ನವದೆಹಲಿ : ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂಎಸ್ ಧೋನಿ ಈ ಬಾರಿಯ ಐಪಿಎಲ್ನಲ್ಲಿ ಉತ್ತಮವಾಗಿ ಆಡದಿದ್ದರೆ ಅವರು ಮುಂದಿನ ಭವಿಷ್ಯ ಕಷ್ಟವಾಗಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.
2019ರ ವಿಶ್ವಕಪ್ ಸೆಮಿಫೈನಲ್ ನಂತರ ಧೋನಿ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಮಾರ್ಚ್ನಲ್ಲಿ ಐಪಿಎಲ್ ಮೂಲಕ ರೀಎಂಟ್ರಿ ಮಾಡಲು ಬಯಸಿದ್ದರಾದರೂ ಕೋವಿಡ್-19ನಿಂದ ಐಪಿಎಲ್ ಮುಂದೂಡಲ್ಪಟ್ಟಿದ್ದರಿಂದ ಅವರು ಕ್ರಿಕೆಟ್ಗೆ ಮರಳುವುದು ತಡವಾಯಿತು. ಇದೀಗ ಸೆಪ್ಟೆಂಬರ್ 19ರಂದು ಆರಂಭವಾಗಲಿರುವ ಐಪಿಎಲ್ ಧೋನಿ ಪಾಲಿಗೆ ಕೊನೆಯ ಅವಕಾಶ ಎಂದು ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಭಾರತೀಯ ಆಯ್ಕೆಗಾರರು ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಧೋನಿ ಈ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದರೆ ಯಾವುದೇ ಭಯವಿಲ್ಲ. ಆದರೆ, ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದ್ರೆ ಅವರಿಗೆ ಭಾರತ ತಂಡದ ಬಾಗಿಲು ಮುಚ್ಚಲಿದೆ ಎಂದು ಜೋನ್ಸ್ ಹೇಳಿಕೊಂಡಿದ್ದಾರೆ.
ಆದರೆ, ಅವರು ಬಾಗಿಲು ಮುಚ್ಚದಂತೆ ನೋಡಿಕೊಳ್ಳಬೇಕು. ಈಗ ಪಡೆದಿರುವ ವಿಶ್ರಾಂತಿ ಧನಾತ್ಮಕವಾಗಿ ಬಳಸಿಕೊಳ್ಳಬೇಕು. ಆದರೆ, ಒಬ್ಬ ಹಿರಿಯ ಆಟಗಾರ ದೀರ್ಘಕಾಲದ ವಿರಾಮದ ನಂತರ ಮತ್ತೆ ಕ್ರಿಕೆಟ್ಗೆ ಮರಳುವುದು ತುಂಬಾ ಕಷ್ಟ ಎಂದು ನಾನು ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಎಂಎಸ್ ಧೋನಿ 2008ರಿಂದ ಸಿಎಸ್ಕೆ ಭಾಗವಾಗಿದ್ದಾರೆ. ಅವರು 190 ಐಪಿಎಲ್ ಪಂದ್ಯಗಳಿಂದ 4432 ರನ್ಗಳಿಸಿದ್ದಾರೆ. ಇದರಲ್ಲಿ 23 ಅರ್ಧಶತಕ ಕೂಡ ಸೇರಿದೆ. ಇನ್ನು ಇವರ ನೇತೃತ್ವದಲ್ಲಿ ಸಿಎಸ್ಕೆ 3 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. 4 ಬಾರಿ ರನ್ನರ್ ಆಪ್ ಸ್ಥಾನ ಪಡೆದಿದೆ.