ರಾಂಚಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಿಂದ ದೂರವಾಗಿದ್ದರೂ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ತುಂಬಾ ಹತ್ತಿರವಾಗುತ್ತಿದ್ದಾರೆ.
ಹೌದು, ವಿಶ್ವಕಪ್ ನಂತರ ಕ್ರಿಕೆಟ್ನಿಂದ ವಿಶ್ರಾಂತಿ ಪಡೆದಿರುವ ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ಆರ್ಮಿಯಲ್ಲಿ ಸೇವೆ ಸಲ್ಲಿಸಿ ಬಂದು, ಇದೀಗ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬ್ಯುಸಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಬಾಲ್ಯದ ಗೆಳೆಯನೊಬ್ಬನ ಹುಟ್ಟುಹಬ್ಬವನ್ನು ತಮ್ಮ ಫಾರ್ಮ್ ಹೌಸ್ನಲ್ಲಿ ಆಚರಿಸುವ ಮೂಲಕ ತಮ್ಮ ಸರಳತೆ ಪ್ರದರ್ಶಿಸಿದ್ದಾರೆ.
-
Thank you everyone for the Birthday wishes, means a lot. @msdhoni @mihir_diwakar pic.twitter.com/1xhBdfo4ro
— Seemant Lohani (@seemantlohani) November 11, 2018 " class="align-text-top noRightClick twitterSection" data="
">Thank you everyone for the Birthday wishes, means a lot. @msdhoni @mihir_diwakar pic.twitter.com/1xhBdfo4ro
— Seemant Lohani (@seemantlohani) November 11, 2018Thank you everyone for the Birthday wishes, means a lot. @msdhoni @mihir_diwakar pic.twitter.com/1xhBdfo4ro
— Seemant Lohani (@seemantlohani) November 11, 2018
ಶನಿವಾರ ರಾತ್ರಿ ರಾಂಚಿಯಲ್ಲಿರುವ ತಮ್ಮ ಫಾರ್ಮ್ ಹೌಸ್ನಲ್ಲಿ ಸ್ನೇಹಿತರೊಂದಿಗೆ ಸೇರಿ ಬಾಲ್ಯದ ಗೆಳೆಯ ಸೀಮಂತ್ ಲೊಹಾನಿ ಬರ್ತ್ಡೇ ಸೆಲಬ್ರೇಟ್ ಮಾಡಿದ್ದಾರೆ.
ತಾವು ಕ್ರಿಕೆಟರ್ ಆಗುವುದಕ್ಕೂ ಮೊದಲು ಸ್ನೇಹಿತರೊಂದಿಗೆ ಹೇಗಿದ್ದರೋ ಹಾಗೆ ಈಗಲೂ ಕೂಡ ತಾವು ದೊಡ್ಡ ಸೆಲಬ್ರಿಟಿ ಎನ್ನುವುದನ್ನ ಮರೆತು ಸ್ನೇಹಿತರ ಜೊತೆ ಸಾಮಾನ್ಯರಾಗಿ ಬೆರೆತು ಸಮಯ ಕಳೆದಿರುವುದಕ್ಕೆ ಧೋನಿ ಅಭಿಮಾನಿಗಳು ಫಿದಾ ಆಗಿದ್ದಾರೆ.