಂದು ಚೆನ್ನೈಗೆ ಬರಲಿದ್ದಾರೆ. ಹಾಗೂ ಚೆನ್ನೈನಲ್ಲಿಯೇ ಕ್ರಿಕೆಟ್​ ಅಭ್ಯಾಸ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.